Deepavali 2024: ಬೆಂಗಳೂರಲ್ಲಿ ಪಟಾಕಿ ಅಂಗಡಿ ಇಡಲು ನಿಯಮಗಳು
ಬೆಂಗಳೂರು, ಅಕ್ಟೋಬರ್ 12: ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಉದ್ಯಾನ ನಗರಿ ಬೆಂಗಳೂರಿನಲ್ಲಿ ವಿವಿಧ ಆಟದ ಮೈದಾನದಲ್ಲಿ ಪಟಾಕಿ ಅಂಗಡಿಗಳನ್ನು ತೆರೆಯಲಾಗುತ್ತದೆ. ಇದಕ್ಕಾಗಿಯೇ ಹಲವು ನಿಯಮಗಳಿವೆ. ನಗರ ಪೊಲೀಸ್ ಆಯುಕ್ತರು ಮಳಿಗೆ ತೆರೆಯಲು ನಿಯಮಗಳು, ಮಾರ್ಗಸೂಚಿಗಳ ಕುರಿತು ಪ್ರಕಟಣೆಯನ್ನು ಹೊರಡಿಸಿದ್ದಾರೆ. ಈ ಕುರಿತು ವಿವರವಾದ ಮಾಹಿತಿ ಇಲ್ಲಿದೆ. ನಿಯಮವನ್ನು ಪಾಲನೆ ಮಾಡದಿದ್ದರೆ ಅಂತಹ ಅಂಗಡಿಗಳ ಮೇಲೆ ಬಿಬಿಎಂಪಿ ಕ್ರಮಗಳನ್ನು ಸಹ ಕೈಗೊಳ್ಳಲಿದೆ.
ಪೊಲೀಸ್ ಆಯುಕ್ತರು, ಬೆಂಗಳೂರು ನಗರ ನಿಯಮ 84 Explosives Rules 2008 ರಡಿ ಇರುವ ಪ್ರದತ್ತವಾದ ಅಧಿಕಾರದ ರೀತ್ಯಾ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ 2024ನೇ ಸಾಲಿನ ದೀಪಾವಳಿ ಹಬ್ಬದ ಪ್ರಯುಕ್ತ ಮುಖ್ಯ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ಹೋಂಗಾರ್ಡ್ಸ್ & ಸಿವಿಲ್ ಡಿಫೆನ್ಸ್, ಫೈರ್ ಅಂಡ್ ಎಮರ್ಜೆನ್ಸಿ ಸರ್ವೀಸಸ್ ಅವರು ಪರಿಶೀಲಿಸಿ ನೀಡಲಾಗುವ ಬಿಬಿಎಂಪಿ ಮೈದಾನಗಳಲ್ಲಿ ತಾತ್ಕಾಲಿಕವಾಗಿ ಚಿಲ್ಲರೆ ಪಟಾಕಿ ಮಳಿಗೆ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಕರ್ನಾಟಕ ಸರ್ಕಾರದ ಆದೇಶ ದಿನಾಂಕ 15/10/2019 ರನ್ವಯ ನಿಗದಿಪಡಿಸಿರುವ ಶುಲ್ಕದೊಂದಿಗೆ ಆನ್‌ಲೈನ್ ಪೋರ್ಟಲ್ ಮುಖಾಂತರ ನಿಗದಿಪಡಿಸಿರುವ ದಾಖಲಾತಿ ಮತ್ತು ಡಿಡಿಗಳ ಪ್ರತಿಯನ್ನು ಅಪ್‌ಲೋಡ್ ಮಾಡುವುದು. https://sevasindhuservices.karnataka.gov.in ವೆಬ್ ಪೋರ್ಟಲ್ ಮುಖಾಂತರ ಆನ್‌ಲೈನ್‌ನಲ್ಲಿ ಅಥವಾ ಆನ್‌ಲೈನ್ ಮುಖಾಂತರ ಬೆಂಗಳೂರು ಒನ್ ಕೇಂದ್ರಗಳಲ್ಲಿ ದಿನಾಂಕ 15/10/2024ರ ಮಧ್ಯರಾತ್ರಿವರೆಗೆ ಅರ್ಜಿ ಸಲ್ಲಿಸುವುದು.
ಅರ್ಜಿ ಪ್ರಕ್ರಿಯೆ ಶುಲ್ಕವಾಗಿ ರೂ. 5,000 ಗಳನ್ನು ಆನ್‌ಲೈನ್‌ನಲ್ಲಿ ಪಾವತಿಸುವುದು, ಇದನ್ನು ಮರು ಪಾವತಿಸಲಾಗುವುದಿಲ್ಲ. ಡಿಡಿ ರೂಪದಲ್ಲಿ ರೂ. 25,000ಗಳನ್ನು Commissioner of Police, Administration, Bengaluru City ರವರ ಹೆಸರಿನಲ್ಲಿ ಪಡೆಯುವ ಡಿಡಿಯನ್ನು ಮರು ಪಾವತಿಸಲಾಗುತ್ತದೆ.
