Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ..

Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಇದೀಗ ಸೆಪ್ಟೆಂಬರ್ 03ರ ಗುರುವಾರ ಬೆಂಗಳೂರಿನ ಹಲವು ಭಾಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಕಡಿತ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ, ಸಮಯ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ 66/11ಕೆವಿ, ಎಚ್‌ಬಿಆರ್‌ ಲೇಔಲ್‌ನಿಂದ ಸರಬರಾಜು ಮಾಡಲಾಗುವ ಕೆಲ ಪ್ರದೇಶಗಳಲ್ಲಿ ಗುರುವಾರ (ಸೆಪ್ಟೆಂಬರ್ 3) ಮಧ್ಯಾಹ್ನ 12ರಿಂದ ಸಂಜೆ 4 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

Bengaluru Power Cut Power Outage in These Areas on September 03 2026 Monday Know complete details

ಗುರುವಾರ ಎಲ್ಲೆಲ್ಲಿ ಕರೆಂಟ್ ಕಟ್‌?

ಎಚ್‌ಬಿಆರ್‌ 2 ಮತ್ತು 3ನೇ ಬ್ಲಾಕ್‌, ಯಾಸಿನ್‌ ನಗರ, ಟೀಚರ್ಸ್‌ ಕಾಲೊನಿ, ಕೃಷ್ಣಾ ರೆಡ್ಡಿ ಲೇಔಟ್‌, ಇನಾಯತ್‌ ನಗರ, ಗಣೇಶ ದೇವಸ್ಥಾನ ರಸ್ತೆ, ಕೆಜಿ ಹಳ್ಳಿ, ವಿನೋಭಾ ನಗರ, ಲಿಡ್ಕರ್‌ ಕಾಲೊನಿ, ಜಲ ವಾಯು ವಿಹಾರ್‌, ಕಮ್ಮನಹಳ್ಳಿ ಮುಖ್ಯ ರಸ್ತೆ, ರಾಮಯ್ಯ ಲೇಔಟ್‌, ಕೀರ್ತಿ ಲೇಔಟ್‌, ಲಿಂಗರಾಜಪುರ ಗ್ರಾಮ, ಜಾನಕಿರಾಮ್‌ ಲೇಔಟ್‌, ಬಿಡಿಎ ಲೇಔಟ್‌ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.

ಗೋವಿಂದಪುರ ಮುಖ್ಯ ರಸ್ತೆ, ರಶಾದ್‌ ನಗರ, ಟೆಲಿಕಾಂ ಲೇಔಟ್‌, ಪ್ರಕೃತಿ ಲೇಔಟ್‌, ಎಚ್‌ಬಿಆರ್‌ ಅರ್ಕಾವತಿ ಲೇಔಟ್‌, ಹೆಣ್ಣೂರು, ನಾಗದೇವಿ ಇಂಡಸ್ಟ್ರೀಸ್‌, ಎಚ್‌ಬಿಆರ್‌ 3ನೇ ಬ್ಲಾಕ್‌, ನೆಹರು ರಸ್ತೆ, ಮಂಗಳಾ ಲೇಔಟ್‌, ಆಯಿಲ್‌ ಮಿಲ್‌ ರಸ್ತೆ, ಎಚ್‌ಬಿಆರ್‌ ಲೇಔಟ್‌ 5ನೇ ಬ್ಲಾಕ್‌, 1ನೇ ಬ್ಲಾಕ್‌ ಎಚ್‌ಬಿಆರ್‌, ನೆಹರು ರಸ್ತೆ, ಆಯಿಲ್‌ ಮಿಲ್‌ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಬಿಎಂಟಿಸಿ ನೆಹರು ರಸ್ತೆ, ಕಮ್ಮನಹಳ್ಳಿ ಮುಖ್ಯ ರಸ್ತೆ, ಎಕೆ ಕಾಲೊನಿ, ಸಂಗೊಳ್ಳಿ ರಾಯಣ್ಣ ರಸ್ತೆ, ಇಂದ್ರ ಸ್ಟ್ರೀಟ್‌, ಥಾಮಸ್‌ ರಸ್ತೆ, ಕಮ್ಮನಹಳ್ಳಿ, ಬಿಆರ್‌ 2ನೇ ಬ್ಲಾಕ್‌, ಸಿಎಂಆರ್‌ ರಸ್ತೆ, ನಾಗವಾರ ಮುಖ್ಯ ರಸ್ತೆ, ಎಚ್‌ಬಿಆರ್‌ ಸಿಗ್ನಲ್‌ ರಸ್ತೆ, ಬಿ.ಬಿ.ಆರ್‌. ನಗರ, ಕಾವೇರಿ ನಗರ, ಶಿರಿಡಿ ಸಾಯಿ ನಗರ, ಬಿಡಿಎಸ್‌ ನಗರ, ನಂದ ಗೋಕುಲ ಲೇಔಟ್‌, ಸಾರಾಯಿಪಾಳ್ಯ, ವಿನಾಯಕ ನಗರ, ಅಶ್ವಥ್‌ ನಗರ, ಅನಾಮಿಕ ಎನ್‌ಕ್ಲೇವ್‌, ಟೆಲಿಕಾಂ ಲೇಔಟ್‌, ಥಣಿಸಂದ್ರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ಉಂಟಾಗಲಿದೆ ಎಂದು ತಿಳಿಸಿದೆ. ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಬೆಸ್ಕಾಂನಿಂದ ಮಹತ್ವದ ಸಲಹೆ

ಕಾಮಗಾರಿಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಮಗಿದರೆ, ವಿದ್ಯುತ್ ಸರಬರಾಜನ್ನು ಮರುಸ್ಥಾಪಿಸಲಾಗುವುದು. ಸಾರ್ವಜನಿಕರು ಮೊಬೈಲ್, ಬ್ಯಾಟರಿ, ಲ್ಯಾಪ್‌ಟಾಪ್‌ ಸೇರಿದಂತೆ ವಿದ್ಯುತ್‌ಗೆ ಸಂಬಂಧಿತ ಉಪಕರಣಗಳನ್ನು ಮುಂಜಾಗ್ರತಾ ಕ್ರಮವಾಗಿ ಮುಂಚಿತವಾಗಿ ಚಾರ್ಜ್ ಮಾಡಿಟ್ಟುಕೊಳ್ಳುವುದು ಉತ್ತಮ. ಸಾರ್ವಜನಿಕರು ಸಹಕರಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿಗೆ ಸಂಪರ್ಕಿಸಬಹುದು ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+