Bengaluru Metro: 50 ನಿಮಿಷ ಮೊದಲೇ ನಿಲ್ದಾಣಕ್ಕೆ ಬಂದ್ರೂ ವ್ಯಕ್ತಿಗೆ ಪ್ರವೇಶ ನಕಾರ, ಆಕ್ರೋಶ Video Viral
ಬೆಂಗಳೂರು, ನವೆಂಬರ್ 05: ಬೆಂಗಳೂರು ನಮ್ಮ ಮೆಟ್ರೋ ದರ ಏರಿಕೆ, ತಾಂತ್ರಿಕ ದೋಷ ಹಾಗೂ ವ್ಯಕ್ತಿಯಗಳ ಆತ್ಮಹತ್ಯೆ ಯತ್ನ ವಿಚಾರವಾಗಿ ಸುದ್ದಿಯಲ್ಲಿರುತ್ತಿತ್ತು. ಇದೀಗ ಸುಮಾರು 50 ನಿಮಿಷ ಮೊದಲೇ ಮೆಟ್ರೋ ನಿಲ್ದಾಣಕ್ಕೆ ಬಂದ ಪ್ರಯಾಣಿಕರಿಗೆ ಪ್ರವೇಶ ನಿರಾಕರಿಸುವ ಮೂಲಕ ಸುದ್ದಿಯಾಗಿದೆ. ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಬೆಂಗಳೂರು ಮೆಟ್ರೋ ನಡೆ ಬಗ್ಗೆ ವ್ಯಾಪಕ ಚರ್ಚೆ, ಆಕ್ರೋಶ ವ್ಯಕ್ತವಾಗುತ್ತಿದೆ.
ಬೆಂಗಳೂರಿನಲ್ಲಿ ಪ್ರಯಾಣಿಕರೊಬ್ಬರು ರಾತ್ರಿ 10 ಗಂಟೆ ಸುಮಾರಿಗೆ ಅತ್ತಿಗುಪ್ಪೆ ನಿಲ್ದಾಣಕ್ಕೆ ಬಂದಿದ್ದಾರೆ. ಆದರೆ ಅವರನ್ನು ಮೆಟ್ರೋ ಸಿಬ್ಬಂದಿ ಒಳಗೆ ಬಿಡಲು ನಿರಾಕರಿಸಿದ್ದಾರೆ. ಈ ಬಗ್ಗೆ ಕರ್ನಾಟಕ ಪೋರ್ಟ್‌ಪೋಲಿಯೋ ಎಕ್ಸ್ ನಲ್ಲಿ ಹಂಚಿಕೊಂಡಿ ವೈರಲ್ ವಿಡಿಯೋದಲ್ಲಿ ಆರೋಪಿಸಲಾಗಿದೆ. ಸಿಬ್ಬಂದಿ ನಡೆಯಿಂದ ಪ್ರಯಾಣಿಕರ ಸಂಚಾರಕ್ಕೆ ತೊಂದರೆ ಆಗಿದೆ.

"ನಮ್ಮ ಮೆಟ್ರೋ ನಿಲ್ದಾಣಕ್ಕೆ ರಾತ್ರಿ 10:10 ಕ್ಕೆ ಭದ್ರತಾ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದಾರೆ! ಅಧಿಕೃತ ಮೆಟ್ರೋ ಸಮಯ ರಾತ್ರಿ 11 ಗಂಟೆಯವರೆಗೆ ಇದೆ. ಹೀಗಿದ್ದರೂ ಸಹಿತ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದ ಒಳಕ್ಕೆ ಪ್ರಯಾಣಿಕನನ್ನು ಒಳಗೆ ಬಿಟ್ಟಿಲ್ಲ. ತಾವೇ ಮಾಡಿದ ವೇಳಾಪಟ್ಟಿಯಂತೆ ನಿಗದಿತ ಸಮಯಕ್ಕೂ ಮೊದಲೇ ನಿಲ್ದಾಣಕ್ಕೆ ಬಂದರೂ ಏಕೆ ಪ್ರವೇಶ ನಿರಾಕರಿಸಲಾಗಿದೆ. ಇದೇನು ಅಧಿಕಾರಿಗಳ ನಿರ್ಲಕ್ಷ್ಯವೇ' ಎಂದು ವಿಡಿಯೋ ಪೋಸ್ಟ್‌ನಲ್ಲಿ ಬರೆಯಲಾಗಿದೆ.
