ಅಪರಿಚಿತರಿಗೆ ಲಿಫ್ಟ್ ನೀಡಿದರೆ ದಂಡ ತೆರಬೇಕಾಗಿಲ್ಲ: ಪೊಲೀಸ್ ಸ್ಪಷ್ಟನೆ
ಬೆಂಗಳೂರು, ಜೂನ್ 26: ಅಪರಿಚಿತ ವ್ಯಕ್ತಿಗಳಿಗೆ ಲಿಫ್ಟ್ ಕೊಟ್ಟರೆ ದಂಡ ವಿಧಿಸುವುದಿಲ್ಲ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ತಿಳಿಸಿದ್ದಾರೆ.
ಅಪರಿಚಿತ ವ್ಯಕ್ತಿಗೆ ಲಿಫ್ಟ್ ಕೊಟ್ಟಿದ್ದಕ್ಕೆ ಮುಂಬೈ ಸಂಚಾರ ಪೊಲೀಸರು ಯುವಕನಿಗೆ ದಂಡ ವಿಧಿಸಿದ್ದಾರೆ, ಆದರೆ ಬೆಂಗಳೂರು ಪೊಲೀಸರು ಅಂತಹ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ, ಮಾಲಿನ್ಯ ಕಡಿಮೆ ಮಾಡುವುದು ಹಾಗೂ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಹೊಣೆ ಪೊಲೀಸರ ಮೇಲಿದೆ ಎಂದಿದ್ದಾರೆ.
ಮುಂಬೈ ಮೂಲದ ನಿತಿನ್ ನಾಯರ್ ಎನ್ನುವವರು ಅಪರಿಚಿತ ವ್ಯಕ್ತಿಗೆ ಲಿಫ್ಟ್ ನೀಡಿದ್ದಕ್ಕೆ ಮುಂಬೈ ಟ್ರಾಫಿಕ್ ಪೊಲೀಸರುಮೋಟಾರು ವಾಹನ ಕಾಯ್ದೆ 66 ಮತ್ತು 192 ಅನ್ವಯ 2 ಸಾವಿರ ರೂ ದಂಡ ವಿಧಿಸಿರುವ ರಸೀತಿಯನ್ನು ತನ್ನ ಫೇಸ್‌ಬುಕ್‌ನಲ್ಲಿ ಹಾಕಿಕೊಂಡಿದ್ದರು.

ಈ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ಮಾತನಾಡಿ, ಮುಂಬೈನಂತೆ ಇಲ್ಲಿ ಟ್ರಾಫಿಕ್ ನಿಯಮಗಳನ್ನು ಜಾರಿ ಮಾಡುವುದಿಲ್ಲ, ಅಗತ್ಯ ಇರುವವರಿಗೆ ಲಿಫ್ಟ್ ನೀಡಿದರೆ, ಶೇರ್ ಮಾಡಿದರೆ ದಂಡ ವಿಧಿಸುವುದಿಲ್ಲ ಅದೊಂದು ವಾಣಿಜ್ಯ ಚಟುವಟಿಕೆ ಎಂದು ಹೇಳಲಾಗದು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕಾರು ಪೂಲಿಂಗ್‌ಗೆ ಹೆಚ್ಚು ಮಹತ್ವವನ್ನು ನೀಡಲಾಗುತ್ತಿದೆ. ಅದರ ಜತೆಗೆ ಪ್ರತಿಯೊಬ್ಬರು ತಮ್ಮ ಕಾರುಗಳಲ್ಲಿ ಕಚೇರಿಗೆ ಹೋದರೆ ಮತ್ತಷ್ಟು ದಟ್ಟಣೆ ಉಂಟಾಗುತ್ತದೆ. ಒಂದು ಕಾರಿನಲ್ಲಿ ನಾಲ್ವರು ಹೋಗಿ, ಅದನ್ನು ಪಾಳಿ ರೀತಿಯಲ್ಲಿ ಒಂದೊಂದು ದಿನ ಒಬ್ಬರ ಕಾರು ಬಳಸಿದರೆ ಅವರಿಗೆ ಇಂಧನದ ಜತೆಗೆ ಹಣವೂ ಉಳಿತಾಯವಾಗಲಿದೆ. ಮಾಲಿನ್ಯವೂ ಕಡಿಮೆಯಾಗುತ್ತದೆ, ಹಾಗಾಗಿ ಹಣ ತೆಗೆದುಕೊಳ್ಳದೆ ಲಿಫ್ಟ್ ನೀಡಿದರೆ ತಪ್ಪಿಲ್ಲ ಎಂದು ಹಿತೇಂದ್ರ ಹೇಳಿದ್ದಾರೆ.
-
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications