ವೆಂಕಟರಿಗಿ ಕೋಟೆ ಎಂಬ ಲ್ಯಾಪ್ ಟಾಪ್ ಚೋರ್ ಬಜಾರ್ ರಹಸ್ಯ ಬಯಲು
ಬೆಂಗಳೂರು,
ಜನವರಿ 29: ಪ್ರತಿ ಮನೆ ಯಲ್ಲೂ ಲ್ಯಾಪ್ ಟಾಪ್‌ಗಳ ರಾಶಿ..! ಕೇವಲ ಹತ್ತು ಸಾವಿರ ಕೊಟ್ಟರೆ ಐಟೆಕ್ ಲ್ಯಾಪ್ ಟಾಪ್ ಸಿಗುತ್ತೆ. ಇಲ್ಲಿ ಪ್ರತಿ ಮನೆಗೊಬ್ಬ ಕಳ್ಳ ಸಿಗ್ತಾನೆ ! ಪೊಲೀಸರು ಈ ಚೋರ್ ಬಜಾರ್ ಗೆ ಕಾಲಿಟ್ಟಾಗ ಸಿಕ್ಕಿದ್ದು ಬರೋಬ್ಬರಿ 90 ಲ್ಯಾಪ್‌ಟಾಪ್ ! id="toptextpromo"> id='are-slot-1' class='oiad oi-axt oiadv'>ಇದು
ನೆರೆಯ ವೆಂಕಟಗಿರಿಕೋಟೆ ಎಂಬ ಲ್ಯಾಪ್‌ಟಾಪ್ ಚೋರ್ ಬಜಾರ್ ನ ಅಸಲಿ ಕಥೆ. ರವಿ ಅಲಿಯಾಸ್ ಗುಗ್ಗು ಎಂಬ ಕಳ್ಳನನ್ನು ಬಂಧಿಸಿರುವ ಮಾರತ್ ಹಳ್ಳಿ ಪೊಲೀಸರು, ಆತ ನೀಡಿದ ಮಾಹಿತಿ ಮೇರೆಗೆ ವೆಂಕಟಗಿರಿ ಕೋಟೆ ಎಂಬ ಲ್ಯಾಪ್‌ಟಾಪ್ ಕಳ್ಳ ಬಜಾರ್ ನ್ನು ಪತ್ತೆ ಮಾಡಿದ್ದಾರೆ. ಹದಿನಾಲ್ಕು ಮಂದಿ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಒಬ್ಬ ಕಳ್ಳನಿಂದಲೇ ಬರೋಬ್ಬರಿ 90 ಲ್ಯಾಪ್‌ಟಾಪ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. id='are-slot-2' class='oiad oi-axt oiadv'>
ಲ್ಯಾಪ್‌ಟಾಪ್ ಮಾಯ
ಐಟಿ ಉದ್ಯೋಗಿಗಳೇ ಹೆಚ್ಚಾಗಿರುವ ಮಾರತಹಳ್ಳಿ ಸುತ್ತಮುತ್ತ ಪಿಜಿಗಳಲ್ಲಿ ಲ್ಯಾಪ್‌ಟಾಪ್ ಕಳ್ಳತನವಾಗುತ್ತಿದ್ದವು. ಎಚ್‌ಎಸ್‌ಆರ್ ಲೇಔಟ್ ಸೇರಿದಂತೆ ಐಟಿ ಉದ್ಯೋಗಿಗಳು ಇರುವ ಪಿಜಿಗಳಲ್ಲಿ ಹಾಗೂ ಬ್ಯಾಚುಲರ್ಸ್ ಕೊಠಡಿಗಳಲ್ಲಿ ಲ್ಯಾಪ್ ಟಾಪ್ ಕಳ್ಳತನವಾಗುತ್ತಿದ್ದ ಬಗ್ಗೆ ಅನೇಕ ದೂರುಗಳು ದಾಖಲಾಗುತ್ತಿದ್ದವು. ಪೊಲೀಸರು ಇದರ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಂಡಿಲ್ಲ. ಇತ್ತೀಚೆಗೆ ರವಿ ಅಲಿಯಾಸ್ ಗುಗ್ಗು ಎಂಬಾತ ಲ್ಯಾಪ್‌ಟಾಪ್ ಕದ್ದು ಸಿಕ್ಕಿಬಿದ್ದಿದ್ದ. ವಿಚಾರಣೆ ನಡೆಸಿದಾಗ ಆತ ಆಂಧ್ರ ಪ್ರದೇಶದ ವೆಂಕಟಗಿರಿ ಕೋಟೆ ನಿವಾಸಿ ಎಂದು ಗೊತ್ತಾಗಿತ್ತು. ಆತ ನೀಡಿದ ಮಾಹಿತಿ ಕೇಳಿ ಪೊಲೀಸರೇ ಬೆಚ್ಚಿ ಬಿದ್ದಿದ್ದರು.

