ಇದು ಫಿಟ್ನೆಸ್ ಚಾಲೆಂಜ್ ಅಲ್ಲ, ಎಚ್ಡಿಕೆಗೆ ರಾಗಿಮುದ್ದೆ ಚಾಲೆಂಜ್!

Recommended Video

      ಎಚ್ ಡಿ ಕುಮಾರಸ್ವಾಮಿಗೆ ಸಿಕ್ತು ರಾಗಿ ಮುದ್ದೆ ಚಾಲೆಂಜ್ | Oneindia Kannada

      ಬೆಂಗಳೂರು, ಜೂನ್ 22: ದೇಶದಾದ್ಯಂತ ಹಮ್ ಫಿಟ್ ತೋ ಇಂಡಿಯಾ ಫಿಟ್ ಹ್ಯಾಶ್ ಟ್ಯಾಗ್ ನಲ್ಲಿ ಎಲ್ಲಲ್ಲೂ ಫಿಟ್ನೆಸ್ ಚಾಲೆಂಜ್ ನಡೆಯುತ್ತಿದ್ದರೆ, ಬೆಂಗಳೂರಿನ ಕುರುಬರಹಳ್ಳಿಯ ನಿವಾಸಿಗಳು ಮುಖ್ಯಮಂತ್ರಿಗಳಿಗೆ ಹೊಸ ಚಾಲೆಂಜ್ ಒಡ್ಡಿದ್ದಾರೆ!

      ಇದು ರಾಗಿ ಮುದ್ದೆ ಚಾಲೆಂಜ್! ಅನ್ನಭಾಗ್ಯ ಯೋಜನೆಯಡಿ ಸರ್ಕಾರ ನೀಡುವ ಅಕ್ಕಿ ಮತ್ತು ರಾಗಿ ಅದೆಷ್ಟು ಕಳಪೆ ಗುಣಮಟ್ಟದ್ದೆದ್ದರೆ ಅದರಿಂದ ಮಾಡಿದ ರಾಗಿ ಮುದ್ದೆಯನ್ನು ಮುಖ್ಯಮಂತ್ರಿಗಳು ತಿಂದರೆ, ನಾವೂ ಆ ಮುದ್ದೆಯನ್ನು ತಿನ್ನುತ್ತೇವೆ. ಒಮ್ಮೆ ತಿಂದು ನೋಡಿ ಎಂದು ಚಾಲೆಂಜ್ ಮಾಡಿದ್ದಾರೆ!

      ಸರ್ಕಾರ, ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ತಿಂಗಳಿಗೆ 15 ಕೆಜಿ ಅಕ್ಕಿ, 5 ಕೆಜಿ ರಾಗಿ ನೀಡುತ್ತಿರುವ ವಿಷಯ ಬಹುಶಃ ಎಲ್ಲರಿಗೂ ತಿಳಿದಿದೆ. ಆದರೆ ಈ ಯೋಜನೆಯ ಹೆಸರಿನಲ್ಲಿ ಕೊಡುವ ಅಕ್ಕಿ ಮತ್ತು ರಾಗಿ ಎರಡೂ ತೀರಾ ಕಳಪೆ ಗುಣಮಟ್ಟದ್ದಾಗಿವೆ.

      Bengaluru: Ragimudde challenge to HD Kumarswamy!

      ಈ ಕಳಪೆ ಗುಣಮಟ್ಟದ ರಾಗಿಯಿಂದ ರಾಗಿಮುದ್ದೆ ಮಾಡಿದರೆ ತಿನ್ನುವುದಕ್ಕೂ ಸಾಧ್ಯವಿಲ್ಲ. ಅಕಸ್ಮಾತ್ ಈ ರಾಗಿಮುದ್ದೆಯನ್ನು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಚಾಮರಾಜಪೇಟೆ ಕ್ಷೇತ್ರದ ಶಾಸಕ, ವಕ್ಫ್ ಸಚಿವ ಜಮೀರ್ ಅಹ್ಮದ್ ತಿನ್ನುವುದಾದರೆ ನಾವೂ ಈ ಮುದ್ದೆಯನ್ನು ತಿನ್ನುತ್ತೇವೆ ಎಂದು ಮುಖ್ಯಮಂತ್ರಿ ಮತ್ತು ಸಚಿವರಿಗೆ ಕುರುಬರಹಹಳ್ಳಿಯ ಜನರು ಚಾಲೆಂಜ್ ಎಸೆದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+