Bengaluru-Mysuru Expressway: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 24 ಮೇಲ್ಸೇತುವೆಗಳ ನಿರ್ಮಾಣ: ವಿವರ
ಕರ್ನಾಟಕ ಸರ್ಕಾರವು ಮುಂದಿನ ತಿಂಗಳುಗಳಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ 24 ಮೇಲ್ಸೇತುವೆಗಳನ್ನು ನಿರ್ಮಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಎಕ್ಸ್‌ಪ್ರೆಸ್‌ವೇ ಅಕ್ಕಪಕ್ಕ ವಾಸಿಸುವ ಗ್ರಾಮಸ್ಥರಿಂದ ಸಾಕಷ್ಟು ದೂರುಗಳು ಬಂದ ನಂತರ ಕರ್ನಾಟಕ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಸೇತುವೆ ನಿರ್ಮಾಣ ಯೋಜನೆಯನ್ನು ಪ್ರಸ್ತಾಪಿಸಲು ಸರ್ಕಾರ ಈಗಾಗಲೇ ಎನ್‌ಎಚ್‌ಎಐ (ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ)ಗೆ ಕೇಳಿದೆ. ಇದರಿಂದಾಗಿ ಗ್ರಾಮಸ್ಥರಿಗೆ ರಸ್ತೆ ದಾಟಲು ಅನುಕೂಲವಾಗಲಿದೆ ಎಂದು ಹೇಳಿದೆ.

ರಾಜ್ಯ ವಿಧಾನಸಭೆಯಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಎಕ್ಸ್‌ಪ್ರೆಸ್‌ವೇಗೆ ಅಡ್ಡಲಾಗಿ ಒಟ್ಟು 24 ಮೇಲ್ಸೇತುವೆಗಳು ಬರಲಿವೆ. ಇವುಗಳು ಗ್ರಾಮಸ್ಥರಿಗೆ ಬೇಲಿಯಿಂದ ಹಾರಿ ಅಥವಾ ಹಾನಿಯಾಗದಂತೆ ಎಕ್ಸ್‌ಪ್ರೆಸ್‌ವೇ ದಾಟಲು ಸಹಾಯ ಮಾಡುತ್ತದೆ. ಬೆಂಗಳೂರು ನಗರ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಇವುಗಳನ್ನು ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಗ್ರಾಮಸ್ಥರಿಗೆ ತೊಂದರೆ
ಈ ಹಿಂದೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಎಕ್ಸ್‌ಪ್ರೆಸ್‌ವೇಯಲ್ಲಿನ ಬೇಲಿಗಳನ್ನು ಹಾನಿ ಮಾಡದಂತೆ ಗ್ರಾಮಸ್ಥರನ್ನು ಒತ್ತಾಯಿಸಿದರು. ಹೆದ್ದಾರಿಯ ಎರಡೂ ಬದಿಯಲ್ಲಿ ನಿರ್ಮಿಸಿರುವ ಕಂಬಗಳ ಮೇಲಿನ ಬ್ರೇಸಿಂಗ್‌ಗಳನ್ನು ಕಳ್ಳತನ ಮಾಡಲಾಗುತ್ತಿದೆ ಎಂದು ಪ್ರತಾಪ್ ಸಿಂಹ ಹೇಳಿದರು.
"ಫೆನ್ಸಿಂಗ್ ಅಡಚಣೆಗಳ ಜೊತೆಗೆ, ಕಂಬಗಳ ಮೇಲಿನ ಬ್ರೇಸಿಂಗ್‌ಗಳು ಕಾಣೆಯಾಗಿವೆ ಮತ್ತು ಅಂತಹ ವಿಷಯಗಳ ಬಗ್ಗೆ ದೂರು ನೀಡಲು ನನಗೆ ದುಃಖವಾಗಿದೆ. ಇವೆಲ್ಲವನ್ನೂ ನಿಮ್ಮ ಸ್ವಂತ ಹಣದಿಂದ ಸ್ಥಾಪಿಸಲಾಗಿದೆ ಮತ್ತು ಅವುಗಳನ್ನು ನಿಮ್ಮ ಹಣದಿಂದ ಮರು-ಸ್ಥಾಪಿಸಲಾಗುವುದು. ದಯವಿಟ್ಟು ಅಂತಹ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಡಿ ಮತ್ತು ಮೂಲಸೌಕರ್ಯಗಳನ್ನು ಬುದ್ದಿವಂತಿಕೆಯಿಂದ ಬಳಸಿ," ಎಂದು ಅವರು ಹೇಳಿದರು.
ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ 119 ಕಿಮೀ ಎಕ್ಸ್‌ಪ್ರೆಸ್‌ವೇಯನ್ನು ರೂ. 8,408 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಒಟ್ಟು ಉದ್ದದಲ್ಲಿ, 52 ಕಿಮೀ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ಐದು ಬೈಪಾಸ್‌ಗಳನ್ನು ಒಳಗೊಂಡಿದೆ.
ಈ ಯೋಜನೆಯು 11 ಮೇಲ್ಸೇತುವೆಗಳು, 64 ಅಂಡರ್‌ಪಾಸ್‌ಗಳು, ಐದು ಬೈಪಾಸ್‌ಗಳು, 42 ಸಣ್ಣ ಸೇತುವೆಗಳನ್ನು ಒಳಗೊಂಡಿದೆ. ಎಕ್ಸ್‌ಪ್ರೆಸ್‌ವೇ ಆರು ಲೇನ್‌ಗಳನ್ನು ಹೊಂದಿದ್ದು, ಎರಡೂ ಬದಿಗಳಲ್ಲಿ ಹೆಚ್ಚುವರಿ ದ್ವಿಪಥದ ಸೇವಾ ರಸ್ತೆಗಳನ್ನು ಹೊಂದಿದೆ. ಈ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನ ಮತ್ತು ಆಟೋಗಳನ್ನು ನಿಷೇಧಿಸಲಾಗಿದೆ.
ಆದರೆ ರಸ್ತೆ ದಾಟಲು ಗ್ರಾಮಸ್ಥರಿಗೆ ಮೇಲ್ಸೇತುವೆ ಇಲ್ಲದ ಕಾರಣ, ತಡೆಗೋಡೆಯನ್ನು ಮುರಿದು ಹೆದ್ದಾರಿಯನ್ನು ದಾಟುತ್ತಿರುವುದು ಅಪಘಾತಕ್ಕೆ ಕಾರಣವಾಗುತ್ತಿದೆ. ಆರಂಭದಲ್ಲಿ ಅಪಘಾತ ಪ್ರಮಾಣ ಹೆಚ್ಚಾಗಿದ್ದರು, ಹಲವು ಕ್ರಮಗಳನ್ನು ಕೈಗೊಂಡ ಬಳಿಕ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ.












Click it and Unblock the Notifications