Namma Metro: ಹಳದಿ, ನೀಲಿ ಮೆಟ್ರೋ ಮಾರ್ಗಗಳ ನಡುವೆ ಸುಲಭ ಸಂಪರ್ಕ: ಸಿಲ್ಕ್ ಬೋರ್ಡ್‌ನಲ್ಲಿ 1st ಟ್ರಾವಲೇಟರ್
ಬೆಂಗಳೂರು: ಪ್ರಯಾಣಿಕರು ಬಹುನಿರೀಕ್ಷೆಯಿಂದ ಕಾಯುತ್ತಿದ್ದ ನೀಲಿ ಮೆಟ್ರೋ ಮಾರ್ಗದ ಲೋಕಾರ್ಪಣೆಗೆ ಇನ್ನಷ್ಟು ದಿನಗಳು ಕಾಯಬೇಕಿದೆ. ಈಗಾಗಲೇ ನೀಲಿ ಮಾರ್ಗ ಮತ್ತು ಹಳದಿ ಮಾರ್ಗ ಸಂಪರ್ಕಿಸುವ ಸ್ಕೈವಾಕ್ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಇದರ ಬೆನ್ನಲ್ಲೆ ಸಿಲ್ಕ್ ಬೋರ್ಡ್ ನಲ್ಲಿ ಇಂಟರ್‍ಚೇಂಜ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಪರ್ಕಕ್ಕೆ ಟ್ರಾವಲೇಟರ್ ನಿರ್ಮಿಸಲಾಗುತ್ತಿದೆ.
ಮೆಟ್ರೋ ಪ್ರಯಾಣಿಕರು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಲ್ಲಿ ಮೆಟ್ರೋ ಮಾರ್ಗಗಳನ್ನು ಬದಲಾಯಿಸಲು ಈ ಟ್ರಾವಲೇಟರ್ ಮತ್ತು ಪಾದಚಾರಿ ಮಾರ್ಗ (ಸ್ಕೈವಾಕ್)ದಿಂದ ಸುಲಭವಾಗಲಿದೆ. ಬೆಂಗಳೂರು ಮೆಟ್ರೋ ರೈಲು ನಿಗಮವು (ಬಿಎಂಆರ್‌ಸಿಎಲ್) ಹಳದಿ ಮತ್ತು ನೀಲಿ ಮಾರ್ಗ ನಿಲ್ದಾಣಗಳ ನಡುವೆ ಟ್ರಾವೆಲೇಟರ್ ಮತ್ತು ಪಾದಚಾರಿ ಮಾರ್ಗ ಸ್ಥಾಪಿಸಲಿದೆ.

ಎರಡು ಕಾರಿಡಾರ್ ಮಾರ್ಗಗಳಾಗಿವೆ. ಒಟ್ಟು ಎರಡು ಎತ್ತರದ ನಿಲ್ದಾಣಗಳು ಸುಮಾರು 250 ಮೀಟರ್ ಅಂತರದಲ್ಲಿವೆ. ಹೊರ ವರ್ತುಲ ರಸ್ತೆ ಅವುಗಳ ನಡುವೆ ಚಲಿಸುವ ಈ ರೈಲು ನಿಲ್ದಾಣಗಳ ಮಧ್ಯೆ ಸಂಪರ್ಕಕ್ಕಾಗಿ ಟ್ರಾವಲೇಟರ್ ಸ್ಥಾಪನೆ ಮಾಡಲಾಗುತ್ತದೆ. ಜನರು ಕೆಳಗೆ ಇಳಿಯಲು, ಜನನಿಬಿಡ ರಸ್ತೆಯನ್ನು ದಾಟಲು ಹಾಗೂ ಮಲಕ್ಕೇರಲು ಅನುಕೂಲ ಒದಗಿಸಲಿದೆ.
