Weekend Plan: ಟ್ರಾಫಿಕ್ ಕಿರಿಕಿರಿ.. ವೀಕೆಂಡ್ ಮೂಡ್‌ನಲ್ಲಿ ತಲೆನೋವು
ಬೆಂಗಳೂರು: ಆಗಸ್ಟ್ 15 ಬಂದೇ ಬಿಡ್ತು, ಇದರ ಜೊತೆ ವೀಕೆಂಡ್ ಕೂಡ ಬಂದಿದೆ. ಅರೆ ಒಂದೇ ಒಂದು ದಿನ ರಜೆ ಹಾಕಿಬಿಟ್ಟರೆ ಸತತ 4 ದಿನಗಳ ರಜೆ ಸಿಗೋದು ಗ್ಯಾರಂಟಿ. ಇದೇ ಕಾರಣಕ್ಕೆ ಬೆಂಗಳೂರಿಗರು ವಾರಗಟ್ಟಲೆ ಪ್ಲ್ಯಾನ್ ಮಾಡಿ ಟೂರ್‌ಗೆ ಲಗೇಜ್ ಪ್ಯಾಕ್ ಮಾಡಿ ಹೊರಡುವಾಗಲೇ ಹೊಸ ತಲೆನೋವು ಶುರುವಾಗಿದೆ.
ನಿನ್ನೆಯಿಂದಲೇ ವೀಕೆಂಡ್ ಮಸ್ತಿ ಶುರುವಾಗಿದೆ, ಅದರಲ್ಲೂ ವಾರಪೂರ್ತಿ ಕೆಲಸ ಮಾಡಿ ಸುಸ್ತಾಗಿದ್ದ ಟೆಕ್ಕಿಗಳು ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ. ಈ ಹೊತ್ತಲ್ಲಿ ಬೆಂಗಳೂರಿಗೆ ಹತ್ತಿರ ಇರುವ ಜಾಗಗಳಿಗೆ ಭೇಟಿ ನೀಡಲು ಪ್ಲ್ಯಾನ್ ಮಾಡಿದ್ದಾರೆ. ಅದರಲ್ಲೂ ಮೈಸೂರು ರಸ್ತೆಗೆ ಭಾರಿ ಡಿಮ್ಯಾಂಡ್ ಬಂದಿದ್ದು ಟ್ರಾಫಿಕ್ ಕಿರಿಕಿರಿ ಶುರುವಾಗಿದೆ. ದಿಢೀರ್ ಭಾರಿ ಪ್ರಮಾಣದ ವಾಹನಗಳು ಮೈಸೂರು ರಸ್ತೆ & ನೈಸ್ ರೋಡ್ ಕಡೆ ಎಂಟ್ರಿ ಕೊಟ್ಟಿರುವ ಹಿನ್ನೆಲೆಯಲ್ಲಿ ಟ್ರಾಫಿಕ್ ಕಿರಿಕಿರಿ ಶುರುವಾಗಿದೆ. ಹೀಗೆ ಬೆಂಗಳೂರು ಪೊಲೀಸರು ಕೂಡ ಟ್ರಾಫಿಕ್ ಸಂದೇಶ ನೀಡಿದ್ದಾರೆ.

ಬೆಂಗಳೂರು ಪೊಲೀಸರು ಹೇಳಿದ್ದೇನು?
