Bengaluru Metro Pink Line: ಮಾರ್ಗದ ಫೈನಲ್ ಟೆಸ್ಟ್ ಫಿಕ್ಸ್! ಅಕ್ಟೋಬರ್ 6-8 CMRS ಪರಿಶೀಲನೆ, ಉದ್ಘಾಟನೆ?
ಬೆಂಗಳೂರು: ಬಹುನಿರೀಕ್ಷೆಯಿಂದ ಕಾಯುತ್ತಿದ್ದ ಬೆಂಗಳೂರು ಮೆಟ್ರೋ ಗುಲಾಬಿ ಮಾರ್ಗ (Metro Pink Line Corridor) ಲೋಕಾರ್ಪಣೆಗೆ ಬಾಕಿ ಇದ್ದ ಅಂತಿಮ ತಪಾಸಣೆಗೆ ದಿನಾಂಕ ಫಿಕ್ಸ್ ಆಗಿದೆ. ಇತ್ತೀಚೆಗೆ ರೈಲ್ವೆ ಮಂಡಳಿ ಅನುಮೋದನೆ ಪಡೆದ ಬೆನ್ನಲ್ಲೇ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRS) ಇದೇ ಅಕ್ಟೋಬರ್ 6 ರಿಂದ 8 ರವರೆಗೆ ಮೂರು ದಿನ ಶಾಸನಬದ್ಧ ಅಂತಿಮ ತಪಾಸಣೆ ನಡೆಸಲಿದ್ದಾರೆ. ಇದೇ ತಿಂಗಳಲ್ಲಿ ಮೊದಲ ಹಂತದಲ್ಲಿ 7.5 ಕಿಲೋ ಮೀಟರ್ ಗುಲಾಬಿ ಮಾರ್ಗ ಸಾರ್ವಜನಿಕರಿಗೆ ಮುಕ್ತವಾಗುವುದು ಖಚಿತವಾಗಿದೆ.
ಮೂರು ದಿನ ಮೆಟ್ರೋ ರೈಲು ಸುರಕ್ಷತೆ ಬಗ್ಗೆ ಮೆಟ್ರೋ ರೈಲು ಸುರಕ್ಷತಾ ಆಯುಕ್ತ (ದಕ್ಷಿಣ ವೃತ್ತ) ವೆ.ವೆಂಕಟಸುಬ್ರಮಣಿಯನ್ ಅವರು ಕೈಗೊಳ್ಳಲಿದ್ದಾರೆ. ಮೂರು ದಿನಗಳ ಪೈಕಿ ಮೊದಲ ದಿನ ಅವರು ಮೋಟಾರ್ ಟ್ರಾಲಿಯನ್ನು ತಪಾಸಣೆ ಮಾಡಲಿದ್ದಾರೆ. ಎರಡನೇ ದಿನ ಕೊತ್ತನೂರು ಡಿಪೋಗೆ ಭೇಟಿ ಕೊಟ್ಟು ಮುಖ್ಯ ಮಾರ್ಗದಲ್ಲಿ ಪರೀಕ್ಷೆ ನಡೆಸಲಿದ್ದಾರೆ. ಕೊನೆಯ ದಿನ ಬೈಯ್ಯಪ್ಪನಹಳ್ಳಿ ರೈಲು ನಿಯಂತ್ರಣ ಕೇಂದ್ರದಲ್ಲಿ (ಒಸಿಸಿ) ಸುರಕ್ಷತಾ ಆಯುಕ್ತರ ತಪಾಸಣೆ ಕೈಗೊಳ್ಳುವ ಮೂಲಕ ಎಲ್ಲ ಪ್ರಕ್ರಿಯೆ ಮುಗಿಸಲಿದ್ದಾರೆ.

ಗುಲಾಬಿ ಮಾರ್ಗ ಉದ್ಘಾಟನೆ ದಿನಾಂಕ?
