ಲೈಂಗಿಕ ಪ್ರಕರಣ: ಮಹಿಳಾ ಆಯೋಗದ ವಿರುದ್ಧ ಕಾಂಗ್ರೆಸ್ ಕಿಡಿ

ಬೆಂಗಳೂರು, ಜನವರಿ 16: ಹೊಸ ವರ್ಷಾಚರಣೆ ಸಂಬಂಧ ಗೃಹ ಸಚಿವ ಜಿ ಪರಮೇಶ್ವರ ಮಹಿಳೆಯರ ವಿರುದ್ಧ ಲಘುವಾಗಿ ಮಾತುಗಳನ್ನಾಡಿದ್ದಾರೆ ಎಂದು ಮಹಿಳಾ ಆಯೋಗ ನೋಟೀಸ್ ಜಾರಿ ಮಾಡಿತ್ತು. ಅದರೆ ನೋಟೀಸಿಗೆ ವಿರುದ್ಧ ಕಾಂಗ್ರೆಸ್ ಪಕ್ಷದ ಕಾನೂನು ಸಲಹಾ ಮಂಡಲಿ ಉತ್ತರಿಸಿದ್ದು, ಮಾನನಷ್ಟ ಮೊಕದ್ದಮೆ ಹಾಕುವ ಎಚ್ಚರಿಕೆ ನೀಡಿದೆ.

ಮಹಿಳಾ ಆಯೋಗವು ಒಂದು ಸ್ವತಂತ್ರ್ಯ ಸ್ವಾಯುತ್ತತಾ ಸಂಸ್ಥೆಯಾಗಿದ್ದರೂ ರಾಜಕೀಯವಾಗಿ ಪ್ರೇರೇಪಿತಗೊಂಡು ನಿಮ್ಮನ್ನು ಅಧಿಕಾರಕ್ಕೆ ತಂದ ಬಿಜೆಪಿ ಪರವಾಗಿ ನೊಟೀಸನ್ನು ಸ್ವೇಚ್ಛೆಯಿಂದ ಬಿಡುಗಡೆಗೊಳಿಸಿದ್ದೀರಾ, ಪೂರ್ವಾಗ್ರಹ ಪೀಡಿತರಾಗಿ ನಾಯಕರ ಗೌರವ, ಪ್ರತಿಷ್ಠೆಯನ್ನು ಹಾಳುಮಾಡುತ್ತಿದ್ದೀರಾ ಎಂದು ಮಹಿಳಾ ಆಯೋಗದ ಲಲಿತಾ ಕುಮಾರ ಮಂಗಳಂ ಅವರನ್ನು ಆರೋಪಿಸಿ ಉತ್ತರ ಕಳುಹಿಸಲಾಗಿದೆ.[ಮಹಿಳೆ ಬಗ್ಗೆ ಹಗುರ ಮಾತಾಡಿದ ಪರಂ, ಅಬುಗೆ ನೋಟೀಸ್]

Bengaluru molestation: Congress threatens legal action against NCW

ಗೃಹ ಸಚಿವ ಜಿ.ಪರಮೇಶ್ವರ ಅವರು ಹೊಸವರ್ಷದ ಸಮಯದಲ್ಲಿ ಯುವಕರು ಬೃಹತ್ ಪ್ರಮಾಣದ ಸಮಾವೇಶಗೊಂಡಾಗ ಇಂತಹ ಲೈಂಗಿಕ ಹಲ್ಲೆಗಳಾಗುವುದು ಸಹಜ ಎಂದು ಮಹಿಳೆಯರ ವಿರುದ್ಧ ಹಗುರವಾಗಿ ಮಾತನಾಡಿದ್ದರು.

ಉನ್ನತ ಸ್ಥಾನದಲ್ಲಿಯುವವರೇ ಈ ರೀತಿ ಹೇಳಿದರೆ ಹೇಗೆ ಎಂದು ಜಾಗೃತಗೊಂಡ ಮಹಿಳಾ ಆಯೋಗ ಗೃಹಸಚಿವರ ವಿರುದ್ಧ ನೋಟೀಸ್ ಜಾರಿಮಾಡಲಾಗಿತ್ತು. ಅಲ್ಲದೆ ಆ ಸಮಯದಲ್ಲಿ ಅಬು ಅಜ್ಮಿ ಅವರ ವಿರುದ್ಧವೂ ನೋಟೀಸ್ ಜಾರಿ ಮಾಡಿ ಮಹಿಳಾ ಆಯೋಗದ ಅಧ್ಯಕ್ಷೆ ಕುಮಾರ ಮಂಗಳಂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+