Namma Metro: ಆರ್.ವಿ.ರಸ್ತೆ- ಬೊಮ್ಮಸಂದ್ರ 'ಹಳದಿ ಮಾರ್ಗ'ದಲ್ಲಿ ಶೀಘ್ರವೇ ಸಂಚಾರ
ಬೆಂಗಳೂರು, ಅಕ್ಟೋಬರ್ 30: ಸಿಲಿಕಾನ್ ಸಿಟಿಯಲ್ಲಿ ನಿತ್ಯ ಲಕ್ಷಾಂತರ ಮಂದಿಗೆ ವೇಗದ ಸಾರಿಗೆ ನೀಡುರುತ್ತಿರುವ 'ನಮ್ಮ ಮೆಟ್ರೋ'ದ ಆರ್.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದವರೆಗಿನ 'ಹಳದಿ ಮಾರ್ಗ' ನಿರ್ಮಾಣ ಕೆಲಸ ಬಹುತೇಕ ಮುಗಿದಿದೆ. ಬಾಕಿ ಕೆಲಸ ಹಾಗೂ ಪ್ರಾಯೋಗಿಕ ಪರಿಶೀಲನೆ ಬಳಿಕ ಆದಷ್ಟು ಶೀಘ್ರವೇ ಆರಂಭವಾಗಲಿದೆ.
ಒಟ್ಟು 18.82 ಕಿ.ಮೀ ಉದ್ದದ ಆರ್.ವಿ.ರಸ್ತೆ-ಬೊಮ್ಮಸಂದ್ರವರೆಗಿನ 'ಹಳದಿ ಮಾರ್ಗ'ದ ನಿರ್ಮಾಣ ಕಾಮಗಾರಿ ಶೇ. 90ರಷ್ಟು ಪೂರ್ಣಗೊಂಡಿದೆ. ಮೆಟ್ರೋ ಎರಡನೇ ಹಂತದ ಯೋಜನೆಯ ವ್ಯಾಪ್ತಿಗೆ ಬರುವ ಈ ಕಾಮಗಾರಿಯಲ್ಲಿ ಸಿವಿಲ್ ಕೆಲಸಗಳು ಮುಗಿದಿದ್ದು, ತಾಂತ್ರಿಕ ಕೆಲಸಗಳು, ಹಳಿ ಜೋಡಣೆ ಕೆಲಸಗಳು ಬಾಕಿ ಇವೆ. ಒಟ್ಟು ಮೂರು ಹಂತದಲ್ಲಿ ಇಲ್ಲಿ ಕೆಲಸಗಳು ನಡೆದಿವೆ.
ಈ ಮಾರ್ಗದಲ್ಲಿ 2023ರ ಜೂನ್ ವೇಳೆಗೆ ವಾಣಿಜ್ಯ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ. ಇದಕ್ಕೂ ಮುನ್ನ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಉನ್ನತ ಅಧಿಕಾರಿಗಳು ಪ್ರಾಯೋಗಿಕ ಸಂಚಾರ ನಡೆಸಲಿದ್ದಾರೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದರು.

