Bengaluru: ‘ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಬೆಂಗಳೂರಿನಲ್ಲಿ ಇರೋದೇ ಕಷ್ಟ’; ನಾರ್ಥಿ ಪೋಸ್ಟ್‌ಗೆ ಕನ್ನಡಿಗರ ಕ್ಲಾಸ್!
Bengaluru: ಬೆಂಗಳೂರು ನಗರದ ಬಗ್ಗೆ ನಾರ್ಥಿಯೊಬ್ಬರು ಮಾಡಿರುವ ಪೋಸ್ಟ್ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿನ ಆಚರಣೆ ಹಾಗೂ ಸಂಸ್ಕೃತಿಯ ವಿಷಯವು ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಬೆಂಗಳೂರಿನಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್ ತಿಂಗಳ ನಡುವೆ ವಾಸ ಮಾಡುವುದು ಹಿಂಸೆಯ ಅನುಭವ ಎನ್ನುವ ಅರ್ಥದಲ್ಲಿ ಟ್ವೀಟ್ ಮಾಡಿದ್ದು. ಈ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಸಹಜವಾಗಿಯೇ ಕನ್ನಡಿಗರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಅನು (@Escapeplace__) ಎನ್ನುವವರು ಒಬ್ಬ ಉತ್ತರ ಭಾರತೀಯಳಾಗಿ, ನೀವು ನಿಮಗಾಗಿ ಮಾಡಿಕೊಳ್ಳಬಹುದಾದ ಕೆಟ್ಟ ಕೆಲಸವೆಂದರೆ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಬೆಂಗಳೂರಿನಲ್ಲಿ ಇರುವುದು. ಏಕೆಂದರೆ ಈ ನಗರದಲ್ಲಿ ಹಬ್ಬದ ವಾತಾವರಣ ತುಂಬಾ ಕಡಿಮೆ. ಮದುವೆಯ ನಂತರ ಮೊದಲ ಹಬ್ಬಗಳು ಮತ್ತು ನಾನು ರೀಲ್‌ಗಳನ್ನು ನೋಡುತ್ತಾ ಅಳುತ್ತಿದ್ದೇನೆ ಅಂತ ಬರೆದುಕೊಂಡಿದ್ದಾರೆ. ಈ ವಿಷಯವು ಬೆಂಗಳೂರಿನಲ್ಲಿನ ಹಬ್ಬಗಳು ಹಾಗೂ ಆಚರಣೆಯ ವಿಷಯಗಳ ಚರ್ಚೆಗೆ ಕಾರಣವಾಗಿದೆ.

Bengaluru: ನೆಟ್ಟಿಗರು ಹೇಳಿದ್ದೇನು ?
ನಿಜ ಹೇಳಬೇಕೆಂದರೆ, ಇಂತಹ ವಿವಾದ ಸೃಷ್ಟಿಸುವ ಪೋಸ್ಟ್‌ಗಳನ್ನು ನೋಡಿ ಸಾಕಾಗಿದೆ. ಇವು ಈಗ ತಮಾಷೆಯಾಗಿಯೂ ಕಾಣಿಸುತ್ತಿಲ್ಲ. ಪ್ರತಿಯೊಂದು ನಗರದಲ್ಲಿಯೂ ಅಲ್ಲಿಯ ಜನರು ತಮ್ಮದೇ ರೀತಿಯಲ್ಲಿ ಹಬ್ಬಗಳನ್ನು ಆಚರಿಸುತ್ತಾರೆ. ಆಯುಧ ಪೂಜೆಯ ದಿನ ಹೊರಗೆ ಹೋಗಿ ನೋಡಿ, ವಾಹನಗಳನ್ನು ಎಷ್ಟು ಸುಂದರವಾಗಿ ಅಲಂಕರಿಸಿರುತ್ತಾರೆ ಎಂಬುದನ್ನು ಕಂಡು ಅಚ್ಚರಿಪಡುತ್ತೀರಿ. ಜನರು ರುಚಿಕರವಾದ ಅಡುಗೆಗಳನ್ನು ಮಾಡುತ್ತಾರೆ, ಇನ್ನೂ ತಮ್ಮದೇ ರೀತಿಯಲ್ಲಿ ಸಂಭ್ರಮಿಸುತ್ತಾರೆ! ಇಲ್ಲಿ ಶಬ್ದ ಮಾಡುವುದೇ ಸಂಭ್ರಮಾಚರಣೆ ಎಂದಲ್ಲ ಅಂತ ಶ್ರೇಯಸ್ ರಾವ್ ಎನ್ನುವವರು ಹೇಳಿದ್ದಾರೆ.
ನಾರ್ಥಿಯ ಈ ಪೋಸ್ಟ್‌ಗೆ ಕನ್ನಡಿಗರು ಸೋಷಿಯಲ್ ಮೀಡಿಯಾದಲ್ಲಿ ಮುಟ್ಟಿ ನೋಡಿಕೊಳ್ಳುವಂತೆ ರಿಪ್ಲೈ ಕೊಟ್ಟಿದ್ದಾರೆ. ನೇಹಾ ಎನ್ನುವವರು, ಉತ್ತರ ಭಾರತದ ವ್ಯಕ್ತಿಯನ್ನು ಮದುವೆಯಾಗಿರುವ ಕನ್ನಡದವಳಾಗಿ, ಎರಡೂ ಸಂಸ್ಕೃತಿಗಳನ್ನು ಹತ್ತಿರದಿಂದ ನೋಡಿದ್ದೇನೆ. ಹಬ್ಬಗಳನ್ನು ಆಚರಿಸುವ ರೀತಿಯಲ್ಲಿ ಮಾತ್ರ ವ್ಯತ್ಯಾಸವಿದೆ.
