Bengaluru Power Cut: ಇಂದು ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ, ಸಮಯ-ವಿವರ
ಬೆಂಗಳೂರು, ಜನವರಿ 24: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ನಗರ ವ್ಯಾಪ್ತಿಯಲ್ಲಿ ಇಂದು ಶುಕ್ರವಾರ (ಜನವರಿ 24) ವಿದ್ಯುತ್ ಲೈನ್ ನಿರ್ವಹಣೆ ಕಾಮಕಾರಿ ಕೆಲಸ ಆರಂಭಿಸಲಿದೆ. ಈ ಸಂಬಂಧ ನಗರ ಕೆಲವು ಬಡಾವಣೆಗಳಲ್ಲಿ ಬೆಳಗ್ಗೆ 10.30 ಗಂಟೆಯಿಂದ ಸಂಜೆ 04ಗಂಟೆವವರೆಗೆ ವಿದ್ಯುತ್ ಸರಬರಾಜಿನಲ್ಲಿ ಅಡಚರಣೆ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) 220/66/11 ಕೆವಿ ಸರ್ಜಾಪುರ ಎಂಯುಎಸ್ಎಸ್ ವಿದ್ಯುತ್ ಸರಬರಾಜು (ಮುಖ್ಯ ಉಪಕೇಂದ್ರ) ದಲ್ಲಿ ಎರಡು ಗೋಪುರಗಳ ಮಧ್ಯೆ ಐಎಫ್‌ಟಿಐಎಸ್ ಕಂಡಕ್ಟರ್‌ಗಳ ಸ್ಟ್ರಿಂಗ್ ನಿರ್ವಹಿಸಲಾಗುತ್ತಿದೆ. ಹೀಗಾಗಿ ತುರ್ತು ನಿರ್ವಹಣೆ ಕೆಲಸ ನಡೆಸಲಾಗುತ್ತಿದೆ. ಈ ಪ್ರಯುಕ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಉದ್ದೇಶಿತ ಸ್ಥಳದ ನಿವಾಸಿಗಳು ಇಂದು ವಿದ್ಯುತ್ ಸರಬರಾಜು ನೋಡಿಕೊಂಡು ತಮ್ಮ ದಿನವನ್ನು ಅನುಗುಣವಾಗಿ ಬದಲಾಯಿಸಿಕೊಳ್ಳಬೇಕು ಎಂದು ಬೆಸ್ಕಾಂ ಮನವಿ ಮಾಡಿಕೊಂಡಿದೆ.

ವಿದ್ಯುತ್ ಕಡಿತದ ಪ್ರದೇಶಗಳ ವಿವರ
ಬೆಂಗಳೂರು ಹೊರವಲಯದ ದಾಬಾಸ್‌ಪೇಟೆ, ಅಗಲಕುಪ್ಪೆ ಜಿಪಿಯ ಒಂದು ಭಾಗ ಮತ್ತು ಸೋಂಪುರ ಜಿಪಿ ಮತ್ತು ನರಸಿಪುವಾರ ಜಿಪಿ ಲಿಮ್ಟ್‌ಗಳ ಪ್ರದೇಶಗಳು, ಹೊನ್ನೇನಹಳ್ಳಿ ಜಿಪಿ ಪ್ರದೇಶಗಳು ಮತ್ತು ಶಿವಗಂಗೆ ಸುತ್ತಮುತ್ತಲಿನ ಪ್ರದೇಶಗಳು, ಹುಣಸನಹಳ್ಳಿ, ಬಣಗಹಳ್ಳಿ, ನರಕಲಹಳ್ಳಿ, ಮಾಲ್ಡೆಪಲ್ಲಿ, ಯೆಲ್ದೂರು ಸೇರಿದಂತೆ ಮುಂತಾದ ಭಾಗಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಬೆಸ್ಕಾಂ ಗ್ರಾಹಕರು ಅಥವಾ ಸಹಾಯವಾಣಿಗೆ 1912ಗೆ ಕರೆ ಮಾಡುವಂತೆ ಬೆಸ್ಕಾಂ ಕೋರಿದೆ. ಕಳೆದ ಕೆಲವು ದಿನಗಳಿಂದ ಬೆಸ್ಕಾಂ ವ್ಯಾಪ್ತಿಯ ಒಂದಲ್ಲ ಒಂದು ವಿದ್ಯುತ್ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ನಿರ್ವಹಣಾ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಆಗಾಗ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಕೊರತೆ/ವ್ಯತ್ಯಯ ಉಂಟಾಗುತ್ತಿದೆ.












Click it and Unblock the Notifications