Namma Metro: ಮೆಟ್ರೋ ಇದ್ದರೂ ಜನ ಬರ್ತಿಲ್ಲ: 20 ನಿಲ್ದಾಣಗಳಲ್ಲಿ ಕಡಿಮೆ ಪ್ರಯಾಣಿಕರ ಸಂಚಾರ, ಕಾರಣ ಇಲ್ಲಿದೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಜಾಲ ವಿಸ್ತರಣೆ ಆಗುತ್ತಿದೆ. ಮೂರು ಮೆಟ್ರೋ ಮಾರ್ಗಗಳಲ್ಲಿ ನಿತ್ಯ ಸುಮಾರು 10 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚಾರ ಮಾಡುತ್ತಾರೆ. ನಗರದ ಹೃದಯ ಭಾಗದ ಮೆಜೆಸ್ಟಿಕ್ ಸೇರಿದಂತೆ ಇನ್ನಿತರ ಮೆಟ್ರೋ ನಿಲ್ದಾಣಗಳಲ್ಲಿ ಜನರು ತುಂಬಿ ತುಳುಕಿರುತ್ತಾರೆ. ಆದರೆ ಕೆಲವು ನಿಲ್ದಾಣಗಳು ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿವೆ. ಮೂಲಸೌಕರ್ಯ ಕೊರತೆಯಿಂದಾಗಿ ಜನರು ಸ್ವಂತ ಮತ್ತು ಬಿಎಂಟಿಸಿ ಬಸ್ ಅನುಸರಿಸುತ್ತಿದ್ದಾರೆ. ಪ್ರಯಾಣಿಕರ ಸಂಖ್ಯೆ ಇಳಿಕೆಗೆ ಕಾರಣವೇನು? ಮೆಟ್ರೋ ಅಧಿಕಾರಿಗಳು ವಿಫಲವಾದ್ರಾ?.

ನಗರದ ಹೃದಯಭಾಗದ ಮೆಟ್ರೋ ನಿಲ್ದಾಣಗಳಲ್ಲಿ ಇರುವಂತಹ ಸೌಲಭ್ಯಗಳು ನಗರದಿಂದ ಕೊಂಚ ದೂರವಿರುವ ಜಾಲಹಳ್ಳಿ, ಪೀಣ್ಯ ಮೆಟ್ರೋ ನಿಲ್ದಾಣ, ಜ್ಞಾನಭಾರತಿ, ಬೆರಟೇನ ಅಗ್ರಹಾರದಲ್ಲಿ ಇಲ್ಲ ಎನ್ನಲಾಗಿದೆ. ಕೆಲವು ಭಾಗಗಳಲ್ಲಿ ಮೆಟ್ರೋ ನಿಲ್ದಾಣದಿಂದ 1-2 ಕಿಲೋ ಮೀಟರ್ ದೂರದಿಂದ ಬಂದು ಮೆಟ್ರೋ ಏರಲು ಆಗುವುದಿಲ್ಲ. ಮೆಟ್ರೋ ಫೀಡರ್ ಬಸ್‌ಗಳ ಕೊರತೆ ಇದೆ. ನಿಲ್ದಾಣವರೆಗೆ ಆಟೋಗೆ ಬರಲು ದುಬಾರಿ ಹಣ ನೀಡಬೇಕು. ಮುಖ್ಯವಾಗಿ ಬಿಎಂಟಿಸಿ ಬಸ್‌ ಟಿಕೆಟ್ ದರಕ್ಕಿಂತ ನಮ್ಮ ಮೆಟ್ರೋ ಪ್ರಯಾಣವೇ ದುಬಾರಿಯಾಗಿದೆ.

Bengaluru Namma Metro

ಪರಿಸ್ಥಿತಿ ಹೀಗಿರುವಾಗ ಮೆಟ್ರೋ ನಿಲ್ದಾಣಗಳಿಂದ ದೂರ ಇರುವ ನಿವಾಸಿಗಳು ಮೆಟ್ರೋ ಹತ್ತುವ ಬದಲಾಗಿ ಸ್ವಂತ ಇಲ್ಲವೇ ಸಾರಿಗೆ ಬಸ್‌ ಅನುರಿಸುತ್ತಾರೆ ಈ ಕಾರಣದಿಂದಲೇ ನಗರದ ಸುಮಾರು 20 ಮೆಟ್ರೋ ನಿಲ್ದಾಣಗಳಲ್ಲಿ ಕಡಿಮೆ ಸಂಖ್ಯೆಯ ಜನರು ಕಂಡು ಬರುತ್ತಿದ್ದು, ನಿಲ್ದಾಣಗಳು ಬಿಕೋ ಎನ್ನುತ್ತಿವೆ.

ಹೆದ್ದಾರಿ ದಾಟೋದು ಸಮಸ್ಯೆ, ಸ್ಕೈವಾಕ್ ಇಲ್ಲ

ಪೀಣ್ಯ ಕೈಗಾರಿಕಾ ಪ್ರದೇಶ, ನಾಗಸಂದ್ರ, ಜಾಲಹಳ್ಳಿ ಮತ್ತು ದಾಸರಹಳ್ಳಿ ಭಾಗದ ಮೆಟ್ರೋ ನಿಲ್ದಾಣಗಳಿಂದ ಇಳಿಯುವ ಜನರು ತುಮಕೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ ದಾಟಬೇಕಿರುತ್ತದೆ. ಮೆಟ್ರೋ ನಿಲ್ದಾಣಗಳನ್ನು ಸರಾಗವಾಗಿ ತಲುಪಲು, ನಿಲ್ದಾಣದಿಂದ ಇಳಿದು ಸಾಗಲು ಸೂಕ್ತ ಪಾದಾಚಾರಿ ಮೇಲ್ಸೇತುವೆ (ಸ್ಕೈವಾಕ್, FOB) ಸಂಪರ್ಕ, ಇತರ ಸೌಕರ್ಯಗಳು ಇಲ್ಲ. ಪ್ರಯಾಣಿಕರು ಇಲ್ಲಿ ರಸ್ತೆ ದಾಟಲು ಸಾಹಸಪಡಬೇಕಾಗುತ್ತದೆ.