ಉತ್ತರ ಭಾರತದಲ್ಲಿ ಅಲಂಕಾರ, ಸಿಂಗಾರ ಮತ್ತು ವೈಭವಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆ. ಆದರೆ, ದಕ್ಷಿಣ ಭಾರತದಲ್ಲಿ ಪೂಜೆ, ಆಚರಣೆಗಳು ಮತ್ತು ಸಂಪ್ರದಾಯಗಳಿಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ಇದು ನೋಡುವ ದೃಷ್ಟಿಕೋನದ ವ್ಯತ್ಯಾಸವಷ್ಟೇ; ಸಂಭ್ರಮದ ಕೊರತೆಯಲ್ಲ. ಮುಕ್ತ ಮನಸ್ಸಿನಿಂದ ನೋಡಿ, ಹೊಸ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ ಅಂತ ಸಲಹೆ ನೀಡಿದ್ದಾರೆ.
ಉತ್ತರ ಭಾರತದಲ್ಲೂ ಪ್ರತಿ ಮನೆಯಲ್ಲೂ ಪೂಜೆ, ಆಚರಣೆಗಳು ಮತ್ತು ಸಂಪ್ರದಾಯಗಳು ಇರುತ್ತವೆ. ಪೂಜೆ ಮಾಡಿದ ನಂತರ ನಾವು ಹೊರಗೆ ಹೋಗಿ ಜನರನ್ನು ಭೇಟಿಯಾಗುತ್ತೇವೆ. ನೀವು ಉತ್ತರ ಭಾರತದ ಯಾವ ಸಂಪ್ರದಾಯಗಳನ್ನು ನೋಡಿದ್ದೀರೋ ಗೊತ್ತಿಲ್ಲ. ಆದರೆ ಅಲ್ಲಿಯೂ ಪೂಜೆ, ಆಚರಣೆಗಳು ಮತ್ತು ಸಂಪ್ರದಾಯಗಳಿಗೆ ಹೆಚ್ಚಿನ ಮಹತ್ವ ಕೊಡಲಾಗುತ್ತದೆ ಎಂದಿದ್ದಾರೆ.
ಉತ್ತರ ಭಾರತೀಯನಾದರೂ ಬೆಂಗಳೂರಿನಲ್ಲಿ 15 ವರ್ಷಗಳಿಂದ ಇದ್ದೇನೆ. ಇಲ್ಲಿಗೆ ಬಂದು ಕನ್ನಡ ಕಲಿತೆ, ಒಂದೂ ಹಬ್ಬವನ್ನೂ ತಪ್ಪಿಸಿಲ್ಲ, ಹೋಳಿಯಿಂದ ದಸರಾ ವರೆಗೆ. ನಗರ ನೀರಸವಾಗಿದೆ ಎಂದು ನೀವು ಭಾವಿಸಿದರೆ, ಬಹುಶಃ ಸಮಸ್ಯೆ ಬೆಂಗಳೂರಿನದಲ್ಲ, ನೀವು ನಿಮ್ಮ ಫ್ಲಾಟ್‌ನಿಂದ ಹೊರಗೆ ಕಾಲಿಡದಿರುವುದು.
ಇಲ್ಲಿನ ಜನರು ಸುಂದರರು, 1-2% ಜನರನ್ನು ಪಕ್ಕಕ್ಕೆ ಇರಿಸಿ ಅಂತ ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ. ಗೋಪಾಲ್ ಎನ್ನುವವರು, ದಯವಿಟ್ಟು ಡಿಸೆಂಬರ್ ವರೆಗೆ ಮನೆಗೆ ಹೋಗಿ, ನಿಮ್ಮ ವೈಬ್‌ಗಳನ್ನು ನೀವು ಪಡೆಯುತ್ತೀರಿ ಮತ್ತು ನಮ್ಮ ಟ್ರಾಫಿಕ್ ಮುಕ್ತ ಬೆಂಗಳೂರು ನಮಗೆ ಸಿಗುತ್ತದೆ. ಇಬ್ಬರಿಗೂ ಒಳ್ಳೆಯದರು ಅಂತ ಕನ್ನಡಿಗರು ಹೇಳಿದ್ದಾರೆ.
ದಿವ್ಯಾ ಜಯರಂ ಎನ್ನುವವರು, ಉತ್ತರ ಭಾರತೀಯನಾಗಿ ಹೇಳುವುದಾದರೆ, ನೀವು ಮಾಡಬಹುದಾದ ಅತ್ಯಂತ ಕೆಟ್ಟ ಕೆಲಸಗಳಲ್ಲಿ ಒಂದು ಬೆಂಗಳೂರಿಗೆ ಬಂದು, ಇಲ್ಲಿಯೇ ನೆಲೆಸುವುದು, ನಗರದ ಮೇಲೆ ನಿಮ್ಮ ಜೀವನಶೈಲಿಯನ್ನು ಹೇರಲು ಪ್ರಯತ್ನಿಸುವುದು, ನಂತರ ನಗರದ ಬಗ್ಗೆ ದೂರುವುದು. ಅದೂ ಈಗಾಗಲೇ ಕುಸಿಯುತ್ತಿರುವ ಮೂಲಸೌಕರ್ಯ, ಹೆಚ್ಚುತ್ತಿರುವ ಟ್ರಾಫಿಕ್ ಜಾಮ್ ಸಮಸ್ಯೆ ಮತ್ತು ಹದಗೆಡುತ್ತಿರುವ ವಾಯುಮಾಲಿನ್ಯಕ್ಕೆ ಮತ್ತಷ್ಟು ಕೊಡುಗೆ ನೀಡುತ್ತಾ ಇರುವುದು ಎಂದಿದ್ದಾರೆ.


Click it and Unblock the Notifications
