Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಜುಲೈ 26ರ ಭಾನುವಾರ ವಿದ್ಯುತ್ ವ್ಯತ್ಯಯ
Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಇದೀಗ ಜುಲೈ 26ರ ಭಾನುವಾರ ಬೆಂಗಳೂರಿನ ಹಲವು ಭಾಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಕಡಿತ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ, ಸಮಯ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
66/11 ಕೆ.ವಿ. ಸಿ ಸ್ಟೇಷನ್‍ನಲ್ಲಿ ಈ ತುರ್ತು ಕಾಮಗಾರಿಗಳನ್ನು ಕೈಗೊಳ್ಳುವ ಹಿನ್ನೆಲೆ ನಗರದ ಈ ಭಾಗಗಳಲ್ಲಿ ಭಾನುವಾರ ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ಶಿವಾಜಿನಗರ, ವಸಂತನಗರ, ಕ್ಯಾಂಟೋನ್ಮೆಂಟ್, ಪುಲಿಕೇಶಿನಗರ ಸೇರಿದಂತೆ ಸುತ್ತಮುತ್ತಲಿನ ನೂರಕ್ಕೂ ಹೆಚ್ಚು ರಸ್ತೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಬೆಸ್ಕಾಂನಿಂದ ಮಹತ್ವದ ಸಲಹೆ
ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆಯೋ ಅಂತಹ ಪ್ರದೇಶಗಳ ನಿವಾಸಿಗಳು ಮುಂಚಿತವಾಗಿ ಮೊಬೈಲ್ ಫೋನ್, ಲ್ಯಾಪ್‌ಟಾಪ್, ಬ್ಯಾಟರಿ ಸೇರಿದಂತೆ ಇನ್ನಿತರೆ ಚಾರ್ಜಿಂಗ್ ಸಾಧನಗಳನ್ನು ಜಾರ್ಜ್ ಮಾಡಿಟ್ಟುಕೊಳ್ಳುವುದು ಉತ್ತಮ ಎಂದು ಮಹತ್ವದ ಸಲಹೆ ನೀಡಿದೆ. ಹೀಗೆ ವಿದ್ಯುತ್ ಪೂರೈಕೆ ವ್ಯತ್ಯಯ ಆಗುವ ಸ್ಥಳಗಳಲ್ಲಿ ಒಂದು ದಿನದ ಮುಂಚಿತವಾಗಿ ಈ ಸಲಹೆಯನ್ನು ನೀಡುತ್ತಲೇ ಬಡುತ್ತಿದೆ. ಅಲ್ಲದೆ ಸಾರ್ವಜನಿಕರು ಹೆಚ್ಚಿನ ಮಾಹಿತಿಹಾಗಿ ಸಹಾಯವಾಣಿಗೆ ಕರೆ ಮಾಡಬಹುದು ಅಂತಲೂ ತಿಳಿಸುತ್ತಲಿರುತ್ತದೆ.
ಶನಿವಾರ ಎಲ್ಲೆಲ್ಲಿ ಕರೆಂಟ್ ಕಟ್?
ಇನ್ನೂ ಶನಿವಾರ (ಜುಲೈ 25) ನಗರದ ಹಲವು ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 66/11 ಕೆ.ವಿ ಎಸ್‌ಆರ್‌ಟಿ, ವಿಕ್ಟೋರಿಯಾ, ಬ್ಯಾಡರಹಳ್ಳಿ ಹಾಗೂ ತಾವರೆಕೆರೆ ವಿದ್ಯುತ್ ಕೇಂದ್ರಗಳ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ತಿಳಿದುಬಂದಿದೆ.
ಸಿಟಿ ಮಾರ್ಕೆಟ್, ಅವಿನ್ಯೂ ರಸ್ತೆ, ಬಿ.ವಿ.ಕೆ. ಅಯ್ಯಂಗಾರ್ ರಸ್ತೆ, ಆರ್‌ಟಿ ಸ್ಟ್ರೀಟ್, ಸಿಟಿ ಸ್ಟ್ರೀಟ್, ಚಿಕ್ಕಪೇಟೆ, ನಗರ್ಥಪೇಟೆ, ಎಸ್.ಪಿ. ರಸ್ತೆ, ಟೌನ್ ಹಾಲ್, ಜೆ.ಸಿ. ರಸ್ತೆ, ಮಿನರ್ವಾ ಸರ್ಕಲ್, ಕೆ.ಜಿ. ರಸ್ತೆ, ಗಾಂಧಿನಗರ, ಮೈಸೂರು ರಸ್ತೆ, ಪೊಲೀಸ್ ವಸತಿಗೃಹ, ಗೋರಿಪಾಳ್ಯ, ಬಿನ್ನಿಪೇಟೆ, ನ್ಯೂ ತರಗುಪೇಟೆ, ಚಾಮರಾಜಪೇಟೆ, ಎ.ಎಂ. ರಸ್ತೆ, ಕಲಾಲಿಪಾಳ್ಯ, ವಿಕ್ಟೋರಿಯಾ ಆಸ್ಪತ್ರೆ, ಕಿಮ್ಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಕಟ್ಟಾಗಲಿದೆ ಎಂದು ತಿಳಿಸಿದೆ.
ನ್ಯೂ ಕೆ.ಹೆಚ್.ಬಿ ಕಾಲೋನಿ, ಬಂಡೇಮಠ, ಕೆ.ಎಸ್.ಆರ್‌ಟಿ, ಕೆ.ಹೆಚ್.ಬಿ, ಅರುಂಧತಿನಗರ, ಶೀರ್ಕೆ, ಹೊಯ್ಸಳ ಸರ್ಕಲ್, ಸಚ್ಚಿದಾನಂದನಗರ, ವಲೇಗರಹಳ್ಳಿ, ಚಿಕ್ಕನಹಳ್ಳಿ, ಸರ್.ಎಂ.ವಿ. ಲೇಔಟ್, ಜ್ಞಾನಭಾರತಿ ಲೇಔಟ್, ಕೋಡಿಗೇಹಳ್ಳಿ, ಕೆನ್ನಹಳ್ಳಿ, ಸೀಗೇಹಳ್ಳಿ, ಬಿಎಎಮ್‌ಎಲ್ ಲೇಔಟ್, ಮಾಗಡಿ ಮೇನ್ ರೋಡ್, ಅಂಜನಾನಗರ, ಅಂಬೇಡ್ಕರ್ ನಗರ, ಮಾರುತಿನಗರ, ಚೊಕ್ಕಸಂದ್ರ, ನಗದೆವನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ ಎಂದು ತಿಳಿಸಿದೆ.
ತಾವರೆಕೆರೆ, ಜಟ್ಟಿಕಾವಲು, ಚನ್ನೇನಹಳ್ಳಿ, ಯರಪ್ಪ ಇಂಡಸ್ಟ್ರಿಯಲ್ ಏರಿಯಾ, ಗಿಡ್ಡದಪಾಳ್ಯ, ಹುನಗನಹಟ್ಟಿ, ಗಾಣಕಲ್ ಇಂಡಸ್ಟ್ರಿಯಲ್ ಏರಿಯಾ, ಬಸವನಪಾಳ್ಯ, ವಟೂರು, ಮೆಟಿಪಾಳ್ಯ ಹಾಗೂ ಗಂಗೇನಹಳ್ಳಿ, ಬ್ಯಾಡರಹಳ್ಳಿ, ಅಂಜನಾನಗರ, ಬಿಎಎಮ್‌ಎಲ್ ಲೇಔಟ್, ಗಿಡ್ಡದಕೋನೇನಹಳ್ಳಿ, ಮುದ್ದಿನಪಾಳ್ಯ, ಹೆಗ್ಗಡದೇವನಪುರ, ಭವಾನಿ ಲೇಔಟ್, ಬಾಲಾಜಿ ಲೇಔಟ್, ಹೆಗ್ಗನಹಳ್ಳಿ, ತುಂಗಾನಗರ, ಕೆಂಪೇಗೌಡನಗರ, ಹೊಸಹಳ್ಳಿ, ಸುಂಕದಕಟ್ಟೆ ಇಂಡಸ್ಟ್ರಿಯಲ್ ಏರಿಯಾ, ನಾಗರಹೊಳೆನಗರ, ಸಂಜೀವಿನಿ ನಗರ ಸೇರಿದಂತೆ ನಗರದ ಪ್ರಮುಖ ನಗರಗಳಲ್ಲಿ ಕರೆಂಟ್ ಆಗಿದೆ ಎಂದು ತಿಳಿದುಬಂದಿದೆ.


Click it and Unblock the Notifications