ಸೂಚನೆಗಳು: ಡಿಡಿಗಳನ್ನು ಕಡ್ಡಾಯವಾಗಿ ರಾಷ್ಟ್ರೀಕೃತ ಅಥವಾ ಖಾಸಗಿ ಬ್ಯಾಂಕ್‌ಗಳಿಂದ (ಕೋ-ಆಪರೇಟಿವ್ ಬ್ಯಾಂಕ್/ ಸೊಸೈಟಿ ಹೊರತುಪಡಿಸಿ) ಪಡೆದು ಪ್ರತಿಯನ್ನು ಅಪ್‌ಲೋಡ್ ಮಾಡುವುದು. ಬೆಂಗಳೂರು ನಗರದಾದ್ಯಂತ ಒಂದು ವ್ಯಕ್ತಿಯು ಒಂದೇ ಅರ್ಜಿಯನ್ನು ಮಾತ್ರ ಸಲ್ಲಿಸಲು ಅವಕಾಶವಿರುತ್ತದೆ. ಪಟಾಕಿಗಳ ಮಾರಾಟ ಸಂಬಂಧದಲ್ಲಿ ನೀಡಲಾಗುವ ತಾತ್ಕಾಲಿಕ ಪರವಾನಗಿಯನ್ನು ಲಾಟರಿಗಳ ಮೂಲಕ ಹಂಚಿಕೆ ಮಾಡಲಾಗುವುದು. ಸುಪ್ರೀಂಕೋರ್ಟ್ ಆದೇಶದಂತೆ ಹಸಿರು ಪಟಾಕಿಗಳನ್ನು ಮಾರಾಟ ಮಾಡಲು ಮಾತ್ರ ಪರವಾನಗಿಯನ್ನು ನೀಡಲಾಗುವುದು. ಮೈದಾನದ ವಿವರಗಳನ್ನು ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಅವರ ಕಚೇರಿಯ ಪ್ರಕಟಣಾ ಫಲಕ ಅಥವಾ www.bcp karnataka.gov.in ದಲ್ಲಿ ಪಡೆಯುವುದು.
ಅರ್ಜಿ ಸಲ್ಲಿಸಲು ಆನ್‌ಲೈನ್ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷವಿದ್ದಲ್ಲಿ 080-2294 2373 ಅನ್ನು ಸಂಪರ್ಕಿಸಬಹುದಾಗಿದೆ. ಲಾಟರಿ ಮುಖಾಂತರ ತಾತ್ಕಾಲಿಕ ಪರವಾನಿಗೆ ಪಡೆಯುವ ಮಳಿಗೆದಾರರು ಕಡ್ಡಾಯವಾ ಜಿಎಸ್‌ಟಿ ನಂಬರ್ ಅಥವಾ ತಾತ್ಕಾಲಿಕ ಪಟಾಕಿ ಅಂಗಡಿ ತೆರೆಯುವ ಉದ್ದೇಶಕ್ಕಾಗಿ 2024ನೇ ಸಾಲಿನಲ್ಲಿ ಜಿಎಸ್‌ಟಿ ನಂಬರ್ ಅನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದು ಪ್ರತಿಯನ್ನು ಕಛೇರಿಗೆ ಸಲ್ಲಿಸುವುದು.
ಡಿಡಿಯ ಪ್ರತಿಯನ್ನು ಆನ್‌ಲೈನ್ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡುವುದು. ಡಿಡಿ ರೂಪದಲ್ಲಿ ರೂ. 5,000ಗಳನ್ನು DGP & DG Karnataka Fire and Emergency Services, Bengaluru ಅವರ ಹೆಸರಿನಲ್ಲಿ ಪಡೆಯುವ ಡಿಡಿಯನ್ನು ಪರವಾನಗಿ ಮಂಜೂರಾಗದೇ ಇದ್ದಲ್ಲಿ ಹಿಂತಿರುಗಿಸಲಾಗುವುದು, ಸದರಿ ಡಿಡಿಯ ಪ್ರತಿಯನ್ನು ಆನ್‌ಲೈನ್ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡುವುದು.
ಡಿಡಿಯಲ್ಲಿ ಅರ್ಜಿದಾರರ ಹೆಸರು ಹೊರತುಪಡಿಸಿ ಬೇರೆಯವರ ಹೆಸರಿದ್ದಲ್ಲಿ ಅಂತಹ ಡಿಡಿಗಳನ್ನು ಪರಿಗಣಿಸಲಾಗುವುದಿಲ್ಲ ಹಾಗೂ ಸದರಿ ಅರ್ಜಿಯನ್ನು ತಿರಸ್ಕರಿಸಲಾಗುವುದು. ಆದ್ದರಿಂದ ಅರ್ಜಿದಾರರ ಹೆಸರು ನಮೂದಿಸಿರುವ ಡಿಡಿಗಳನ್ನೇ ಕಡ್ಡಾಯವಾಗಿ ಸಲ್ಲಿಸುವುದು. ಅರ್ಜಿದಾರರು ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಸ್ಪಷ್ಠವಾದ ಭಾವಚಿತ್ರವನ್ನು ಅಪ್‌ಲೋಡ್ ಮಾಡುವುದು. ಅರ್ಜಿದಾರರ ವಾಸ ಸ್ಥಳದ ಬಗ್ಗೆ ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ ಜೆರಾಕ್ಸ್ ಪ್ರತಿಯನ್ನು ಸ್ವಯಂ ದೃಢೀಕರಿಸಿ ಅಪ್‌ಲೋಡ್ ಮಾಡುವುದು.
ಒಬ್ಬ ವ್ಯಕ್ತಿ/ ಅರ್ಜಿದಾರನು ಬೆಂಗಳೂರು ನಗರದಾದ್ಯಂತ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸುವಂತೆ ಹಾಗೂ ಹಲವು ಅರ್ಜಿಗಳನ್ನು ಸಲ್ಲಿಸಿರುವುದಿಲ್ಲ ಎಂಬುದರ ಬಗ್ಗೆ ನಿಗದಿತ ನಮೂನೆಯಲ್ಲಿ ಅಫಿಡವಿಟ್ ಪತ್ರವನ್ನು ಅಪ್‌ಲೋಡ್ ಮಾಡುವುದು. (ರೂ. 20 ಸ್ಟಾಂಪ್ ಪೇಪರ್). ಅರ್ಜಿದಾರರು ಅರ್ಜಿಯಲ್ಲಿ ಸಾಮಾನ್ಯ ವರ್ಗ (ಎ), ವಿಕಲ ಚೇತನರು (ಬಿ), ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರು (ಸಿ), ವರ್ಗವನ್ನು ನಮೂದಿಸತಕ್ಕದ್ದು. ನಮೂದಿಸುವ ವರ್ಗಕ್ಕೆ (ಬಿ, ಸಿ) ದಾಖಲಾತಿಗಳನ್ನು ಅಪ್‌ಲೋಡ್ ಮಾಡುವುದು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ಅರ್ಜಿ ಸಂಖ್ಯೆಯೊಂದಿಗೆ ಅಸಲು ಡಿಡಿಗಳನ್ನು ಹಾಗೂ ಅಗತ್ಯ ದಾಖಲೆಗಳನ್ನು ದಿನಾಂಕ16/10/2024ರ 12 ಗಂಟೆಯೊಳಗೆ ಸಲ್ಲಿಸುವುದು. ನಂತರ ಸಲ್ಲಿಸಲಾಗುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಸದರಿ ಭೌತಿಕ ದಾಖಲೆಗಳನ್ನು ಖುದ್ದಾಗಿ ಸಲ್ಲಿಸದ ಪಕ್ಷದಲ್ಲಿ ಆನ್‌ಲೈನ್ ಪೋರ್ಟಲ್‌ನಲ್ಲಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಲಾಗುವುದು.
ಮುಖ್ಯ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ಹೋಮ್‌ಗಾರ್ಡ್ಸ್ & ಸಿವಿಲ್ ಡಿಫೆನ್ಸ್, ಫೈರ್ ಅಂಡ್ ಎಮರ್ಜೆನ್ಸಿ ಸರ್ವೀಸಸ್ ಅವರು ಪರಿಶೀಲಿಸಿ ಬಿಬಿಎಂಪಿ ಮೈದಾನಗಳಲ್ಲಿನ ಮಳಿಗೆಗಳ ಸಂಖ್ಯೆಯನ್ನು ಸುರಕ್ಷತೆಯ ಹಿತದೃಷ್ಠಿಯಿಂದ ನಿಗದಿಪಡಿಸಿರುತ್ತಾರೆ.
ಅರ್ಜಿಗಳ ಸಂಬಂಧ ಚಿಲ್ಲರೆ ಪಟಾಕಿ ಮಾರಾಟ ಮಳಿಗೆಗಳಿಗೆ ತಾತ್ಕಾಲಿಕ ಪರವಾನಗಿಗಳನ್ನು ನೀಡಲು ದಿನಾಂಕ 18/10/2024 ರಂದು ಮಧ್ಯಾಹ್ನ 12 ಗಂಟೆಗೆ ಸಿಎಆರ್ ಕೇಂದ್ರಸ್ಥಾನ, ಮೈಸೂರು ರಸ್ತೆ, ಬೆಂಗಳೂರು ಆವರಣದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ನಡೆಸಲಾಗುವುದು ಹಾಗೂ ಲಾಟರಿ ಮೂಲಕ ಆಯ್ಕೆಯಾದ ಫಲಾನುಭವಿಗಳು ಪರವಾನಗಿಗಳನ್ನು ದಿನಾಂಕ 19/10/2024ರಂದು ಆನ್‌ಲೈನ್ ಮುಖಾಂತರ ಡೌನ್‌ಲೋಡ್ ಮಾಡಿಕೊಳ್ಳುವುದು.
-
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ












Click it and Unblock the Notifications