ಭರ್ಜರಿ ಬಾಡೂಟ.. ನಾಟಿ ಕೋಳಿ ಸಾರು & ಮುದ್ದೆ ಉಣ್ಣುವ ಸ್ಪರ್ಧೆ ಬೆಂಗಳೂರಲ್ಲಿ!
ನಾಟಿ ಕೋಳಿ ಸಾರು & ರಾಗಿ ಮುದ್ದೆ.. ಅಬ್ಬಬ್ಬಾ.. ಈ ಪದ ಕಿವಿಗೆ ಬೀಳುತ್ತಿದ್ದಂತೆ ಎಷ್ಟೋ ಜನರ ಬಾಯಲ್ಲಿ ನೀರು ಬಂದಿರುತ್ತೆ. ಯಾಕಂದ್ರೆ ತಿಂದವನೇ ಬಲ್ಲ ನಾಟಿ ಕೋಳಿ ಸಾರು & ರಾಗಿ ಮುದ್ದೆ ರುಚಿಯ ಎನ್ನುವಂತೆ, ಪಕ್ಕಾ ಕನ್ನಡ ನಾಡಿನ ಊಟ ಇದು. ನಾಟಿ ಕೋಳಿ ಸಾರು & ರಾಗಿ ಮುದ್ದೆ ಊಟ ಸಿಗುವುದಕ್ಕೂ ಪುಣ್ಯ ಮಾಡಿರಬೇಕು ಅಂತಾರೆ. ಇಂತಹ ಮಾತು & ಕಥೆ ನಡುವೆ, ರಾಜಧಾನಿ ಬೆಂಗಳೂರಿನಲ್ಲಿ ನಾಟಿ ಕೋಳಿ ಸಾರು & ರಾಗಿ ಮುದ್ದೆ ಉಣ್ಣುವ ಸ್ಪರ್ಧೆ ಆಯೋಜನೆ ಮಾಡಲಾಗಿದೆ!
ಕನ್ನಡ ನಾಡಿನ ಆಹಾರ ಸಂಸ್ಕೃತಿ ಸಮೃದ್ಧವಾಗಿದ್ದು, ಜಾಗತಿಕ ಮಟ್ಟದಲ್ಲಿ ಕೂಡ ಕನ್ನಡ ನಾಡಿನ & ಕನ್ನಡಿಗರ ಆಹಾರ ಪದ್ಧ ಫೇಮಸ್. ಅದರಲ್ಲೂ ನಾಟಿ ಕೋಳಿ ಸಾರು & ರಾಗಿ ಮುದ್ದೆ.. ಅಬ್ಬಬ್ಬಾ ಅನ್ನಬೇಕು ಈ ರುಚಿಗೆ. ಇದೀಗ ಬೆಂಗಳೂರಿನಲ್ಲಿ ನಾಟಿ ಕೋಳಿ ಸಾರು & ರಾಗಿ ಮುದ್ದೆ ತಿನ್ನುವ ಸ್ಪರ್ಧೆ ಆಯೋಜನೆ ಮಾಡಲಾಗಿದೆ.

ಇಷ್ಟು ದಿನ ಮಂಡ್ಯ, ಮೈಸೂರು ಸೇರಿದಂತೆ ಸುತ್ತಮುತ್ತಲ ಭಾಗದಲ್ಲಿ ನಾಟಿ ಕೋಳಿ ಸಾರು & ರಾಗಿ ಮುದ್ದೆ ತಿನ್ನುವ ಸ್ಪರ್ಧೆ ಬಗ್ಗೆ ಕೇಳಿದ್ದೆವು. ಆದರೆ ಇದೀಗ ಇಂತಹ ಮಹತ್ವದ ಸ್ಪರ್ಧೆ ಬೆಂಗಳೂರಿಗೇ ಎಂಟ್ರಿ ಕೊಟ್ಟು ಸಖತ್ ಗಮನ ಸೆಳೆಯುತ್ತಿದೆ. ಹಾಗಿದ್ರೆ ಈ ಸ್ಪರ್ಧೆ ನಡೆಯುವುದು ಯಾವ ಏರಿಯಾದಲ್ಲಿ? ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ, ಈ ಫೋಟೋದಲ್ಲಿ ಇರುವ ಮಾಹಿತಿ ಏನು? ಮಾಹಿತಿ ತಿಳಿಯಲು ಮುಂದೆ ಓದಿ.
ನವೆಂಬರ್ 10ರಂದು ಸ್ಪರ್ಧೆ ಆಯೋಜನೆ!
