Bengaluru metro: ನಿಲ್ದಾಣದಲ್ಲಿ ಮಹಿಳೆ ಮುಂದೆ ಮೆಟ್ರೋ ಸಿಬ್ಬಂದಿಯ ಅಸಭ್ಯ ವರ್ತನೆ
ಬೆಂಗಳೂರು, ಮಾರ್ಚ್ 20: ಸುರಕ್ಷಿತ ಮತ್ತು ವೇಗದ ಪ್ರಯಾಣಕ್ಕೆ ಹೆಸರಾಗಿರುವ ಬೆಂಗಳೂರು ನಮ್ಮ ಮೆಟ್ರೋ (Bengaluru Namma Metro) ರೈಲಿನಲ್ಲಿ, ನಿಲ್ದಾಣದಲ್ಲಿ ಸಹ ಪ್ರಯಾಣಿಕರಿಂದ ಮಹಿಳೆಯರಿಗೆ ಲೈಂಗಿಕ ಕಿರುಕುಳ ಬಗ್ಗೆ ಕೇಳಿದ್ದೆವು. ಇದೀಗ ಮೆಟ್ರೋ ಸಿಬ್ಬಂದಿಯೇ ಮಹಿಳೆ ಮುಂದೆ ಅಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ. ಕೃತ್ಯವನ್ನು ವಿಡಿಯೋ ಮಾಡಿದ ಮಹಿಳೆ ದೂರು ನೀಡಿದ್ದಾರೆ.
ಮೆಟ್ರೋ ಸಿಬ್ಬಂದಿಯೊಬ್ಬ ತನ್ನ ಖಾಸಗಿ ಅಂಗ ಮುಟ್ಟಿಕೊಂಡು ನನ್ನನ್ನು ನೋಡುತ್ತ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಘಟನೆ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಇಲ್ಲಿ ನಾನು ಸುರಕ್ಷಿತಳಲ್ಲ ಎಂದಿರುವ ಆ ಮಹಿಳೆ ದೂರಿದ್ದಾರೆ.

ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯೊಬ್ಬ ಮಹಿಳಾ ಪ್ರಮಾಣಿಕಳತ್ತ ನೋಡುತ್ತ ಅವರ ಮುಂದೆ ತಮ್ಮ ಖಾಸಗಿ ಅಂಗಗಳನ್ನು ಸ್ಪರ್ಶಿಸಿ ದುರ್ವರ್ತನೆ ಪ್ರದರ್ಶಿಸಿದ್ದಾನೆ. ಈ ಘಟನೆ ವಿಡಿಯೋ ಮೂಲಕ ಹೊರ ಬಿದ್ದಿದೆ.
ಘಟನೆಯಿಂದ ನೊಂದ ಆ ಮಹಿಳೆ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಇಂತಹ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಮಹಿಳೆಯರಿಗೆ ರಕ್ಷಣೆ ನೀಡಬೇಕು ಎಂದು ಕೋರಿದ್ದಾರೆ. ಈ ಘಟನೆಗೆ ಸಾರ್ವಜನಿಕ ಆಕ್ರೋಶ, ಖಂಡನೆ ವ್ಯಕ್ತವಾಗಿದೆ.

ಮೆಟ್ರೋ ನಿಲ್ದಾಣದಲ್ಲಿ ಆಗಿದ್ದೇನು?
ಮೆಟ್ರೊ ಭದ್ರತಾ ಸಿಬ್ಬಂದಿ ಏಕಾಎಕಿ ಪ್ಲಾಟ್‌ಫಾರ್ಮ್‌ನ ಎದುರಿನಿಂದ ನನ್ನತ್ತ ನೋಡುತ್ತ ತನ್ನ ಖಾಸಗಿ ಅಂಗಗಳ ಮೇಲೆ ಕೈ ಇಟ್ಟುಕೊಂಡು ಕೆಲವು ಸನ್ನೆಗಳನ್ನು ಮಾಡಿದ್ದಾನೆ. ನಿರಂತರವಾಗಿ ನನ್ನತ್ತ ನೋಡುತ್ತಿರುವುದ ಗೊತ್ತಾಯಿತು. ಈ ಘಟನೆ ಮಧ್ಯಾಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಮಧ್ಯಾಹ್ನ 2.30 ರ ಸುಮಾರಿಗೆ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.
ಹಾಡಹಗಲೇ ಇಂತಹ ಘಟನೆ ನಡೆದಿದೆ. ಘಟನೆಯಿಂದ ಹೆಣ್ಣುಮಕ್ಕಳ ಸುರಕ್ಷತೆ ಬಗ್ಗೆ ಆತಂಕ ಮೂಡಿದೆ. ಈ ಬಗ್ಗೆ ಆತನನ್ನು ಪ್ರಶ್ನಿಸಲು ಪ್ರಯತ್ನಿಸಿದ ಆದರೆ ಆ ಸಿಬ್ಬಂದಿ ನನ್ನತ್ತ ನೋಡುತ್ತ ಸನ್ನೆ ಮಾಡುತ್ತಿದ್ದ. ಬಳಿಕ ವಿಡಿಯೋ ಮಾಡಿದೆ ಎಂದು ಆ ಮಹಿಳೆ ಹೇಳಿದ್ದಾರೆ.
ಪೊಲೀಸರಿಂದ ಮಹಿಳೆಗೆ ಸ್ಪಂದನೆ
ಮೆಟ್ರೋ ಭದ್ರತಾ ಸಿಬ್ಬಂದಿಯ ಅಸಭ್ಯ ವರ್ತನೆಯ ವಿಡಿಯೋವನ್ನು ಮಹಿಳೆಯು ಬೆಂಗಳೂರು ಮೆಟ್ರೋ ಅಧಿಕಾರಿಗಳಿಗೆ ರವಾನಿಸಿದ್ದಾರೆ. ಆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ಇದಕ್ಕೆ ಸ್ಪಂದನೆ ಇನ್ನೂ ಸಿಕ್ಕಿಲ್ಲ ಎನ್ನಲಾಗಿದೆ. ಆದರೆ ಪೊಲೀಸರು ಮಹಿಳೆ ಸಂಪರ್ಕಿಸಿ ಘಟನೆ ಕುರಿತು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications