ಬೆಂಗಳೂರಿಗೆ ಹೊಸ ವರ್ಷದ ಕೊಡುಗೆ ನೀಡಿದ ನೈಋತ್ಯ ರೈಲ್ವೆ

ಬೆಂಗಳೂರು, ಜನವರಿ 05 : ನೈಋತ್ಯ ರೈಲ್ವೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಕೊಡುಗೆಯೊಂದನ್ನು ನೀಡಿದೆ. ಇದರಿಂದಾಗಿ ನೀರಿನ ಉಳಿತಾಯವಾಗಲಿದ್ದು, ಪರಿಸರ ಸಂರಕ್ಷಣೆಗೂ ಸಹಾಯಕವಾಗಲಿದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ರೈಲುಗಳನ್ನು ಸ್ವಚ್ಛಗೊಳಿಸುವ ಅತ್ಯಾಧುನಿಕ ಆಟೋಮ್ಯಾಟಿಕ್ ಯಂತ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಬೆಂಗಳೂರಲ್ಲಿ ಇಂತಹ ಯಂತ್ರ ಸ್ಥಾಪಿಸಲಾಗಿದೆ.

Automatic coach washing plant ಮೂಲಕ ಒಂದು ರೈಲನ್ನು 15 ನಿಮಿಷಗಳಲ್ಲಿ ಸ್ವಚ್ಛಗೊಳಿಸಬಹುದು. ಕಾರ್ಮಿಕರ ಮೂಲಕ ಸ್ವಚ್ಛಗೊಳಿಸುವ ಪ್ರಕ್ರಿಯೆಗೆ ಹೋಲಿಕೆ ಮಾಡಿದರೆ ಶೇ 50 ರಿಂದ 60ರಷ್ಟು ನೀರಿನ ಉಳಿತಾಯವಾಗಲಿದೆ.

Bengaluru Railway Station Gets Automatic Coach Washing Plant

24 ಬೋಗಿಗಳ ರೈಲನ್ನು ಸ್ವಚ್ಛಗೊಳಿಸಲು 1440 ಲೀಟರ್‌ಗಳಷ್ಟು ನೀರು ಬೇಕೆಂದು ಅಂದಾಜಿಸಲಾಗಿದೆ. ಒಂದು ಕೋಚ್‌ಗೆ ಸುಮಾರು 60 ಲೀಟರ್ ನೀರು ಬೇಕು. ಕಾರ್ಮಿಕರು ಸ್ವಚ್ಛಗೊಳಿಸಿದರೆ 3600 ಲೀಟರ್ ನೀರು ಬೇಕಾಗಿತ್ತು.

ಆಟೋ ಮ್ಯಾಟಿಕ್ ಯಂತ್ರಗಳ ಮೂಲಕ ರೈಲು ಗಂಟೆಗೆ 10 ಕಿ. ಮೀ. ವೇಗದಲ್ಲಿ ಸಂಚಾರ ನಡೆಸಲಿದೆ. ಹೊಸ ವರ್ಷದ ಆರಂಭದಲ್ಲಿಯೇ ನೈಋತ್ಯ ರೈಲ್ವೆ ಬೆಂಗಳೂರಿಗೆ ಈ ಕೊಡುಗೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+