ಮಕ್ಕಳ ಕಳ್ಳತನ ಬರೀ ವದಂತಿ: ಬೆಂಗಳೂರು ಪೊಲೀಸರ ಜಾಗೃತಿ
ಬೆಂಗಳೂರು, ಮೇ 28: ಸಾರ್ವಜನಿಕ ವಲಯದಲ್ಲಿ ಮಕ್ಕಳನ್ನು ಕಳ್ಳತನ ಮಾಡುವ ಕುರಿತಂತೆ ಹಬ್ಬಿರುವ ವದಂತಿ ನಂಬದಂತೆ ಬೆಂಗಳೂರು ಪೊಲೀಸರು ಜಾಗೃತಿ ಅಭಿಯಾನ ಆರಂಭಿಸಿದ್ದಾರೆ. ಮಕ್ಕಳ ಕಳ್ಳರ ಕುರಿತು ವಾಟ್ಸ್ ಆಪ್, ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ ಅದಕ್ಕೆ ಯಾರೂ ಕೂಡ ಕಿವಿಗೊಡಬೇಡಿ ಎಂದು ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ.

ಯಾವುದೇ ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ 100 ಕ್ಕೆ ಕರೆ ಮಾಡಿ ಮಾಹಿತಿ ನೀಡಿ, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕರು ಯಾವುದೇ ಸಂಶಯಾಸ್ಪದ ವ್ಯಕ್ತಿಗಳನ್ನು ಹಿಡಿದು ಕಟ್ಟಿಹಾಕುವುದು, ದೈಹಿಕವಾಗಿ ಹಿಂಸಿಸುವುದು, ಮಾರಕಾಸ್ತ್ರಗಳಿಂದ ಹಲ್ಲೆ ಮಾಡುವುದು ಅಥವಾ ಇನ್ನಾವುದೇ ರೀತಿಯಲ್ಲಿ ಕಾನೂನು ಬಾಹಿರವಾಗಿ ನಡೆದುಕೊಂಡರೆ ಅಂತವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
#FalseRumorsOnChildKidnappers : " Do not entertain false rumors."#ಮಕ್ಕಳ_ಕಳ್ಳರ_ಬಗ್ಗೆ_ಸುಳ್ಳು_ವದಂತಿ : ಮಕ್ಕಳ ಕಳ್ಳರ ವದಂತಿಗೆ ಕಿವಿಗೊಡಬೇಡಿ. ಇದು ಸುಳ್ಳು ಸುದ್ದಿ.
— BengaluruCityPolice (@BlrCityPolice) May 28, 2018
“#ಸುಳ್ಳು_ವದಂತಿಗಳನ್ನ_ನಂಬಬೇಡಿ_ಮತ್ತು_ಪ್ರೋತ್ಸಾಹಿಸಬೇಡಿ” pic.twitter.com/77T6AwlOEY
ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಸುಳ್ಳು ವದಂತಿಗಳನ್ನು ಸೃಷ್ಟಿಸುವ ಹಾಗೂ ಹರಿಯ ಬಿಡುವವರ ವಿರುದ್ಧ ಅಪರಾಧ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಬೆಂಗಳೂರು ನಗರ ಪೊಲೀಸರು ಸದಾ ಸಾರ್ವಜನಿಕರ ರಕ್ಷಣೆಗೆ ಸಿದ್ಧರಿರುವುದಾಗಿ ಟ್ವಿಟ್ಟರ್ ಮೂಲಕ ಸಂದೇಶ ರವಾನಿಸಿದ್ದಾರೆ.












Click it and Unblock the Notifications