ಎಲ್ಲ ನಿಲ್ದಾಣಗಳ ಪ್ರಯಾಣಿಕರಿಗೆ ಆದ್ಯತೆ ನೀಡಬೇಕು?

ಮೆಜೆಸ್ಟಿಕ್, ಕೆ.ಆರ್.ಪುರಂ, ಚಿಕ್ಕಪೇಟೆ, ಎಂಜಿ ರಸ್ತೆ, ವಿಧಾನಸೌಧ ಮೆಟ್ರೋ ನಿಲ್ದಾಣ, ವಿಜಯನಗರ, ಸಿಲ್ಕ್‌ಬೋರ್ಡ್ ಜಂಕ್ಷನ್, ಜಯನಗರ ದಂತಹ ಹೃದಯಭಾಗದಲ್ಲಿ ಯಾವುದೇ ಸಮಸ್ಯೆ ಇಲ್ಲ. ಇಲ್ಲಿ ಎಲ್ಲ ಸೌಕರ್ಯಗಳು ಇವೆ. ಮೆಟ್ರೋ ನಿಲ್ದಾಣಗಳವರೆಗೆ ಬಸ್, ಪಾದಾಚಾರಿ ಮೇಲ್ಸೇತುವೆ ಇವೆ. ಮೆಟ್ರೋ ಅಧಿಕಾರಿಗಳು ಇಲ್ಲಿ ಮಾತ್ರವೇ ಆದ್ಯತೆ ನೀಡುತ್ತಾರೆ. ಹೊರ ವಲಯದ ನಿಲ್ದಾಣ, ಪ್ರಯಾಣಿಕರನ್ನು ನಿರ್ಲಕ್ಷಿಸಲಾಗುತ್ತಿದ್ದಾರಾ? ಎಂಬ ಅನುಮಾನ ಮೂಡಿದೆ.

ಕಡಿಮೆ ಜನರು ಓಡಾಡುವ ನಿಲ್ದಾಣಗಳು ಯಾವುವು?

ನಮ್ಮ ಮೆಟ್ರೋ ನೇರಳೆ, ಹಸಿರು ಮತ್ತು ಹಳದಿ ಮಾರ್ಗದಲ್ಲಿ ನಗರದಿಂದ ದೂರವಿರುವ 20 ನಿಲ್ದಾಣಗಳಲ್ಲಿ ಜನ ಸಂಚಾರ ಕಡಿಮೆ ಇದೆ. ಹಳದಿ ಮಾರ್ಗದ ಬೆರಟೇನ ಅಗ್ರಹಾರ ನಿಲ್ದಾಣದಲ್ಲಿ ದಿನಕ್ಕೆ ಕೇವಲ 1243 ಮಂದಿ ಮಾತ್ರವೇ ಸಂಚಾರ ಮಾಡುತ್ತಾರೆ. ಸಿಂಗಸಂದ್ರ ನಿಲ್ದಾಣದಲ್ಲಿ 2539 ಪ್ರಯಾಣಿಕರು, ಹೊಸೂರು ರಸ್ತೆ ನಿಲ್ದಾಣದಲ್ಲಿ 3168 ಜನ, ಮಂಜುನಾಥ ನಗರ ನಿಲ್ದಾಣದಲ್ಲಿ 1411 ಜನರು, ಪೀಣ್ಯ ಇಂಡಸ್ಟ್ರೀ 2676, ತಲಘಟ್ಟಪುರ 3349, ನಾಯಂಡಹಳ್ಳಿ 2645 ಜನ, ಹೋಪ್ ಫಾರ್ಮ್ 3190, ದೀಪಾಂಜಲಿ ನಗರ 4610 ಮಂದಿ ಮಾತ್ರವೇ ದಿನಕ್ಕೆ ಸಂಚಾರ ಮಾಡುತ್ತಾರೆ.

ಹೊಂಗಸಂದ್ರ, ಕೂಡ್ಲುಗೇಟ್, ಎಲೆಕ್ಟ್ರಾನಿಕ್ ಸಿಟಿ, ಮಾದಾವರ, ಚಿಕ್ಕಬಿದರಕಲ್ಲು, ಜ್ಞಾನಭಾರತಿ, ಮಹಾಕವಿ ಕುವೆಂಪು ರಸ್ತೆ ನಿಲ್ದಾಣಗಳಲ್ಲೂ ನಿರೀಕ್ಷಿತ ಪ್ರಯಾಣಿಕರ ಸಂಚಾರ ಆಗುತ್ತಿಲ್ಲ. ಹೀಗಾಗಿ ಈ ಭಾಗದಲ್ಲೂ ಮೆಟ್ರೋ ಫಿಡರ್ ಬಸ್‌ಗಳನ್ನು ಬಿಡುಗಬೇಕು, ಹಾಲಿ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು. ಪ್ರಯಾಣಿಕರಿಗೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು. ನಗರದ ಹೊರ ವಲಯದ ನಿಲ್ದಾಣ, ಪ್ರಯಾಣಿಕರಿಗೂ ಮೆಟ್ರೋ ಆದ್ಯತೆ ನೀಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+