ಆಯುಕ್ತರ ಪರಿಶೀಲನೆ ಬಳಿಕ ತಪಾಸಣೆ ವರದಿಗಾಗಿ ಕಾಯುತ್ತಾರೆ. ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅನುಸರಣಾ ವರದಿಯೊಂದಿಗೆ ಕೆಲವು ಷರತ್ತು ವಿಧಿಸುತ್ತದೆ. ಇದೆಲ್ಲ ಮುಗಿಯಲು ಅದಕ್ಕಾಗಿ ಒಟ್ಟು ಒಂದು ವಾರದ ಸಮಯ ಹಿಡಿಯಬಹುದು ಎನ್ನಲಾಗಿದೆ. ಈ ಪ್ರಕ್ರಿಯೆ ಅಕ್ಟೋಬರ್ 20 ಒಳಗಾಗಿ ಪೂರ್ಣಗೊಳ್ಳಲಿದೆ. ತಪಾಸಣೆ ಪೂರ್ಣಗೊಂಡಿದ್ದರ ಬಗ್ಗೆ ರಾಜ್ಯ ಸರ್ಕಾರಕ್ಕೆ ಮೆಟ್ರೋ ಅಧಕಾರಿಗಳು ಮಾಹಿತಿ ನೀಡುತ್ತಾರೆ. ನಂತರ ಔಪಚಾರಿಕ ಅನುಮೋದನೆಗಾಗಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವನ್ನು ರಾಜ್ಯ ಸರ್ಕಾರ ಸಂಪರ್ಕಿಸುತ್ತದೆ. ಇದೆಲ್ಲ ಮುಗಿಯುತ್ತಿದ್ದಂತೆ ಅಕ್ಟೋಬರ್ ಮೂರನೇ ವಾರ ಇಲ್ಲವೇ ಅಂತ್ಯದ ಒಳಗೆ ಗುಲಾಬಿ ಮಾರ್ಗ ಉದ್ಘಾಟನೆಗೆ ದಿನಾಂಕ ಫಿಕ್ಸ್ ಆಗುವ ಸಾಧ್ಯತೆ ಇದೆ.
ಕಾಳೇನ ಅಗ್ರಹಾರದ-ತಾವರೆಕೆರೆವರೆಗಿನ 7.5 ಕಿಲೋ ಮೀಟರ್ ಎತ್ತರಿಸಿದ ಕಾರಿಡಾರ್ ಬನ್ನೇರುಘಟ್ಟ ರಸ್ತೆ ಉದ್ದಕ್ಕು ನಿರ್ಮಾಣವಾಗಿದೆ. ಕಾಳೇನ ಅಗ್ರಹಾರ, ಹುಳಿಮಾವು, ಜೆಪಿ ನಗರ 4ನೇ ಹಂತ, ಜಯದೇವ ಆಸ್ಪತ್ರೆ ಹಾಗೂ ತಾವರೆಕರೆ ಎಂದು ಒಟ್ಟು ಆರು ನಿಲ್ದಾಣಗಳು ನಿರ್ಮಾಣವಾಗಿವೆ.
ಹೊಸ ಆರು ರೈಲುಗಳ ಸಂಚಾರ
ಗುಲಾಬಿ ಮಾರ್ಗ ಉದ್ಘಾಟನೆ ಆಗುತ್ತಿದ್ದಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ಆರಂಭದಲ್ಲಿ 6ಪ್ರೊಟೋ ಟೈಪ್ ಮಾದರಿಯ ಡ್ರೈವರ್ ಲೆಸ್ ರೈಲುಗಳನ್ನು ಚಾಲಕ ಸಹಿತವಾಗಿ ಓಡಿಸಲಿದೆ. ಪ್ರತಿ 10ನಿಮಕ್ಕೆ ಒಂದರಂತೆ ರೈಲುಗಳು ಸಂಚಾರ ಮಾಡಲಿವೆ. ಬೆಳಗ್ಗೆ ಮತ್ತು ಸಂಜೆ ಪೀಕ್ ಹವರ್‍ನಲ್ಲಿ ಪ್ರತಿ 6ನಿಮಿಷಕ್ಕೆ ಒಂದರಂತೆ ಮೆಟ್ರೋ ರೈಲುಗಳ ಸೇವೆ ಪ್ರಯಾಣಿಕರು ಪಡೆಯಬಹುದಾಗಿದೆ.
ಭೂಗತ ಗುಲಾಬಿ ಮಾರ್ಗದ ಅಪ್ಡೇಟ್ಸ್
ಒಟ್ಟು 21.5ಕಿಮೀ ಇರುವ ಗುಲಾಬಿ ಮಾರ್ಗವು ಎರಡನೇ ಹಂತದಲ್ಲಿ ಭೂಗಮ ಗುಲಾಬಿ ಮೆಟ್ರೋ ಮಾರ್ಗವು ಇದೇ ಡಿಸೆಂಬರ್‍ಗೆ ಹೊತ್ತಿಗೆ ತೆರೆಯಲು ಪ್ಲ್ಯಾನ್ ಮಾಡಿಕೊಳ್ಳಲಾಗಿತ್ತು. ಆದರೆ ಕಾರಣಾಂತರಗಳಿಂದ ಈ ಲೈನ್ ಲೋಕಾರ್ಪಣೆ ಕೊಂಚ ವಿಳಂಬವಾಗಲಿದೆ. 2027ರ ಮಾರ್ಚ್ ಹೊತ್ತಿಗೆ ತೆರೆಯುವ ಲಕ್ಷಣಗಳು ಇವೆ.


Click it and Unblock the Notifications
