ದಂಡ ಮೊತ್ತ ಹೆಚ್ಚಿಸಿ ಶಾಕ್ ಕೊಟ್ಟ ಬೆಂಗಳೂರು ಸಂಚಾರಿ ಪೊಲೀಸ್

Recommended Video

      ವೀಲಿ ಮಾಡುವವರಿಗೆ ಖಡಕ್ ವಾರ್ನಿಂಗ್ ! | Oneindia Kannada

      ಬೆಂಗಳೂರು, ಸೆಪ್ಟೆಂಬರ್ 20 : ಬೆಂಗಳೂರು ಸಂಚಾರಿ ಪೊಲೀಸರು ಬೈಕ್‌ ಸವಾರರಿಗೆ ದಂಡ ಏರಿಕೆಯ ಶಾಕ್ ನೀಡಿದ್ದಾರೆ. ಡೇಂಜರಸ್ ಸ್ಟೆಂಟ್, ವ್ಹೀಲಿಂಗ್ ಮಾಡಿದರೆ ಭಾರಿ ದಂಡ ವಿಧಿಸುವ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದಾರೆ.

      ಬೈಕ್ ವ್ಹೀಲಿಂಗ್ ಮಾಡಿದರೆ ಸಿಆರ್‌ಪಿ - 107 ಅಡಿ ಪ್ರಕರಣ ದಾಖಲು ಮಾಡಲು ತೀರ್ಮಾನಿಸಲಾಗಿದೆ. ಇದರಿಂದಾಗಿ ಬೈಕ್ ಸವಾರರು 30 ಸಾವಿರದ ತನಕ ದಂಡವನ್ನು ಪಾವತಿ ಮಾಡಬೇಕಾಗುತ್ತದೆ.

      ಇದುವರೆಗೂ ಮೋಟಾರು ವಾಹನ ಕಾಯ್ದೆ 184ರ ಅಡಿ ಪ್ರಕರಣ ದಾಖಲು ಮಾಡಲಾಗುತ್ತಿತ್ತು. ಇದರಿಂದಾಗಿ 1 ಸಾವಿರ ರೂ. ತನಕ ದಂಡ ವಿಧಿಸಲು ಅವಕಾಶವಿತ್ತು. ಈಗ ವ್ಹೀಲಿಂಗ್ ತಡೆಯಲು ದಂಡ ಮೊತ್ತ ಹೆಚ್ಚಳ ಮಾಡಲಾಗುತ್ತಿದೆ.

      Bengaluru Police Hiked Fine Amount For Bike Wheeling

      ಬೆಂಗಳೂರು ನಗರದಲ್ಲಿ ವ್ಹೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ವ್ಹೀಲಿಂಗ್ ಮಾಡಿ ಜನರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ.

      ದುಬಾರಿ ದಂಡ ಹಾಕುವ ಮೂಲಕ ವ್ಹೀಲಿಂಗ್‌ಗೆ ಕಡಿವಾಣ ಹಾಕಲು ಸಂಚಾರಿ ಪೊಲೀಸರು ಸಿದ್ಧವಾಗುತ್ತಿದ್ದಾರೆ. ಮೋಟಾರು ವಾಹನ ಕಾಯ್ದೆ ಮೂಲಕ ಈಗಾಗಲೇ ವಾಹನ ಸವಾರರು ದುಬಾರಿ ದಂಡ ಕಟ್ಟುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+