ಬೆಂಗಳೂರಿನ ಪ್ರತಿಷ್ಠಿ ಲೇಔಟ್ ಪೈಕಿ ಒಂದಾದ ಎಚ್‌ಎಸ್‌ಆರ್ ಬಡಾವಣೆಯ ಪರಂಗಿಪಾಳ್ಯ ಸಮೀಪ ಇದೀಗ ನಾಟಿ ಕೋಳಿ ಸಾರು & ರಾಗಿ ಮುದ್ದೆ ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿದೆ. ಅಷ್ಟಕ್ಕೂ ನವೆಂಬರ್ 10ರ ಭಾನುವಾರ ಈ ಸ್ಪರ್ಧೆ ಏರ್ಪಡಿಸಲಾಗಿದೆ. ಭಾನುವಾರ ಮಧ್ಯಾಹ್ನ 12 ಗಂಟೆಗೆ ಸ್ಪರ್ಧೆ ಆರಂಭ ಆಗಲಿದ್ದು, 12:45ರ ತನಕ ಈ ಸ್ಪರ್ಧೆಯು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೊದಲ ಬಾರಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ರಾಜ್ಯಮಟ್ಟದ ನಾಟಿ ಕೋಳಿ ಸಾರು ಮತ್ತು ರಾಗಿ ಮುದ್ದೆ ತಿನ್ನುವ ಸ್ಪರ್ಧೆ ಆಯೋಜಿಸಲಾಗಿದೆ.
ಬಹುಮಾನ ಏನೆಲ್ಲಾ ಸಿಗಲಿದೆ?
'ಕರ್ನಾಟಕ ಸುವರ್ಣ ಸಂಭ್ರಮ'ದ ಹಿನ್ನೆಲೆ ಈ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ. ಎಚ್‌ಎಸ್ಆರ್ ಬಡಾವಣೆಯ ಸ್ಥಳೀಯ ಮುಖಂಡ ಅನಿಲ್ ರೆಡ್ಡಿ ಮುಂದಾಳತ್ವದಲ್ಲಿ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ನಾಟಿ ಕೋಳಿ ಸಾರು & ರಾಗಿ ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ, ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ ಟಗರು, ದ್ವಿತೀಯ ಬಹುಮಾನ ಕುರಿ ಪಟ್ಲಿ, 3ನೇ ಬಹುಮಾನವಾಗಿ 2 ನಾಟಿ ಕೋಳಿ ವಿತರಣೆ ಮಾಡುವ ಘೋಷಣೆ ಹೊರಡಿಸಲಾಗಿದೆ.
ಸ್ಪರ್ಧೆಗೆ ಪ್ರವೇಶ ಸಂಪೂರ್ಣ ಉಚಿತ
ಈ ಬಹುಮಾನದ ಜೊತೆ ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನ 32 ಇಂಚಿನ ಟಿವಿ & ದ್ವಿತೀಯ ಬಹುಮಾನವಾಗಿ ಮಿಕ್ಸಿ ಹಾಗೂ ತೃತೀಯ ಬಹುಮಾನ ಕಿಚನ್ ಸೆಟ್ ವಿತರಿಸುವ ಬಗ್ಗೆ ಮಾಹಿತಿ ನೀಡಲಾಗಿದೆ. ಎಚ್‌ಎಸ್‌ಆರ್ ಬಡಾವಣೆಯ ನಾಟಿ ಕೋಳಿ ಸಾರು & ರಾಗಿ ಮುದ್ದೆ ತಿನ್ನುವ ಸ್ಪರ್ಧೆಗೆ ಪ್ರವೇಶ ಸಂಪೂರ್ಣ ಉಚಿತವಾಗಿದೆ. ಆದರೆ ಈ ಸ್ಪರ್ಧೆಗೆ ಮೊದಲು ರಿಜಿಸ್ಟರ್ ಮಾಡಿಕೊಳ್ಳುವ 125 ಸ್ಪರ್ಧಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎನ್ನುವ ಮಾಹಿತಿ ನೀಡಲಾಗಿದೆ. ಹಾಗೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರುವ ಫೋಟೋ ಪ್ರಕಾರ, ಸ್ಪರ್ಧೆಗೆ ರಿಜಿಸ್ಟರ್ ಮಾಡಿಕೊಳ್ಳಲು & ಹೆಚ್ಚಿನ ಮಾಹಿತಿಗೆ 99165 06837ಗೆ ಸಂಪರ್ಕ ಮಾಡಬಹುದಾಗಿದೆ.
ಸಚಿವರು & ವಿಧಾನ ಪರಿಷತ್ ಸದಸ್ಯರು ಭಾಗಿ
ನಾಟಿ ಕೋಳಿ ಸಾರು & ರಾಗಿ ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಬಹುಮಾನ ವಿತರಿಸಲಿದ್ದಾರೆ. ಹಾಗೇ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಉದ್ಘಾಟನೆ ಮಾಡುವರು, ಹಾಗೇ ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರಾದ ಟಿ. ವಾಸುದೇವರೆಡ್ಡಿ ಅಧ್ಯಕ್ಷತೆ ವಹಿಸುತ್ತಾರೆ ಎಂದು ಮಾಹಿತಿ ನೀಡಲಾಗಿದೆ. ಹೀಗಾಗಿ ಬೆಂಗಳೂರಿನ ಎಚ್‌ಎಸ್‌ಆರ್ ಬಡಾವಣೆಯಲ್ಲಿ ನಡೆಯುತ್ತಿರುವ ಈ ಸ್ಪರ್ಧೆ ಇದೀಗ ಭಾರಿ ಗಮನ ಸೆಳೆದಿದ್ದು, ನಾಟಿ ಕೋಳಿ ಸಾರು & ರಾಗಿ ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ಭಾಗಿ ಆಗಲು ಜನ ಕಾಯುತ್ತಿದ್ದಾರೆ.












Click it and Unblock the Notifications