ಆಟಿಸಂ ಪೀಡಿತ ಮಗನಿಗಾಗಿ ತಾಯಿಯೇ ಕಟ್ಟಿದ ಸಂಸ್ಥೆ: ಇಂದು ನೂರಾರು ವಿಶೇಷ ಮಕ್ಕಳಿಗೆ ಆಸರೆಯಾದ ಬೆಂಗಳೂರಿನ ಕಲರ್ಸ್ ಸೆಂಟರ್

ತನ್ನ ಮಗನ ಆರೋಗ್ಯ ಸಮಸ್ಯೆಗೆ ಒಂದೊಳ್ಳೆ ಚಿಕಿತ್ಸೆ ಕೊಡಿಸಲು 17 ವರ್ಷಗಳ ಕಾಲ ಅಲೆದಾಡಿದ ತಾಯಿಯೊಬ್ಬಳು, ಕೊನೆಗೆ ತಾನೇ ಆಟಿಸಂ ಪೀಡಿತರಿಗಾಗಿ ಒಂದು ವಿಶೇಷ ಕೇಂದ್ರವನ್ನ ಹುಟ್ಟುಹಾಕಿದಳು. ಅವರೇ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಬೆಂಗಳೂರಿನ ಬೇಲಾ ಜೋಶಿ. ಆಟಿಸಂ ಬಗ್ಗೆ ಸಮಾಜದಲ್ಲಿ ಅರಿವು ಮತ್ತು ಚಿಕಿತ್ಸಾ ವ್ಯವಸ್ಥೆ ಇಲ್ಲದಿರುವುದನ್ನು ಕಂಡ ಅವರು, ಇಂದಿರಾನಗರದಲ್ಲಿ 'ಕಲರ್ಸ್ ಸೆಂಟರ್ ಫಾರ್ ಲರ್ನಿಂಗ್' ಎಂಬ ಸಂಸ್ಥೆಯನ್ನು ಆರಂಭಿಸಿದರು.

ಇಂದು ಈ ಕೇಂದ್ರವು ನೂರಾರು ಆಟಿಸಂ ಪೀಡಿತ ವ್ಯಕ್ತಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಭರವಸೆಯ ಬೆಳಕಾಗಿದೆ. ಅತ್ಯುತ್ತಮ ಆಟಿಸಂ ಮಕ್ಕಳ ಆರೈಕೆ ಒದಗಿಸುವಲ್ಲಿ ಇದು ರಾಜ್ಯಕ್ಕೇ ಮಾದರಿಯಾಗಿದೆ.

Bengaluru CEO Spends Rs 2 700 to Repair Broken Footpath After BBMP Fails to Address Repeated Pleas

ಕಲರ್ಸ್ ಸೆಂಟರ್ ಸ್ಥಾಪನೆಯ ಹಿನ್ನೆಲೆ

ಬೇಲಾ ಅವರ ಮಗನಿಗೆ ಒಂದು ವರ್ಷವಿದ್ದಾಗ ಆಟಿಸಂ ಇರುವುದು ಪತ್ತೆಯಾಯಿತು. ಆತ ತುಂಬಾ ಬುದ್ಧಿವಂತನಾಗಿದ್ದರೂ, ಆತನಿಗೆ ಒಂದು ಒಳ್ಳೆ ಭವಿಷ್ಯ ರೂಪಿಸಲು ಸೂಕ್ತ ಮಾರ್ಗದರ್ಶನ ಎಲ್ಲೂ ಸಿಗಲಿಲ್ಲ. ಸುಮಾರು 17 ವರ್ಷಗಳ ಕಾಲ ಬೇಲಾ ಅವರು ಒಂದರ ಹಿಂದೊಂದು ಚಿಕಿತ್ಸಾ ಕೇಂದ್ರಗಳನ್ನ ಸುತ್ತಿದರು. ಆದರೆ ಎಲ್ಲಾ ಕಡೆಯೂ ನಿರಾಸೆಯೇ ಆಗಿತ್ತು.

11 ವರ್ಷಗಳ ಹಿಂದೆ ಪ್ರಸಿದ್ಧ ಆಟಿಸಂ ಕೇಂದ್ರವೊಂದು ಅವರ ಮಗನನ್ನ ಹೊರಹಾಕಿ, ಹೆಚ್ಚುವರಿಯಾಗಿ 1 ಲಕ್ಷ ರೂಪಾಯಿ ಪಾವತಿಸಲು ಒತ್ತಾಯಿಸಿತು. ಇದರಿಂದ ತೀವ್ರ ಬೇಸರಗೊಂಡ ಬೇಲಾ ಮತ್ತು ಅವರ ಪತಿ, ಆ ಕೇಂದ್ರವನ್ನು ತೊರೆದು ತಮ್ಮದೇ ಆದ 'ಕಲರ್ಸ್ ಸೆಂಟರ್' ಆರಂಭಿಸಲು ಮುಂದಾದರು. ಇಲ್ಲಿ ಆಟಿಸಂ ಪೀಡಿತರಿಗೆ ಕೇವಲ ಚಿಕಿತ್ಸೆ ಮಾತ್ರವಲ್ಲ, ಪ್ರೀತಿ, ಗೌರವ ಮತ್ತು ಮುಕ್ತವಾಗಿ ಬೆಳೆಯಲು ಸ್ಥಳಾವಕಾಶ ನೀಡಲಾಗುತ್ತಿದೆ.

