Bengaluru-Mysuru Expressway : ಅಂದು ಮತ್ತು ಇಂದು- ಎಕ್ಸ್‌ಪ್ರೆಸ್‌ವೇ ರೂಪಾಂತರದ ವಿಡಿಯೊ ಹಂಚಿಕೊಂಡ ಗಡ್ಕರಿ
Bengaluru- Mysore Expressway ಗೆ ಸಂಬಂಧಿಸಿದ ದೃಶ್ಯಾವಳಿಗಳು ಮತ್ತು ಫೋಟೋಗಳೂ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಿ ತುಳುಕುತ್ತಿವೆ. ಇವುಗಳನ್ನು ನೋಡಿ.
ಬೆಂಗಳೂರು, ಮಾರ್ಚ್ 14: ಪ್ರಧಾನಿ ನರೇಂದ್ರ ಮೋದಿ ಭಾನುವಾರ Bengaluru- Mysore Expressway ಅನ್ನು ಉದ್ಘಾಟಿಸಿದರು. ಬಹು ನಿರೀಕ್ಷಿತ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕರ್ನಾಟಕದ ಎರಡು ಮಹಾನಗರಗಳನ್ನು ಸಂಪರ್ಕಿಸಲಿದೆ. ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕೇವಲ 75 ನಿಮಿಷಗಳಿಗೆ ಇಳಿಸುವ ಮೂಲಕ ತಡೆರಹಿತ ಸಂಪರ್ಕವನ್ನು ಸಾಧಿಸಲಿದೆ. ಅತೀ ವೇಗದ ಕಾರಿಡಾರ್ ( ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ) ಇಡೀ ಪ್ರದೇಶದ ಬೆಳವಣಿಗೆಯ ಪಥಕ್ಕೆ ಕೊಡುಗೆ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.
Bengaluru- Mysore Expressway ಗೆ ಸಂಬಂಧಿಸಿದ ದೃಶ್ಯಾವಳಿಗಳು ಮತ್ತು ಫೋಟೋಗಳೂ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಿ ತುಳುಕುತ್ತಿವೆ. ಇವುಗಳನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ, ಮೈಸೂರು ಸಂಸದ ಸೇರಿದಂತೆ ಇತರ ಸಚಿವರು, ಶಾಸಕರು, ಮುಖಂಡರು ಸೇರಿದಂತೆ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ.

Thank you @narendramodi ji.
— Pratap Simha (@mepratap) March 11, 2023
Before & After.
Bengaluru-Mysuru Highway#mysurubengaluruexpressway
VC @Droneman pic.twitter.com/HacMT7pq9O
ಹೊಸದಾಗಿ ನಿರ್ಮಿಸಲಾದ ಎಕ್ಸ್‌ಪ್ರೆಸ್‌ವೇಯ ಅಭಿವೃದ್ಧಿಗೂ ಮೊದಲು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಟ್ರಾಫಿಕ್ ಸ್ಥಿತಿಯನ್ನು ತೋರಿಸುವ ದೃಶ್ಯಗಳನ್ನು ಅಂತರ್ಜಾಲದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಅಭಿವೃದ್ಧಿಯ ವಿವಿಧ ಹಂತಗಳನ್ನು ಟ್ರ್ಯಾಕ್ ಮಾಡುತ್ತಿರುವ ಟ್ವಿಟರ್ ಬಳಕೆದಾರ ಡ್ರೋನ್ ಮ್ಯಾನ್ ಈ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ. ಈ ವಿಡಿಯೊವನ್ನು ಹಲವಾರು ನೆಟಿಜನ್‌ಗಳು, ವಿಶೇಷವಾಗಿ ಕರ್ನಾಟಕದ ಆಡಳಿತಾರೂಢ ಬಿಜೆಪಿ ಮುಖಂಡರು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.

ಕೇಂದ್ರ ಸರ್ಕಾರದ ಪ್ರಮುಖ ಭಾರತಮಾಲಾ ಪರಿಯೋಜನಾ (BMP) ಭಾಗವಾಗಿ ಸುಮಾರು 8500 ಕೋಟಿ ರೂಪಾಯಿ ವೆಚ್ಚದಲ್ಲಿ ಮಹತ್ವಾಕಾಂಕ್ಷೆಯ 118-ಕಿಮೀ Bengaluru- Mysore Expressway ನಿರ್ಮಿಸಲಾಗಿದೆ. ಇದು ಆರು-ಪಥದ ವಿಸ್ತರಣೆಯನ್ನು ಹೊಂದಿದೆ. ಜೊತೆಗೆ ಎಕ್ಸ್‌ಪ್ರೆಸ್‌ವೇಯ ಎರಡೂ ಬದಿಗಳಲ್ಲಿ ಎರಡು-ಪಥದ ಸರ್ವಿಸ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಇದನ್ನು 10- ಲೇನ್ ಕಾರಿಡಾರ್ ಆಗಿ ನಿರ್ಮಾಣ ಮಾಡಲಾಗುತ್ತಿದೆ.
#Bengaluru_Mysuru_Highway #PragatiKaHighway #GatiShakti pic.twitter.com/yv1TXfHpuV
— Nitin Gadkari (@nitin_gadkari) March 12, 2023
ಪ್ರವೇಶ ನಿಯಂತ್ರಿತ ಹೈಸ್ಪೀಡ್ ಕಾರಿಡಾರ್ ಅನ್ನು ಎರಡು ಪ್ರತ್ಯೇಕ ಹಂತಗಳಲ್ಲಿ ನಿರ್ಮಿಸಲಾಗಿದೆ - ನಿಡಘಟ್ಟ ಮತ್ತು ಮೈಸೂರು ನಡುವೆ 61 ಕಿಮೀ ಮತ್ತು ಬೆಂಗಳೂರು ಮತ್ತು ನಿಡಘಟ್ಟ ನಡುವೆ 58 ಕಿಮೀ. ಇದು 8 ಕಿಮೀ ಉದ್ದದ ಎಲಿವೇಟೆಡ್ ಕಾರಿಡಾರ್‌ಗಳು, 42 ಸಣ್ಣ ಸೇತುವೆಗಳು, 64 ಅಂಡರ್‌ಪಾಸ್‌ಗಳು, 11 ಮೇಲ್ಸೇತುವೆಗಳು, ನಾಲ್ಕು ರೋಡ್- ಓವರ್ - ಬ್ರಿಡ್ಜ್‌ಗಳು (ROB ಗಳು) ಮತ್ತು ಐದು ಬೈಪಾಸ್‌ಗಳನ್ನು ಹೊಂದಿದೆ.












Click it and Unblock the Notifications