Bengaluru Metro Project: ಕೇಂದ್ರದಿಂದ BMRCLಗೆ ಸಿಗಲಿದೆ ಭರ್ಜರಿ ಅನುದಾನ

ಬೆಂಗಳೂರು, ಫೆಬ್ರವರಿ 02: ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ನಗರದಲ್ಲಿ ವಿವಿಧ ಮೆಟ್ರೋ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಇದರಲ್ಲಿ ನಮ್ಮ ಮೆಟ್ರೋ 3ನೇ ಹಂತದ ಯೋಜನೆ ಪ್ರಮುಖವಾದದ್ದು. ಈ ಯೋಜನೆ ನಗರದ ಟ್ರಾಫಿಕ್ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಇದಕ್ಕಾಗಿ ಆರ್ಥಿಕ ನೆರವು ಕೇಳಿದ್ದ ಬಿಎಂಆರ್‌ಸಿಎಲ್ ಮುಂದಿನ ಕೇಲವೇ ದಿನಗಳಲ್ಲಿ 1,717.62 ಕೋಟಿ ರೂ. ಸ್ವೀಕರಿಸಲಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರದ ಮಹತ್ವದ ಬಜೆಟ್-2025-26 ಮಂಡನೆ ಆಗಿದೆ. ಕೇಂದ್ರದಿಂದ ನಮ್ಮ ಮೆಟ್ರೋ ಯೋಜನೆಗಳಿಗಾಗಿ 1,717.62 ಕೋಟಿ ರೂ. ನೆರವು ಸಿಗಲಿದೆ. ಸಿಗುವ ಈ ಹಣದಲ್ಲಿ ಒಟ್ಟು ಶೇಕಡಾ 70ರಷ್ಟು ಅನುದಾನವನ್ನು ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗೆ ಖರ್ಚು ಮಾಡಲು ನಿರ್ಧರಿಸಲಾಗಿದೆ. ಈ ಹಂತದ ಯೋಜನೆಗಳಿಗೆ ಈಗಾಗಲೇ ಅನುಮೋದನೆ ದೊರೆತಿವೆ. ಅನುದಾನ ಬರಬೇಕಿದೆ.

Bengaluru Namma Metro May Receicve 1 717 62 crore from Union Budget 2025-26

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಮಂಡಿಸಿದ (ಫೆ.1) 2025-26ರ ಕೇಂದ್ರ ಬಜೆಟ್‌ನಲ್ಲಿ ಭಾರತದ ಎಲ್ಲ ಮೆಟ್ರೋ ಯೋಜನೆಗಳಿಗೆಂದು ಒಟ್ಟು 31,239.28 ಕೋಟಿ ರೂ.ಘೋಷಿಸಿದೆ. ಇದು ಕಳೆದ ವರ್ಷ ಇಟ್ಟಿದ್ದ 21,335.98 ಕೋಟಿ ರೂ.ಗಳಿಗಿಂತಲೂ ಅಧಿಕ ಅನುದಾನವಾಗಿದೆ. ಈ ಹಂಚಿಕೆಯ ಹಣದಲ್ಲಿ ಬೆಂಗಳೂರು ಮೆಟ್ರೋಗೆ ಸುಮಾರು 1,717 ಕೋಟಿ ರೂ. ನೆರವು ಬರಬಹುದು. ಮುಂದಿನ 15 ದಿನಗಳಲ್ಲಿ ಈ ಬಗ್ಗೆ ಅಂಕಿ ಸಂಖ್ಯೆಗಳು ನಿಖರವಾಗಿ ಮತ್ತು ಅಧಿಕೃತವಾಗಿ ಗೊತ್ತಾಗಲಿದೆ.