ಆಪರೇಷನ್ ಲ್ಯಾಪ್‌ಟಾಪ್
ಬೆಂಗಳೂರಿನ ಪಿಜಿ ಟಾರ್ಗೆಟ್ ಮಾಡಿ ಲ್ಯಾಪ್ ಟಾಪ್ ಕದಿಯುವ ಹದಿನೈದು ಮಂದಿ ಕಳ್ಳರ ಗ್ಯಾಂಗ್ ಸಕ್ರಿಯವಾಗಿದೆ. ಎಲ್ಲರೂ ಇದೇ ವೆಂಕಟಗಿರಿ ಕೋಟೆಯವರು. ಎಲ್ಲರೂ ಒಟ್ಟಾಗಿ ಬರುತ್ತಾರೆ. ಟಿನ್ ಫ್ಯಾಕ್ಟರಿ ಬಳಿ ಬಂದು ಇಳಿಯುತ್ತಾರೆ. ನಂತರ ಒಬ್ಬೊಬ್ಬರು ಒಂಟಿಯಾಗಿ ಹೋಗಿ ಪಿಜಿಗಳಲ್ಲಿ ಲ್ಯಾಪ್‌ಟಾಪ್ ಕದ್ದು ಎಸ್ಕೇಪ್ ಆಗುತ್ತಾರೆ. ಅಪ್ಪಿ ತಪ್ಪಿ ಒಬ್ಬ ಬರಲಿಲ್ಲ ಎಂದರೂ ಎಲ್ಲರೂ ಎಚ್ಚೆತ್ತು ಬೆಂಗಳೂರು ಖಾಲಿ ಮಾಡುತ್ತಿದ್ದರು. ಹದಿನೈದು ಕಳ್ಳರಲ್ಲಿ ಒಬ್ಬ ಕೂಡ ಮೊಬೈಲ್ ಬಳಸುತ್ತಿರಲಿಲ್ಲ. ಯಾರಾದರೂ ಸಂಶಯಗೊಂಡರು ಅನಾಥಾಶ್ರಮದ ಹೆಸರಿನಲ್ಲಿ ಚಾರಿಟಿ ಸಂಗ್ರಹಿಸಲು ಬಂದಿರುವುದಾಗಿ ದಾರಿ ತಪ್ಪಿಸುತ್ತಿದ್ದರು. ಹೀಗೆ ಬೆಂಗಳೂರಿನ ಪಿಜಿಗಳಲ್ಲಿ ಲ್ಯಾಪ್ ಟಾಪ್ ಕದ್ದು ಸಂಜೆಯಾಗುತ್ತಿದ್ದಂತೆ ಪರಾರಿಯಾಗುತ್ತಿದ್ದರು.