ಇನ್ನು ಟ್ರಾವಲೇಟರ್ ಬೇಡ ನಾವು ನಡೆಯುತ್ತೇವೆ ಎಂದರೆ ಅವರಿಗೂ ಪ್ರತ್ಯೇಕ ನಡಿಗೆ ಮಾರ್ಗ ಇರಲಿದೆ. ಅವರು ನಡೆದುಕೊಂಡ ಹೋಗಬಹುದು. ಬೆಂಗಳೂರಿನ ಮೆಟ್ರೋ ಜಾಲದಲ್ಲಿ ಇಂಥದ್ದೊಂದು ಟ್ರಾವಲೇಟರ್ ಜಾರಿ ಆಗುತ್ತಿರುವುದು ಇದೇ ಮೊದಲು. ಅತ್ಯಂತ ಆಕರ್ಷಕ ವಿನ್ಯಾಸದಲ್ಲಿ ಪ್ರಯಾಣಿಕರಿಗೆ ಲಭ್ಯವಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಇಂಟರ್‌ಚೇಂಜ್ ನಿಲ್ದಾಣ
ಆರ್.ವಿ.ರಸ್ತೆ-ಬೊಮ್ಮಸಂದ್ರ ವರೆಗಿನ ಹಳದಿ ಮಾರ್ಗವು ಹಾಗೂ ಸೆಂಟ್ರಲ್ ಸಿಲ್ಕ್ ಬೋರ್ಡ್-ಕೆ.ಆರ್.ಪುರಂ ವರೆಗಿನ ನೀಲಿ ಮಾರ್ಗವು ಸೆಂಟ್ರಲ್ ಸಿಲ್ಕ್ ಬೋರ್ಡ್ ನಲ್ಲಿ ಸಂಧಿಸುತ್ತವೆ. ಇಲ್ಲಿ ಪ್ರಮುಖ ಮೆಟ್ರೋ ಇಂಟರ್‌ಚೇಂಜ್ ನಿಲ್ದಾಣ ನಿರ್ಮಾಣವಾಗುತ್ತದೆ. ಮೆಜೆಸ್ಟಿಕ್‌ನಲ್ಲಿ, ಗ್ರೀನ್ ಮತ್ತು ಪರ್ಪಲ್ ಮಾರ್ಗಗಳು ಭೂಗತವನ್ನು ಸಂಧಿಸುತ್ತವೆ. ಆರ್‌ವಿ ರಸ್ತೆಯಲ್ಲಿ ಹಸಿರು ಮಾರ್ಗವು ಹಳದಿ ಂಮಾರ್ಗವನ್ನು ಸಂಧಿಸುತ್ತವೆ.
ಇನ್ನೂ ಎಂಜಿ ರಸ್ತೆಯಲ್ಲಿ, ಎತ್ತರದ ಪರ್ಪಲ್ ಲೈನ್ ನಿಲ್ದಾಣವು ಭೂಗತ ಪಿಂಕ್ ಲೈನ್ ನಿಲ್ದಾಣದೊಂದಿಗೆ ಸಂಪರ್ಕ ಸಾಧಿಸುತ್ತದೆ. ಸಿಲ್ಕ್ ಬೋರ್ಡ್‌ನಲ್ಲಿ, ಹಳದಿ ಮತ್ತು ನೀಲಿ ಮಾರ್ಗದ ಎರಡೂ ನಿಲ್ದಾಣಗಳನ್ನು ಎತ್ತರದಲ್ಲಿ ನಿರ್ಮಾಣಗೊಳ್ಳಲಿವೆ. ಟ್ರಾವೆಲೇಟರ್ ಮತ್ತು ಸ್ಕೈವಾಕ್ ಎರಡು ನಿಲ್ದಾಣಗಳ ನಡುವಿನ ಪ್ರಮುಖ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತವೆ.
ಸಿಲ್ಕ್ ಬೋರ್ಡ್‌ನಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವರೆಗೆ ನೀಲಿ ಮಾರ್ಗ ನಿರ್ಮಾಣ ಹಂತದಲ್ಲಿದೆ. ಇಲ್ಲಿ ಅಗತ್ಯವಿರುವ ಕಡೆ ಟ್ರಾವೆಲೇಟರ್ ಸಹ ನಿರ್ಮಾಣವಾಗಲಿದೆ.


Click it and Unblock the Notifications
