ಬೆಳ್ಳಂಬೆಳಗ್ಗೆ ಫೈರಿಂಗ್: ಸ್ಲಂ ಭರತನ ಸಹಚರ ಸಿದ್ದನಿಗೆ ಪೊಲೀಸರ ಗುಂಡೇಟು

ಬೆಂಗಳೂರು, ಮಾರ್ಚ್ 11: ಇಂದು ಬೆಳ್ಳಂಬೆಳಗ್ಗೆಯೇ ಬೆಂಗಳೂರಿನಲ್ಲಿ ಪೊಲೀಸರ ಗುಂಡೇಟಿನ ಶಬ್ದ ಕೇಳಿಬಂದಿದೆ. ಕುಖ್ಯಾತ ರೌಡಿಶೀಟರ್ ಸಿದ್ದನ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ಬಗಲಗುಂಟೆ ನಿವಾಸಿ ಸಿದ್ದರಾಜು ಅಲಿಯಾಸ್ ಸಿದ್ದನ ಮೇಲೆ ಬ್ಯಾಡರಹಳ್ಳಿ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ಘಟನೆಯ ಹಿನ್ನೆಲೆ: ರೌಡಿ ಶೀಟರ್ ಸಿದ್ದನ ವಿರುದ್ಧ ಸುಮಾರು 15 ಕೇಸ್ ಗಳು ದಾಖಲಾಗಿವೆ. ವಿವಿಧ ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್ ಆಗಿರುವ ಸಿದ್ದ ಅಡಗಿ ಕುಳಿತಿದ್ದ ಜಾಗದ ಬಗ್ಗೆ ಇಂದು ಮುಂಜಾನೆ ಪೊಲೀಸರಿಗೆ ಮಾಹಿತಿ ಲಭಿಸಿದೆ.

ಕೂಡಲೆ ಸಿದ್ದನನ್ನು ಬಂಧಿಸಲು ಪೊಲೀಸರು ಸ್ಪಾಟ್ ಗೆ ತೆರಳಿದ್ದಾರೆ. ಆಗ ಬ್ಯಾಡರಹಳ್ಳಿ ಪೇದೆ ಹನುಮಂತರಾಜು ಮೇಲೆ ಸಿದ್ದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್ ಪೆಕ್ಟರ್ ರಾಜೀವ್, ಸಿದ್ದನ ಬಲಗಾಲಿಗೆ ಬುಲೆಟ್ ಹಾರಿಸಿದ್ದಾರೆ.

Bengaluru Police Firing On Rowdysheeter Sidda

ಸದ್ಯ ಸಿದ್ದ ಮತ್ತು ಪೇದೆ ಹನುಮಂತರಾಜು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಸಲಿಗೆ, ಈ ರೌಡಿಶೀಟರ್ ಸಿದ್ದ ಸ್ಲಂ ಭರತನ ಸಹಚರ. ಕಳೆದ ತಿಂಗಳಷ್ಟೇ ಪೊಲೀಸ್ ಎನ್ ಕೌಂಟರ್ ನಲ್ಲಿ ಸ್ಲಂ ಭರತ ಮೃತಪಟ್ಟಿದ್ದ. ಇದೀಗ ಸ್ಲಂ ಭರತನ ಸಹಚರ ಸಿದ್ದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+