ಚೋರ್ ಬಜಾರ್
ಇತ್ತೀಚೆಗೆ ರಮೇಶ್ ಅಲಿಯಾಸ್ ಗುಗ್ಗು ಎಂಬ ಕಳ್ಳ ಲ್ಯಾಪ್ ಟಾಪ್ ಕಳ್ಳ ಸಿಕ್ಕಿಬಿದ್ದಿದ್ದ. ವಿಚಾರಣೆ ನಡೆಸಿದಾಗ ವೆಂಕಟಗಿರಿಯ ಕೋಟೆ ಲ್ಯಾಪ್‌ಟಾಪ್ ಟಾಪ್ ರಹಸ್ಯದ ಬಗ್ಗೆ ಬಾಯಿ ಬಿಟ್ಟಿದ್ದ. ಈತ ನೀಡಿದ ಮಾಹಿತಿ ಆಧಾರದ ಮೇಲೆ, ಮಾರತಹಳ್ಳಿ ಪೊಲೀಸರು ವೆಂಕಟಗಿರಿ ಕೋಟೆಗೆ ಭೇಟಿ ನೀಡಿದ್ದಾರೆ. ಕಳ್ಳರ ಮನೆಗಳಿಗೆ ಭೇಟಿ ನೀಡಿದಾಗ ಪೊಲೀಸರ ದಂಗಾಗಿದ್ದಾರೆ. ಪ್ರತಿ ಮನೆಯಲ್ಲೂ ರಾಶಿಗಟ್ಟಲೇ ಲ್ಯಾಪ್ ಟಾಪ್ ಗಳು ಬಿದ್ದಿರುವುದು ಬೆಳಕಿಗೆ ಬಂದಿದೆ. ಎಲ್ಲವನ್ನೂ ವಿಡಿಯೋ ಮಾಡಿಕೊಂಡಿರುವ ಪೊಲೀಸರು ಅವನ್ನು ವಶಕ್ಕೆ ಪಡೆದಿದ್ದಾರೆ. ಅಚ್ಚರಿ ಏನೆಂದರೆ, ಪೊಲೀಸರು ವೆಂಕಟಗಿರಿ ಕೋಟೆಗೆ ಕಾಲಿಡುತ್ತಿದ್ದಂತೆ ಹದಿನಾಲ್ಕು ಆರೋಪಿಗಳು ಪೊಲೀಸರ ಕೈಗೆ ಸಿಗದಂತೆ ತಪ್ಪಿಸಿಕೊಂಡಿದ್ದಾರೆ.

ಮಾಹಿತಿದಾರ ಹೊರಕ್ಕೆ
ಇಡೀ ಊರಿನಲ್ಲಿರುವ ಬಹುತೇಕ ಯುವಕರು ಇದೇ ರೀತಿಯ ಲ್ಯಾಪ್‌ಟಾಪ್ ಕಳ್ಳತನದಲ್ಲಿ ಪಾಲ್ಗೊಂಡಿದ್ದಾರೆ. ಕದ್ದ ಲ್ಯಾಪ್ ಟಾಪ್‌ಗಳನ್ನು ಕೇವಲ ಹತ್ತು ಸಾವಿರಕ್ಕೆ ಮಾರಾಟ ಮಾಡುತ್ತಾರೆ. ಇದು ನೆರೆಯ ಆಂಧ್ರದಲ್ಲಿ ಫೇಮಸ್ ಆಗಿ, ಲ್ಯಾಪ್ ಟಾಪ್ ಖರೀದಿಸಲೆಂದೇ ಕೆಲವರು ವೆಂಕಟಗಿರಿಕೋಟೆಗೆ ಹೋಗುತ್ತಾರೆ. ಅಚ್ಚರಿ ಏನೆಂದರೆ ಇಲ್ಲಿನ ಕಳ್ಳರ ಬಗ್ಗೆ ಮಾಹಿತಿ ನೀಡುವ ಮಾಹಿತಿದಾರನನ್ನು ಗ್ರಾಮಸ್ಥರೇ ಹೊರಗೆ ಹಾಕಿದ್ದಾರೆ. ಈತನಿದ್ದರೆ ಪೊಲೀಸರಿಗೆ ಮಾಹಿತಿ ನೀಡುತ್ತಾನೆ ಎಂಬ ಕಾರಣಕ್ಕೆ ಮಾಹಿತಿದಾರನನ್ನು ಹೊರ ಹಾಕಿದ್ದಾರೆ. ಇನ್ನು ಸ್ಥಳೀಯ ಪೊಲೀಸರು ಕೂಡ ವೆಂಕಟಗಿರಿ ಕೋಟೆಗೆ ಎಂಟ್ರಿ ಕೊಡಲು ಆಗಿಲ್ಲ. ಆದರೆ, ಮಾರತಹಳ್ಳಿ ಪೊಲೀಸರು ಮನೆಗಳಿಗೆ ನುಗ್ಗಿ ಕದ್ದಿದ್ದ ಲ್ಯಾಪ್ ಟಾಪ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ನೀಡಿದ ಮಾಹಿತಿ ಆಧರಿಸಿ ತಲೆ ಮರೆಸಿಕೊಂಡಿರುವ ಹದಿನಾಲ್ಕು ಮಂದಿಗಾಗಿ ಶೋಧ ನಡೆಸುತ್ತಿದ್ದಾರೆ.












Click it and Unblock the Notifications