ಬೆಂಗಳೂರಿನಲ್ಲಿ ಮುಂದುವರೆದ ಆತಂಕ, ಕಂಟೇನ್ಮೆಂಟ್ ಜೋನ್ 113
ಬೆಂಗಳೂರು, ಜೂನ್ 12: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯಲ್ಲಿರುವ ಕಂಟೇನ್ಮೆಂಟ್ ಜೋನ್ ಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಆತಂಕ ಹೆಚ್ಚಿಸಿದೆ. ಬುಧವಾರದಂದು ಬೆಂಗಳೂರಿನಲ್ಲಿ 85 ಕಂಟೇನ್ಮೆಂಟ್ ಜೋನ್ ಗಳನ್ನು ಗುರುತಿಸಲಾಗಿತ್ತು. ಗುರುವಾರ ಸಂಜೆ ವೇಳೆಗೆ ಈ ಸಂಖ್ಯೆ 113ಕ್ಕೇರಿದೆ.
Recommended Video
ಅನ್ ಲಾಕ್ 1.0 ಜಾರಿಗೆ ಬರುತ್ತಿದ್ದಂತೆ ಬೆಂಗಳೂರಿನಲ್ಲಿ ಕೊರನಾವೈರಸ್ ಸೋಂಕಿತರ ಸಂಖ್ಯೆಯೂ ಏರಿಕೆ ಕಂಡಿದೆ. ಸಾರಿಗೆ, ಸಂಪರ್ಕ, ಹೋಟೆಲ್, ಧಾರ್ಮಿಕ ಕೇಂದ್ರಗಳು ತೆರೆದಿವೆ. ಈ ನಡುವೆ ಕೊವಿಡ್ 19 ರೋಗ ಲಕ್ಷಣಗಳಿಲ್ಲದವರಿಗೂ ಸೋಂಕು ತಗುಲಿರುವುದು ಆತಂಕ ಹೆಚ್ಚಿಸಿದೆ.
198 ವಾರ್ಡ್ ಪೈಕಿ 11 ವಾರ್ಡ್ ಗಳಲ್ಲಿ ಈ ವರೆಗೆ ಒಂದೇ ಒಂದು ಕೊರೋನಾ ಸೋಂಕು ಈ ವರೆಗೆ ಪತ್ತೆಯಾಗಿಲ್ಲ. ಬೆಂಗಳೂರು ನಗರದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ 572ಕ್ಕೆ ಏರಿಕೆಯಾಗಿದೆ. 258 ಸಕ್ರಿಯ ಪ್ರಕರಣಗಳಿವೆ, 298 ಮಂದಿ ಗುಣಮುಖರಾಗಿದ್ದು, ಒಟ್ಟಾರೆ 21 ಮಂದಿ ಮೃತರಾಗಿದ್ದು, 1343 ಕ್ವಾರಂಟೈನ್ ನಲ್ಲಿದ್ದಾರೆ.

ಪ್ರಾಥಮಿಕ ಸಂಪರ್ಕದಿಂದ ಸೋಂಕು
ನಗರದಲ್ಲಿನ ಕೋವಿಡ್ - 19 ಸೋಂಕಿತರ ಪೈಕಿ ಶೇ 48ರಷ್ಟು ಪ್ರಕರಣ ರೋಗಿಯ ಪ್ರಾಥಮಿಕ ಸಂಪರ್ಕದಿಂದ ಬಂದಿರುವುದು. ಶೇ 15ರಷ್ಟು ಪ್ರಕರಣಗಳು ಟ್ರಾವೆಲ್ ಹಿಸ್ಟರಿಯನ್ನು ಹೊಂದಿವೆ.

ಪಶ್ಚಿಮ ವಲಯದಲ್ಲಿ ಅತಿ ಹೆಚ್ಚು ಕೇಸ್
ಬಿಬಿಎಂಪಿ ಪಶ್ಚಿಮ ವಲಯದಲ್ಲಿ ಅತಿ ಹೆಚ್ಚು 70 ಕೇಸ್ ಪತ್ತೆಯಾಗಿದೆ, ಎಸ್. ಕೆ ಗಾರ್ಡನ್ ನಲ್ಲಿ 24, ಅಗ್ರಹಾರ ದಾಸರಹಳ್ಳಿ 9, ದಕ್ಷಿಣ ವಲಯದಲ್ಲಿ ವಿ. ವಿ ಪುರಂ 8 ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಶೇ 60ರಷ್ಟು ಪಾದರಾಯನಪುರದಲ್ಲೇ ಪತ್ತೆಯಾಗಿದೆ.

ಪ್ರತ್ಯೇಕ ಐಸೋಲೇಷನ್
ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಂಕಿ ಹೆಚ್ಚಾಗುತ್ತಿರುವುದರಿಂದ ಪ್ರತ್ಯೇಕ ಐಸೋಲೇಷನ್ ವಾರ್ಡ್, ಸಂಪರ್ಕಿತರ ಕ್ವಾರಂಟೈನ್ ಘಟಕ ಸ್ಥಾಪಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಸೋಂಕಿತರಿಗೆ ಅವರ ಮನೆಯಲ್ಲೇ ಐಸೋಲೇಷನ್ ಮಾಡಿ ಚಿಕಿತ್ಸೆ ನೀಡಲಾಗುತ್ತದೆ.

ಮನೆಯಲ್ಲೇ ಚಿಕಿತ್ಸೆ ಪಡೆಯಿರಿ
ಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಂಡರೆ ಮನೆಯಲ್ಲೇ ಚಿಕಿತ್ಸೆ ಪಡೆಯಿರಿ, ರೋಗ ಲಕ್ಷಣವಿಲ್ಲದವರಿಗೂ ಸೋಂಕು ಕಾಣಿಸಿಕೊಂಡರೂ ಒಂದು ವಾರದ ಚಿಕಿತ್ಸೆಯಿಂದ ಗುಣಮುಖರಾಗುತ್ತಿದ್ದಾರೆ ಎಂದು ಬಿಬಿಎಂಪಿ ಹೇಳಿದೆ.

6245 ಕೊವಿಡ್ 19 ಪಾಸಿಟಿವ್ ಪ್ರಕರಣ
ಕರ್ನಾಟಕದಲ್ಲಿ 6245 ಕೊವಿಡ್ 19 ಪಾಸಿಟಿವ್ ಪ್ರಕರಣಗಳಿದ್ದು, 72 ಮಂದಿ ಮೃತರಾಗಿದ್ದಾರೆ, 2976 ಮಂದಿ ಆಸ್ಪತ್ರೆಗಳಿಂದ ಡಿಸ್ಜಾರ್ಜ್ ಆಗಿದ್ದಾರೆ. 3185ಕ್ಕೂ ಅಧಿಕ ಮಂದಿ ಐಸೊಲೇಷನ್ ನಲ್ಲಿದ್ದಾರೆ. 10 ಮಂದಿ ಮಾತ್ರ ಐಸಿಯುವಿನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.












Click it and Unblock the Notifications