ವಿನೂತನ ಆಟಿಸಂ ಚಿಕಿತ್ಸಾ ವಿಧಾನ ಅಳವಡಿಕೆ

ಸಾಮಾನ್ಯವಾಗಿ ಆಟಿಸಂ ಕೇಂದ್ರಗಳಲ್ಲಿ ಭಾಷಣ, ನಡವಳಿಕೆ ಹೀಗೆ ಪ್ರತ್ಯೇಕವಾಗಿ 45 ನಿಮಿಷಗಳ ಚಿಕಿತ್ಸಾ ಅವಧಿಗಳನ್ನ ನಿಗದಿಪಡಿಸಲಾಗುತ್ತದೆ. ಆದರೆ ಕಲರ್ಸ್ ಸೆಂಟರ್ 'ಡೈನಾಮಿಕ್ ಬಿಹೇವಿಯರ್ ಟ್ರಾನ್ಸ್‌ಫಾರ್ಮೇಷನ್' ಎಂಬ ವಿಶಿಷ್ಟ ವಿಧಾನವನ್ನ ಅನುಸರಿಸುತ್ತಿದೆ.

ಇಲ್ಲಿ ಚಿಕಿತ್ಸೆಯನ್ನ ಕೇವಲ ಕೋಣೆಗಳಿಗೆ ಸೀಮಿತಗೊಳಿಸದೆ, ದೈನಂದಿನ ಚಟುವಟಿಕೆಗಳಾದ ಊಟ, ಆಟ, ಚಿತ್ರಕಲೆ, ಮಣ್ಣಿನ ಕಲೆ ಮತ್ತು ಸಂಗೀತದ ಮೂಲಕವೇ ಕಲಿಸಲಾಗುತ್ತದೆ. ಇದು ನಿಗದಿತ ಸಮಯದ ಆಧಾರಿತ ಕಾರ್ಯಕ್ರಮವಲ್ಲ, ಬದಲಾಗಿ ಮಕ್ಕಳ ಕೌಶಲ್ಯ ಆಧಾರಿತ ಕಲಿಕೆಯಾಗಿದೆ. ಮಗು ಒಂದು ಕೌಶಲ್ಯವನ್ನ ಕಲಿತ ನಂತರವಷ್ಟೇ ಮುಂದಿನ ಹಂತಕ್ಕೆ ಹೋಗಲಾಗುತ್ತದೆ.

ನೂರಾರು ಕುಟುಂಬಗಳಿಗೆ ಆಸರೆಯಾದ ಬೆಂಗಳೂರಿನಲ್ಲಿ ಆಟಿಸಂ ಕೇಂದ್ರ

ಕಲರ್ಸ್ ಸೆಂಟರ್‌ನಲ್ಲಿ ಪೋಷಕರಿಗೆ ಮುಕ್ತ ಅವಕಾಶ ನೀಡಲಾಗಿದೆ. ಪೋಷಕರು ಹೊರಗೆ ಕಾಯುವ ಬದಲು ತರಗತಿಗಳನ್ನ ವೀಕ್ಷಿಸಿ, ಅದೇ ವಿಧಾನಗಳನ್ನ ಮನೆಯಲ್ಲಿಯೂ ಮುಂದುವರಿಸಬಹುದು. ಇಲ್ಲಿ ಕೇವಲ 4 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಮಾತ್ರವಲ್ಲ, ಯಾವುದೇ ಗರಿಷ್ಠ ವಯೋಮಿತಿಯಿಲ್ಲದೆ ಆಟಿಸಂ ಪೀಡಿತ ಯುವಕರಿಗೂ ತರಬೇತಿ ನೀಡಲಾಗುತ್ತದೆ. ಇದುವರೆಗೆ 100 ಕ್ಕೂ ಹೆಚ್ಚು ಆಟಿಸಂ ಪೀಡಿತರಿಗೆ ಮತ್ತು 290 ಕ್ಕೂ ಹೆಚ್ಚು ಕುಟುಂಬಗಳಿಗೆ ಈ ಕೇಂದ್ರ ನೆರವಾಗಿದೆ. ವಿದ್ಯಾರ್ಥಿಗಳನ್ನ ಮ್ಯೂಸಿಯಂ, ಮಾಲ್ ಮತ್ತು ಪಾರ್ಕ್‌ಗಳಿಗೆ ಕರೆದೊಯ್ದು ಸಮಾಜದಲ್ಲಿ ಬೆರೆಯುವಂತೆ ಆತ್ಮವಿಶ್ವಾಸ ತುಂಬಲಾಗುತ್ತದೆ.

ಸಮಾಜವು ಆಟಿಸಂ ಪೀಡಿತರನ್ನ ಯಾವುದೇ ಕಳಂಕವಿಲ್ಲದೆ ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಬೇಕು ಎಂಬುದೇ ಬೇಲಾ ಜೋಶಿ ಅವರ ಬಹುದೊಡ್ಡ ಕನಸು. ಪ್ರತಿದಿನ ಬೆಳಿಗ್ಗೆ ನಗುಮುಖದ ಹ್ಯಾಪಿ ಮಾರ್ನಿಂಗ್ ಶುಭಾಶಯಗಳೊಂದಿಗೆ ಆರಂಭವಾಗುವ ಈ ಕೇಂದ್ರ, ಆಟಿಸಂ ಪೀಡಿತರ ಪಾಲಿನ ನಿಜವಾದ ಆಶಾಕಿರಣವಾಗಿ ಬದಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+