ಮೆಟ್ರೋ ಹಳಿಗಳ ಜೋಡಣಾ ಕೆಲಸ ಬಾಕಿ
ಈ ಮೆಟ್ರೋ ಹಳದಿ ಮಾರ್ಗದ ಒಟ್ಟು (18.82 ಕಿ.ಮೀ) ಉದ್ದದಲ್ಲಿ ಬೊಮ್ಮಸಂದ್ರದಿಂದ ಬೆರಟೇನ ಅಗ್ರಹಾರ (6.38 ಕಿ.ಮೀ), ಬೆರಟೇನ ಅಗ್ರಹಾರದಿಂದ ಬೊಮ್ಮನಹಳ್ಳಿ ವರೆಗೆ (6.38ಕಿ.ಮೀ.) ಹಾಗೂ ನಂತರ ಅಲ್ಲಿಂದ ಆರ್.ವಿ .ರಸ್ತೆವರೆಗಿನ (6.37 ಕಿ.ಮೀ.) ಕ್ರಮವಾಗಿ ಮೂರು ಹಂತದಲ್ಲಿ ಕಾಮಗಾರಿಗಳು ನಡೆದಿವೆ. ಈ ಹಂತಗಳಲ್ಲಿ ಕೆಲಸ ಬಹುತೇಕ ಮುಗಿದಿವೆ. ಕಾರ್ಮಿಕರು ಮತ್ತು ಅಧಿಕಾರಿಗಳು ಹಳಿಗಳ ಜೋಡಣೆ ಕೆಲಸದಲ್ಲಿ ನಿರತರಾಗಿದ್ದಾರೆ. ಮುಂದಿನ ವರ್ಷ ಸಾರ್ವಜನಿಕ ಸೇವೆಗೆ ಮುಕ್ತವಾಗಲಿರುವ ಈ ಹಳದಿ ಮಾರ್ಗದಲ್ಲಿ ನಿತ್ಯ ಸಂಚಾರ ದಟ್ಟಣೆ ಅಧಿಕವಾಗಿರುತ್ತದೆ. ಇದರಿಂದ ಸಾರ್ವಜನಿಕರ ಓಡಾಟ ತ್ರಾಸದಾಯಕವಾಗಿದ್ದು, ಮೆಟ್ರೋ ಶೀಘ್ರ ಆರಂಭವಾದರೆ ಹೆಚ್ಚು ಅನುಕೂಲವಾಗುತ್ತದೆ ಎನ್ನುತ್ತಾರೆ ಪ್ರಯಾಣಿಕರು.

ಬಿಎಂಆರ್‌ಸಿಎಲ್‌ಗೆ ಇಲ್ಲಿಂದಲೇ ಹೆಚ್ಚು ಆದಾಯ
4,255 ಕೋಟಿ ರೂ. ವೆಚ್ಚದಲ್ಲಿ ಈ ಹಳದಿ ಮಾರ್ಗದ ಕಾಮಗಾರಿ ನಿರ್ಮಾಣವಾಗುತ್ತಿದೆ. ಆರ್.ವಿ.ರಸ್ತೆಯಿಂದ ಹಿಡಿದು ಬೊಮ್ಮಸಂದ್ರವರೆಗೆ ಒಟ್ಟು 16 ಮೆಟ್ರೋ ನಿಲ್ದಾಣಗಳು ಬರುತ್ತವೆ. ಐಟಿ ಬಿಟಿ ಕಂಪನಿ ಸೇರಿದಂತೆ ಇನ್ನಿತ ಉದ್ಯೋಗಿಗಳು ಈ ಮಾರ್ಗದಲ್ಲಿ ಸಂಚರಿಸುವುದು ಹೆಚ್ಚು. ಈ ಮಾರ್ಗದಲ್ಲಿ ಸರಿ ಸುಮಾರು 3ಲಕ್ಷಕ್ಕೂ ಹೆಚ್ಚು ನಿತ್ಯ ಸಂಚರಿಸುತ್ತಾರೆ ಎನ್ನಲಾಗಿದೆ. ಇಲ್ಲಿ ಮೆಟ್ರೋ ಸಂಚಾರ ಶುರುವಾರದರೆ ಬಿಎಂಆರ್‌ಸಿಎಲ್‌ಗೆ ಅಧಿಕ ಆದಾಯ ಇಲ್ಲಿಂದಲೇ ಬರಬಹುದು ಎನ್ನಲಾಗಿದೆ.
