ಡ್ರಾಪ್ ಕೊಡುವ ನೆಪದಲ್ಲಿ ಪಕ್ಕದ ಮನೆ ವಿದ್ಯಾರ್ಥಿನಿ ಮೇಲೆ ರೇಪ್

ಬೆಂಗಳೂರು, ನವೆಂಬರ್. 06: ಕೆಲ ದಿನಗಳ ಹಿಂದೆ ಚಲಿಸುತ್ತಿರುವ ಟಿಟಿಯಲ್ಲಿ ಬಿಪಿಒ ಉದ್ಯೋಗಿ ಮೇಲೆ ರೇಪ್, ಗುರುವಾರ ಹೊಸಕೋಟೆಯಲ್ಲಿ ಚಲಿಸುತ್ತಿರುವ ಮಿನಿ ಬಸ್ ನಲ್ಲಿ ಯುವತಿ ಮೇಲೆ ಅತ್ಯಾಚಾರ ಪ್ರಕರಣಗಳು ಬೆಂಗಳೂರು ನಾಗರಿಕರ ಮನಸ್ಸನ್ನು ಘಾಸಿಗಳಿಸಿದೆ. ಇವೆಲ್ಲವೂ ಮಾಸುವುದಕ್ಕೆ ಮುನ್ನವೇ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ.

ಮನೆಗೆ ಡ್ರಾಪ್ ಕೊಡುವ ನೆಪದಲ್ಲಿ ಪಕ್ಕದ ಮನೆಯ ವಿದ್ಯಾರ್ಥಿನಿ ಮೇಲೆಯೇ ಅತ್ಯಾಚಾರ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಈಶ್ವರ್ ನನ್ನು ಬಂಧಿಸಲಾಗಿದೆ.[ಚಲಿಸುತ್ತಿದ್ದ ವಾಹನದಲ್ಲಿ ನಡೆದ ಹತ್ತು ಅತ್ಯಾಚಾರಗಳು]

rape


ಹೆಂಡತಿಯಿಂದ ವಿಚ್ಛೇದನ ಪಡೆದುಕೊಂಡಿರುವ ಆರೋಪಿ ಈಶ್ವರ ತನ್ನ ನೆರೆಮನೆಯ ಹುಡಿಗಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ವಿದ್ಯಾರ್ಥಿಯನ್ನು ಮನೆಗೆ ಡ್ರಾಪ್ ನೀಡುತ್ತೇನೆ ಎಂದು ಹೇಳಿ ಕಾರು ಹತ್ತಿಸಿಕೊಂಡಿದ್ದಾನೆ. ನಂತರ ಮತ್ತು ಬರುವ ಔಷಧ ನೀಡಿ ವಿದ್ಯಾರ್ಥಿನೆ ಮೇಲೆ ಎರಗಿದ್ದಾನೆ.[ಕಾಮುಕರ ಪುರುಷತ್ವ ಹರಣ ಮಾಡಿ: ಮದ್ರಾಸ್ ಹೈಕೋರ್ಟ್]

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಇತ್ತೀಚೆಗೆ ವಿದ್ಯಾರ್ಥಿನಿ ನಡವಳಿಕೆಯಲ್ಲಿ ಬದಲಾವಣೆಯಾಗಿದ್ದನ್ನು ಗಮನಿಸಿದ ಪಾಲಕರು ಏನಾಗಿದೆ ಎಂದು ವಿಚಾರಿಸಿದ್ದಾರೆ. ನಿನಗೆ ಯಾರಾದರೂ ಹುಡುಗರು ತೊಂದರೆ ಕೊಡುತ್ತಿದ್ದಾರೆಯೇ? ವಿದ್ಯಾಭ್ಯಾಸ ಸಮಸ್ಯೆಯಾಗುತ್ತಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.[ದಾವಣಗೆರೆಯಲ್ಲಿ 64 ವರ್ಷದ ವೃದ್ಧೆ ಮೇಲೆ ಗ್ಯಾಂಗ್ ರೇಪ್]

ಭಯಭೀತಗೊಂಡಿದ್ದ ವಿದ್ಯಾರ್ಥಿನಿ ಪಾಲಕರ ಬಳಿ ನಡೆದ ಘಟನಾವಳಿಗಳನ್ನು ವಿವರಿಸಿದ್ದಾರೆ. ತಕ್ಷಣ ಪಾಲಕರು ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಮತ್ತು ಕೃತ್ಯಕ್ಕೆ ಬಳಸಿದ್ದ ಸ್ವಿಪ್ಟ್ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+