ಸದ್ಯ ನಿರೀಕ್ಷಿತ ಈ ಅನುದಾನ ಇದೇ ಕೇಂದ್ರ ಸರ್ಕಾರ ಕಳೆದ ಸಾಲಿನಲ್ಲಿ (2024-25) ಹಂಚಿಕೆ ಮಾಡಿದ್ದ ಮೊತ್ತಕ್ಕಿಂತ 4,814.58 ಕೋಟಿ ರೂ. ಕಡಿಮೆ. ಈ ಬಾರಿ ನಿರೀಕ್ಷೆಯಷ್ಟು ಅನುದಾನ ಸಿಕ್ಕಿಲ್ಲ. ಬೆಂಗಳೂರು ಉಪನಗರ ರೈಲು ಯೋಜನೆಗೆ ಒಂದಷ್ಟು ಹಣ ನೀಡಲಾಗಿದೆ.

Bengaluru Namma Metro May Receicve 1 717 62 crore from Union Budget 2025-26

BMRCL ಮೆಟ್ರೋ ಹಂತದ 2ನೇ ಯೋಜನೆ 2A (ಸಿಲ್ಕ್‌ಬೋರ್ಡ್-ಕೆ.ಆರ್‌.ಪುರಂ) ಮತ್ತು 2B (ಕೆ.ಆರ್‌.ಪುರಂ-ಬೆಂಗಳೂರು ಏರ್‌ಪೋರ್ಟ್‌) ಯೋಜನೆಗಳಿಗೆ ಕೇಂದ್ರದಿಂದ ಬರಬೇಕಿದ್ದ ಹಣದಲ್ಲಿ ಇನ್ನೂ 517.62 ಕೋಟಿ ರೂ.ಬರಬೇಕಿದೆ. ಇಷ್ಟು ಹಣ ಸಾಲದು ಹಿನ್ನೆಲೆಯಲ್ಲಿ ಮುಂದಿನ ಆರ್ಥಿಕ ವರ್ಷಕ್ಕೂ ಹಣ ನೀಡುವಂತೆ ಈಗಾಗಲೇ ನಮ್ಮ ಮೆಟ್ರೋ ಮನವಿ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.

ಇನ್ನೂ ಮೆಟ್ರೋ ಮೂರನೇ ಹಂತದಲ್ಲಿ ಎರಡು ಮಹತ್ವದ ಕಾರಿಡಾರ್‌ಗಳು ತಲೆ ಎತ್ತಲಿವೆ. ಜೆಪಿ.ನಗರ 4ನೇ ಹಂತದಿಂದ ಕೆಂಪಾಪುರ ವರೆಗೆ ಮತ್ತು ಹೊಸಹಳ್ಳಿಯಿಂದ-ಕಡಬಗೆರೆವರೆಗೆ 44.65 ಕಿ.ಮೀ. ಉದ್ದದ ಎರಡು ಕಾರಿಡಾರ್ ನಿರ್ಮಿಸಲಾಗುತ್ತಿದೆ. ಇದರಲ್ಲಿ ಮೊದಲ ಕಾರಿಡಾರ್‌ಗೆ ಬಿಎಂಆರ್‌ಸಿಎಲ್ ಮಹತ್ವ ನೀಡುತ್ತಿದೆ. ಜೆಪಿ.ನಗರ 4ನೇ ಹಂತ-ಕೆಂಪಾಪುರವರೆಗಿನ ಮೆಟ್ರೋ ಮಾರ್ಗ ನಿರ್ಮಿಸಲು ಈಗಾಗಲೇ 777 ಆಸ್ತಿ ಗುರುತು ಮಾಡಿದೆ. ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದೆ.

ಈ ಎರಡು ಎತ್ತರಿಸಿದ ಕಾರಿಡಾರ್‌ಗಳಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಿಸಬೇಕಿದೆ. ಹೀಗಾಗಿ ಯೋಜನೆಯ ಅಂದಾಜು ವೆಚ್ಚ ಮತ್ತಷ್ಟು ಹಿಗ್ಗಲಿದೆ. ಸದ್ಯ ಕೇಂದ್ರದಿಂದ ಬರುವ ಅನುದಾನ ಪೈಕಿ ಬಹುತೇಕ ಅನುದಾನ ಈ ನಮ್ಮ ಮೆಟ್ರೋ 3ನೇ ಹಂತದ ಕಾಮಗಾರಿಗಳಿಗೆ ಬಳಕೆ ಆಗಲಿದೆ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+