ವೀಕೆಂಡ್ ಅದ್ರಲ್ಲೂ ಹೀಗೆ ಲಾಂಗ್ ವೀಕೆಂಡ್ ಬಂದರೆ ಜನರು ಸುಮ್ಮನೆ ಮನೆಯಲ್ಲಿರಲು ಆಗಲ್ಲ. ಹತ್ತಾರು ಪ್ಲ್ಯಾನ್ ಮಾಡಿ, ಅಟ್ಲೀಸ್ಟ್ ಅದರಲ್ಲಿ ಒಂದಾದರೂ ವರ್ಕೌಟ್ ಆಗಲಿ ಅಂತಾ ಹೊರಗೆ ಹೋಗೋದು ಮಾಮೂಲಿ. ಆದರೆ ಹೀಗೆ ಹೊರಗೆ ಹೊರಟವರಿಗೆ ರಸ್ತೆ ತುಂಬಾ ವಾಹನಗಳೇ ಕಾಣುತ್ತಿವೆ. ಅದರಲ್ಲೂ ನೈಸ್ ರೋಡ್ ಹಾಗೂ ಮೈಸೂರು ರಸ್ತೆಗೆ ಟ್ರಾಫಿಕ್ ಬಿಸಿ ಜೋರಾಗಿ ತಟ್ಟಿದೆ. ಈ ಕಾರಣಕ್ಕೆ ಮೊದಲೇ ಟ್ವೀಟ್ ಮಾಡಿ ಮುನ್ಸೂಚನೆ ನೀಡಿರುವ ಬೆಂಗಳೂರಿನ ಕೆಂಗೇರಿ ವಿಭಾಗದ ಟ್ರಾಫಿಕ್ ಪೊಲೀಸರು, ಭಾರಿ ಪ್ರಮಾಣದಲ್ಲಿ ವಾಹನಗಳು ರಸ್ತೆಗೆ ಇಳಿದ ಪರಿಣಾಮ ನೈಸ್ ರಸ್ತೆ ಹಾಗೂ ಮೈಸೂರು ರಸ್ತೆಯ ಭಾಗದಲ್ಲಿ ಟ್ರಾಫಿಕ್ ಉಂಟಾಗಬಹದು ಸಹಕರಿಸಿ ಎಂದಿದ್ದಾರೆ.
@Jointcptraffic @DCPTrWestBCP @acpwesttrf @BlrCityPolice @blrcitytraffic @hemmigepura
— KENGERI TRAFFIC BTP (@kengeritrfps) August 12, 2023
Due to long weekend density of outgoing vehicles traffic is more in Mysore road & Nice road. Commuters plz aware of it & co-operate
ಕಾರ್ ಬೇಡ ಬಸ್ ಅಂದ್ರೂ ಸಮಸ್ಯೆ!
ಹೌದು, ಆ ಕಡೆ ಕಾರ್ ತಗೋಂಡು ಹೋದರೆ ಟ್ರಾಫಿಕ್ ಸಮಸ್ಯೆ. ಹೀಗಾಗಿ ಬಸ್ ಅಲ್ಲೇ ಹೋಗೋಣ ಅಂದ್ರೆ ಮತ್ತೊಂದು ಸಮಸ್ಯೆ ಇದೆ. ಒಂದು ಕಡೆ ಬಸ್‌ನಲ್ಲಿ ಸೀಟ್ ಸಿಗುತ್ತಿಲ್ಲ ಇದು ಬಿಡಿ ಖಾಸಗಿ ಬಸ್‌ನ ನೋಡೋಣ ಅಂದರೆ ಒನ್ ಟು ಡಬಲ್ ರೇಟ್ ಹೇಳ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಹೀಗಾಗಿ ಲಾಂಗ್ ವೀಕೆಂಡ್ ಸಿಕ್ಕಿದ್ದರೂ ಪರದಾಟದಲ್ಲಿ ಮಾತ್ರ ಬದಲಾವಣೆ ಆಗಿಲ್ಲ. ಅತ್ತ ಒಂದೇ ಸಾರಿ ಲಕ್ಷಾಂತರ ವಾಹನಗಳು ರಸ್ತೆ ಇಳಿದಿವೆ, ಇತ್ತ ಸಾರ್ವಜನಿಕ ಸಾರಿಗೆ ಅಂದರೆ ಬಸ್‌ಗಳಲ್ಲಿ ರೇಟ್ ಡಬಲ್ ಆಗಿದೆ. ಹೀಗಾಗಿ ಯಾರಿಗೆ ಹೇಳೋಣ ನಮ್ ಪ್ರಾಬ್ಲಂ ಅಂತಿದ್ದಾರೆ ಪ್ರಯಾಣಿಕರು.

ಬಸ್ ರೇಟ್‌ಗೆ ಕಡಿವಾಣ ಯಾವಾಗ?
ಬಹುತೇಕರಿಗೆ ವರ್ಕ್ ಫ್ರಂ ಹೋಂ ಈಗ ಮುಗಿದ ಅಧ್ಯಾಯ. ಹೀಗಾಗಿ ಬೆಂಗಳೂರಿನಲ್ಲಿ ಮತ್ತೆ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಹಾಗೇ ಬಸ್ ದರಕ್ಕೂ ಕಡಿವಾಣ ಬೀಳುತ್ತಿಲ್ಲ. ವರ್ಕ್ ಫ್ರಂ ಹೋಂ ಇಲ್ಲದ ಕಾರಣ ರಜೆಯಲ್ಲೇ ಊರುಗಳಿಗೆ ಹೋಗುವವರಿಗೆ ಶಾಕ್ ಎದುರಾಗ್ತಿದೆ. ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ದೇಶವೇ ಸಜ್ಜಾಗಿದೆ. ಆಗಸ್ಟ್ 15 ಈ ಬಾರಿ ಮಂಗಳವಾರ ಬಂದಿದ್ದು, ಸಾರ್ವಜನಿಕ ರಜೆ ಸಿಗುತ್ತಿರುವ ಕಾರಣ ಬಹುತೇಕರು ನಿನ್ನೆ ಅಂದರೆ ಶುಕ್ರವಾರವೇ ಊರಿಗೆ ತೆರಳಲು ಪ್ಲ್ಯಾನ್ ಮಾಡಿದ್ದರು. ಬಹುತೇಕರು ಡಬಲ್ ಹಣವನ್ನು ಕೊಟ್ಟು ಬಸ್‌ಗೆ ಹೋಗಿದ್ದಾರೆ. ಇನ್ನುಳಿದವರು ಇಂದು ಟ್ರಾಫಿಕ್ ಕಿರಿಕಿರಿ ಜೊತೆ ಊರಿಗೆ ಹೋಗಬೇಕಿದೆ.
ಟ್ರೈನ್‌ಗಳ ಕಥೆಯನ್ನು ನೀವು ಕೇಳಬೇಡಿ!
ರೈಲಿನಲ್ಲಿ ಹೋಗೋಣ ಅಂದರೆ ಮುಂಗಡವಾಗಿ ಬುಕ್ ಮಾಡಲು ಆಗೋದಿಲ್ಲ ಅಂಥ ಪರಿಸ್ಥಿತಿ ಇದೆ. ಇನ್ನು ಟಿಕೆಟ್ ಪಡೆದು ನೇರವಾಗಿ ಹೋಗೋಣ ಅಂದ್ರೆ ಅಲ್ಲೂ ಜನಜಂಗುಳಿ. ಹೀಗಾಗಿ ಸಾಲು ಸಾಲು ರಜೆ ಇದ್ದಾಗ ಸರ್ಕಾರಿ ಬಸ್ ಸಂಖ್ಯೆ ಹೆಚ್ಚಿಸಬೇಕು ಎಂಬ ಒತ್ತಾಯ ಜನರದ್ದು. ಅಲ್ಲದೆ ಖಾಸಗಿ ಸಾರಿಗೆ ಸಂಸ್ಥೆಗಳು ವಾರಾಂತ್ಯದಲ್ಲಿ ಡಬಲ್ ಹಣ ಕೀಳುತ್ತಿರುವ ಬಗ್ಗೆ ಕ್ರಮಕ್ಕೂ ಪ್ರಯಾಣಿಕರು ಆಗ್ರಹಿಸಿದ್ದಾರೆ. ಇನ್ನೊಂದು ಕಡೆ ಸ್ವಂತ ವಾಹನ ಇದ್ದವರಿಗೆ ಟ್ರಾಫಿಕ್‌ನ ಕಿರಿಕಿರಿ ಜೋರಾಗಿದೆ.












Click it and Unblock the Notifications