ಈ ಹಳದಿ ಮಾರ್ಗದ 16 ನಿಲ್ದಾಣಗಳ ಪೈಕಿ ಒಂದಾದ ಜಯದೇವ ಮೆಟ್ರೋ ನಿಲ್ದಾಣವು ಇಂಟರ್ ಚೇಂಜ್ ಮೆಟ್ರೋ ನಿಲ್ದಾಣವಾಗಿ ಬದಲಾಗಲಿದೆ. ಗೊಟ್ಟಿಗೆರೆಯಿಂದ ನಾಗವಾರವರೆಗಿನ 'ಗುಲಾಬಿ ಮಾರ್ಗ'ವು ಜಯದೇವ ಆಸ್ಪತ್ರೆ ನಿಲ್ದಾಣ ಬಳಿ ಹಾದು ಹೋಗಲಿದೆ. ಇಲ್ಲಿ ಭವಿಷ್ಯದಲ್ಲಿ ಐದು ಹಂತದ ಸಾರಿಗೆ ವ್ಯವಸ್ಥೆ ಬರಲಿದೆ. ಹೀಗಾಗಿ ಇದು ದೇಶದ ಅತೀ ಎತ್ತರದ ಮೆಟ್ರೋ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಜಯದೇವ ಮೆಟ್ರೋ ನಿಲ್ದಾಣದಲ್ಲಿ ಇಂಟರ್ ಚೇಂಜ್
ಈ ಹಳದಿ ಮಾರ್ಗದ 16ನಿಲ್ದಾಣಗಳ ಪೈಕಿ ಒಂದಾದ ಜಯದೇವ ಮೆಟ್ರೋ ನಿಲ್ದಾಣವು ಇಂಟರ್ ಚೇಂಜ್ ಮೆಟ್ರೋ ನಿಲ್ದಾಣವಾಗಿ ಬದಲಾಗಲಿದೆ. ಗೊಟ್ಟಿಗೆರೆಯಿಂದ ನಾಗವಾರವರೆಗಿನ 'ಗುಲಾಬಿ ಮಾರ್ಗ'ವು ಜಯದೇವ ಆಸ್ಪತ್ರೆ ನಿಲ್ದಾಣ ಬಳಿ ಹಾದು ಹೋಗಲಿದೆ. ಇಲ್ಲಿ ಭವಿಷ್ಯದಲ್ಲಿ ಐದು ಹಂತದ ಸಾರಿಗೆ ವ್ಯವಸ್ಥೆ ಬರಲಿದೆ. ಹೀಗಾಗಿ ಇದು ದೇಶದ ಅತೀ ಎತ್ತರದ ಮೆಟ್ರೋ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಚಾಲಕರಿಲ್ಲದೇ ಮೆಟ್ರೋ ರೈಲು ಸೇವೆ
ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರವರೆಗಿನ ಮಾರ್ಗದಲ್ಲಿ ಆರು ಬೋಗಿ (ಕೋಚ್) ಒಳಗೊಂಡ 12 ರೈಲುಗಳು ನಿತ್ಯ ಓಡಾಡಲಿವೆ. ಚಾಲಕರಿಲ್ಲದೇ ಮೆಟ್ರೋ ಸಂಚರಿಸಬಹುದಾದ ರೈಲುಗಳಿಂದ ಈ ಭಾಗದಲ್ಲಿ ಸರಕ್ಷಿತ ಸಂಚಾರ ಸೇವೆ ಒದಗಿಸಲು ಬಿಎಂಆರ್‌ಸಿಎಲ್ ತಯಾರಿ ನಡೆಸಿದೆ. ಇದರಲ್ಲ ಎಲ್ಲ ನಿರ್ವಹಣೆ ನಮ್ಮ ಮೆಟ್ರೋ ಕಂಟ್ರೋಲ್ ರೂಮ್ ನಿಂದಲೇ ನಡೆಯಲಿದೆ. ಅದಕ್ಕಾಗಿ ಸಿಬ್ಬಂದಿ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
-
IPL 2026: ಆರ್ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್: ಐಪಿಎಲ್ ಟಿಕೆಟ್ ಇದ್ದರೆ 'ನಮ್ಮ ಮೆಟ್ರೋ' ಪ್ರಯಾಣ ಉಚಿತ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು












Click it and Unblock the Notifications