ಅಪರಾಧ ತಡೆಗೆ ಬೆಂಗಳೂರು ಪೊಲೀಸರ ಹೊಸ ಅಪ್ಲಿಕೇಶನ್

ಬೆಂಗಳೂರು, ಮಾ. 24: ಅಪರಾಧ ಘಟಿಸಿದ ಮೇಲೆ ಸ್ಥಳಕ್ಕೆ ಪೊಲೀಸರು ದೌಡಾಯಿಸುವುದು ಸಾಮಾನ್ಯ ಎಂಬ ಮಾತೇ ಪ್ರಚಲಿತದಲ್ಲಿದೆ. ನಮ್ಮ ಸಿನಿಮಾಗಳು ಇದನ್ನೇ ತೋರಿಸುತ್ತ ಬಂದಿವೆ. ಆದರೆ ಬೆಂಗಳೂರು ಪೊಲೀಸರು ಅಪರಾಧ ಘಟಿಸುವುದಕ್ಕೂ ಮುನ್ನ ಅಥವಾ ನಡೆಯುತ್ತಿದ್ದ ವೇಳೆಯೇ ದುಷ್ಕರ್ಮಿಗಳನ್ನು ಹಿಡಿಯುವ ಹೊಸ ತಂತ್ರವೊಂದನ್ನು ಕಂಡುಹಿಡಿದಿದ್ದಾರೆ.

mobile

ಗೂಗಲ್ ಮ್ಯಾಪ್ ನೆರವಿನಲ್ಲಿ ಹೊಸದೊಂದು ಅಪ್ಲಿಕೇಶನ್ ಸಿದ್ಧಪಡಿಸಿರುವ ಪೊಲೀಸರು ಅತಿ ಶೀಘ್ರವಾಗಿ ಸ್ಥಳಕ್ಕೆ ದೌಡಾಯಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಬೆಂಗಳೂರು ಆಗ್ನೇಯ ವಿಭಾಗದ 13 ಪೊಲೀಸ್ ಠಾಣೆಗಳ ಸಿಬ್ಬಂದಿಗೆ ಈ ಅಪ್ಲಿಕೇಶನ್ ನೀಡಲಾಗಿದೆ. ಸುಲಭವಾಗಿ ಅಂತರ್ಜಾಲದ ನೆರವಿನಲ್ಲಿ ಕಾರ್ಯನಿರ್ವಹಿಸುವ ಅಪ್ಲಿಕೇಶನ್ ಮೂಲಕ ಅಪರಾಧಿಗಳ ಜಾಡು ಪತ್ತೆ ಹಚ್ಚಬಹುದು.[ಮೊಬೈಲ್ ಅಲುಗಾಡಿಸಿ, ಕಾಮಾಂಧರನ್ನು ಹಿಡಿದು ಕೊಡಿ]

ಹೇಗೆ ಕೆಲಸ ಮಾಡುತ್ತದೆ?
ಅಪರಾಧ ಪ್ರಕರಣ ನಡೆದ ವರದಿ ಬಂದ ತಕ್ಷಣ ಸಂಬಂಧಿಸಿದ ಪೊಲೀಸ್ ಸಿಬ್ಬಂದಿ ತಮ್ಮ ಐಡಿ ಮತ್ತು ಪಾಸ್ ವರ್ಡ್ ಬಳಸಿ ಅಪರಾಧ ಸ್ಥಳ, ರೀತಿ ಮತ್ತಿತರ ಮಾಹಿತಿ ದಾಖಲು ಮಾಡಬೇಕಾಗುತ್ತದೆ.

ತಕ್ಷಣ ಅಪ್ಲಿಕೇಶನ್ ಇದೇ ಬಗೆಯನ ಹಿಂದೆ ಅಪರಾಧ ಪ್ರಕರಣ ನಡೆದ ದಾಖಲೆ, ನಿರ್ದಿಷ್ಟ ಸ್ಥಳ ಮತ್ತು ತಕ್ಷಣಕ್ಕೆ ಕೈಗೊಳ್ಳಬೇಕಾದ ಪರಿಹಾರವನ್ನು ಸೂಚಿಸುತ್ತದೆ.[ಬಿಎಂಟಿಸಿ ಬಸ್ಸಿನ ಮಾಹಿತಿಯನ್ನು ಮೊಬೈಲ್‌ನಲ್ಲಿ ಪಡೆಯಿರಿ]

ಟೆಕ್ ಪೋಡ್ ಟೆಕ್ನಾಲಜೀಸ್ ಅಭಿವೃದ್ಧಿಪಡಿಸಿರುವ ಅಪ್ಲಿಕೇಶನ್ ನಲ್ಲಿ ಪೊಲೀಸ್ ಸ್ಟೇಶನ್ ಬೌಂಡರಿಗಳು, ಬಾರ್ ಮತ್ತು ವೈನ್ ಶಾಪ್ ಮತ್ತಿತರ ಸೂಕ್ಷ್ಮ ಪ್ರದೇಶಗಳನ್ನು ದಾಖಲು ಮಾಡಿಕೊಂಡಿರುವುದರಿಂದ ಪೊಲೀಸರ ಕೆಲಸ ಸುಲಭವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+