ಬೆಂಗಳೂರಲ್ಲಿ ಮೆಟ್ರೋ ರಾತ್ರಿ 11 ಗಂಟೆಯವರೆಗೆ ಕಾರ್ಯನಿರ್ವಸುತ್ತದೆ. ಕೊನೆ ಮೈಲಿ ಪ್ರಯಾಣಿಕರಿಗೆ ಅವಕಾಶ ನೀಡಿದಿದ್ದರೆ ಹೇಗೆ. ಸಿಬ್ಬಂದಿ ಯಾರ ಕಾರಣಕ್ಕೆ ಪ್ರವೇಶ ನಿರಾಕರಿಸಿದೆ. ಇಂತಹ ದುರಪಯೋಗ, ಹೊಣೆಗಾರಿಕೆ ಕೊರತೆ ಎದುರಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಈ ನಡೆಯು ಬೆಂಗಳೂರಿನ ವಿಶ್ವ ದರ್ಜೆಯ ಇಮೇಜ್‌ಗೆ ಕೆಟ್ಟದಾಗಿ ಪ್ರತಿಫಲಿಸುತ್ತದೆ. ಸಾರ್ವಜನಿಕ ಸಾರಿಗೆಯು ಜನರಿಗೆ ಸೇವೆ ಸಲ್ಲಿಸಲು ಉದ್ದೇಶಿಸಲಾಗಿದೆ. ಅವರಿಗೆ ಅನಾನುಕೂಲತೆ ಉಂಟು ಮಾಡಲು ಆಗಲ್ಲ. ರಾತ್ರಿ 11ಗಂಟೆಗೆ ಕೊನೆ ರೈಲು ಎಂದು ಬೋರ್ಡ್ ಹಾಕಿದ್ದು ಏಕೆ, 45-50 ನಿಮಿಷ ಮೊದಲೇ ನಿಲ್ದಾಣಕ್ಕೆ ಬಂದರೂ ಸಾಲದೇ? ಎಂದು ಪ್ರಯಾಣಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಮೆಟ್ರೋ ಸಾರಿಗೆ ಅವಲಂಬಿಸಿದ ಬೆಂಗಳೂರು ಪ್ರಯಾಣಿಕರು ಇಂತಹ ನಿರ್ಲಕ್ಷ್ಯ, ನಡೆಯನ್ನು ಎದುರಿಸಬೇಕಾಗಿದೆ. ಪ್ರವೇಶ ನಿರಾಕರಿಸಿದ ಸಿಬ್ಬಂದಿ ವಿರುದ್ಧ ಅಧಿಕಾರಿಗಳು ಸರಿಯಾದ ಶಿಸ್ತ ಕ್ರಮ ಕೈಗೊಳ್ಳಬೇಕು. ಮೊದಲು ಮೆಟ್ರೋ ಸಿಬ್ಬಂದಿಗೆ ತರಬೇತಿ ನೀಡಬೇಕಿದೆ. ಪ್ರಯಾಣಿಕರಿಗಾಗಿ ಇರುವ ಸಾರಿಗೆ ಸೇವೆ ಯಾರಿಗಾಗಿ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ.
Security Denied Entry into Namma Metro Station at 10:10 PM! 🚫🚇
— Karnataka Portfolio (@karnatakaportf) November 5, 2025
A passenger at attiguppe metro station was denied entry at 10:10 PM, even though the official metro timings are till 11 PM. How can authorities justify this blatant disregard for their own schedule?If the metro… pic.twitter.com/BFSu5KA2fb
ವಿಡಿಯೋದಲ್ಲಿ ಕಾಣುವಂತೆ ವ್ಯಕ್ತಿ ಮೆಟ್ರೋ ನಿಲ್ದಾಣಕ್ಕೆ ಬರುತ್ತಿದ್ದಂತೆ ಭದ್ರತಾ ಸಿಬ್ಬಂದಿ ಅವರನ್ನು ತಡೆಯುವುದು ಕಂಡು ಬರುತ್ತದೆ. ಕೇವಲ ಒಂದು ಪ್ರವೇಶದ್ವಾರ ಮಾತ್ರ ಮುಚ್ಚಲ್ಪಟ್ಟಂತೆ ಕಂಡುಬಂದಿದೆ ಎಂದು ಕೆಲವು ನೆಟ್ಟಿಗರು ಕಾಮೆಂಟ್ ಮಾಡಿ ಗಮನಸೆಳೆದಿದ್ದಾರೆ. ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಕಳೆದ ವರ್ಷ 2024 ನು ಮಾರ್ಚ್ 30ರಂದು ಇಮೇಲ್ ಕಳುಹಿಸಿದ್ದೇನೆ ಮತ್ತು ಹಲವಾರು ಬಾರಿ ಕೇಳಿದರು ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇಂತಹ ಘಟನೆ ಮರುಕಳಿಸುತ್ತಲೇ ಇದೆ. ಆದರೂ ಸಹಿತ BMRCL ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯಿಸಿಲ್ಲ.
ಕೆಲವು ಮೆಟ್ರೋ ನಿಲ್ದಾಣಗಳಲ್ಲಿ, ನೀವು ಒಂದು ಪ್ರವೇಶದ್ವಾರ ಮುಚ್ಚಿರಲಾಗಿರುತ್ತದೆ. ರಾತ್ರಿಯಲ್ಲಿ ನಡೆದುಕೊಂಡು ಮೆಟ್ಟಿಲು ಬಳಸಿ ಒಳ ಪ್ರವೇಶಿಸಬೇಕಾಗುತ್ತದೆ. ರಾತ್ರಿಯಲ್ಲಿ ಇಂತಹ ಘಟನೆ ನಡೆಯುವುದು ಅಪಾಯಕಾರಿ. 11 ಗಂಟೆವರೆಗೆ ರೈಲು ಸೇವೆ ಇದ್ದರೂ ಬಹುಬೇಗನೇ ಪ್ರಯಾಣಿಕರನ್ನು ನಿರ್ಬಂಧಿಸುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಬಿಎಂಆರ್‌ಸಿಎಲ್ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಂದ ಆಗ್ರಹ ಕೇಳಿ ಬಂದಿದೆ.












Click it and Unblock the Notifications