Central Silk Board: ನೀಲಿ-ಹಳದಿ ಮೆಟ್ರೋ ನಿಲ್ದಾಣಗಳ ನಡುವೆ 'ವಾಕ್‌ವೇ' ನಿರ್ಮಾಣ ಗುತ್ತಿಗೆ ಫೈನಲ್

ಬೆಂಗಳೂರು: ನಗರದಲ್ಲಿ ನಮ್ಮ ಮೆಟ್ರೋ ಹಳದಿ ಮಾರ್ಗ ಹಾಗೂ ಭವಿಷ್ಯದಲ್ಲಿ ಸೇವೆಗೆ ಅಣಿಯಾಗುತ್ತಿರುವ ಹೊರ ವರ್ತುಲ ರಸ್ತೆಯ (ORR) ನೀಲಿ ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಮಹತ್ವದ ಕಾಮಗಾರಿಯೊಂದರ ಗುತ್ತಿಗೆಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮ (BMRCL) ಫೈನಲ್ ಮಾಡಿದೆ.

ಹೌದು, ನಗರದ ಸೆಂಟ್ರಲ್ ಸಿಲ್ಕ್ ಬೋರ್ಡ್‌ ಟ್ರಾವೆಲೇಟರ್‌ಗೆ ಗುತ್ತಿಗೆ ನೀಡಲಾಗಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ನಲ್ಲಿ ಟ್ರಾವೆಲೇಟರ್ ಮತ್ತು ಸಂಪರ್ಕ ನಡಿಗೆ ಮಾರ್ಗದ ಅಳವಡಿಕೆಗೆ ಸಂಬಂಧಿಸಿದ ಸಿವಿಲ್ ಮತ್ತು ರಚನಾತ್ಮಕ ಕಾಮಗಾರಿಗಳಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿ.ಎಂ.ಆರ್.ಸಿ.ಎಲ್), ಮಿಲನ್ ರೋಡ್ ಬಿಲ್ಸ್‌ಟೆಕ್ ಎಲ್‌ಎಲ್‌ಪಿಗೆ ₹55.48 ಕೋಟಿ ಮೌಲ್ಯದ ಗುತ್ತಿಗೆ ನೀಡಿದೆ.

Central Silk Board Interchange

ನೀಲಿ-ಹಳದಿ ಮಾರ್ಗದ ನಡುವೆ ಸಂಪರ್ಕ

ಪ್ರಸ್ತಾವಿತ ಸೌಲಭ್ಯವು ಹಳದಿ ಮಾರ್ಗ ಸೆಂಟ್ರಲ್ ಸಿಲ್ಕ್ ಬೋರ್ಡ್ ಮೆಟ್ರೋ ನಿಲ್ದಾಣ ಮತ್ತು ನೀಲಿ ಮಾರ್ಗ ದ ಒ.ಆ‌ರ್.ಆ‌ರ್ ಸೆಂಟ್ರಲ್ ಸಿಲ್ಕ್ ಬೋರ್ಡ್ ಮೆಟ್ರೋ ನಿಲ್ದಾಣದ ನಡುವೆ ನೇರ, ಮಟ್ಟ ಪ್ರತ್ಯೇಕ ಇಂಟರ್ಚೇಂಜ್ ಒದಗಿಸಿ, ಎರಡೂ ಮಾರ್ಗಗಳ ನಡುವೆ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಿದೆ.

ಯೋಜನೆ ವಿನ್ಯಾಸ ಹೇಗಿದೆ?

ವಾಕ್ ವೇ ಗುತ್ತಿಗೆ ಪಡೆದ ಕಂಪನಿಯು ಯೋಜನೆಯಲ್ಲಿ ಅಡಿಪಾಯಗಳು, ರಚನೆಗಳು ಮತ್ತು ರಚನಾತ್ಮಕ ಸಂಪರ್ಕಗಳ ವಿನ್ಯಾಸ ಹಾಗೂ ನಿರ್ಮಾಣ, ಮುಚ್ಚಿದ ಟ್ರಾವೆಲೇಟರ್, ಸಂಪರ್ಕ ನಡಿಗೆ ಮಾರ್ಗ ಮತ್ತು ಸಂಬಂಧಿತ ಅಂತಿಮ ಕಾಮಗಾರಿಗಳು, ಒಳಚರಂಡಿ ಹಾಗೂ ಪ್ರವೇಶ ವ್ಯವಸ್ಥೆಗಳು ಈ ಗುತ್ತಿಗೆಯಲ್ಲಿವೆ. ಅಗತ್ಯವಿರುವ ಕಡೆ ಈಗಿರುವ ಎಲಿವೇಟೆಡ್ ರಚನೆಗಳು ಮತ್ತು ಉಪಯುಕ್ತತಾ ಸೌಲಭ್ಯಗಳೊಂದಿಗೆ ಸಮನ್ವಯಗೊಳಿಸುವ ಕೆಲಸವೂ ನಡೆಯಲಿದೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ.

ಗುಣಮಟ್ಟ, ಸುರಕ್ಷತೆ ಮತ್ತು ನಿಗದಿತ ಕಾರ್ಯಕ್ಷಮತಾ ಮಾನದಂಡಗಳ ಪಾಲನೆಗೆ ಸೂಕ್ತ ಒತ್ತು ನೀಡಿ ಬಿ.ಎಂ.ಆರ್.ಸಿ.ಎಲ್. ನ ಎಂಜಿನಿಯರಿಂಗ್ ಮತ್ತು ಯೋಜನಾ ತಂಡಗಳು ಕಾಮಗಾರಿಯ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲಿವೆ ಎಂದು ತಿಳಿಸಿದೆ.

ನೀಲಿ ಮಾರ್ಗದಲ್ಲಿ ಶೀಘ್ರ ಟ್ರಯಲ್ ರನ್?

ಬೊಮ್ಮಸಂದ್ರ-ಆರ್. ವಿ.ರಸ್ತೆವೆರೆಗೆ ಇರುವ ಹಳದಿ ಮಾರ್ಗವು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಲ್ಲಿ ಸಂದಿಸುತ್ತದೆ. ಅಲ್ಲಿ ಪ್ರಯಾಣಿಕರು ನೀಲಿ ಮಾರ್ಗಕ್ಕೆ ಇಂಟರ್‍‌ಚೇಂಜ್ ಮಾಡಿ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರಂ ಮಾರ್ಗವಾಗಿ ಏರ್‍‌ಪೋರ್ಟ್‌ ವರೆಗೂ ತೆರಳಬಹುದಾಗಿದೆ. ಈ ಪ್ರಯಾಣಿಕರಿಗೆ ಇಂಟರ್ ಚೇಂಜ್ ಮಾಡಲು, ಎರಡು ನಿಲ್ದಾಣಗಳ ಮಧ್ಯೆ ಸಂಪರ್ಕ ಕಲ್ಪಿಸಲು ಇದರ ನಿರ್ಮಾಣ ಅಗತ್ಯವಿದೆ.

ಇನ್ನೂ ಸೆಂಟ್ರಲ್ ಸಿಲ್ಕ್ ಬೋರ್ಡ್-ಕೆ.ಆರ್.ಪುರಂವರಗಿನ 2ಎ ಮಾರ್ಗದಲ್ಲಿ ಅಂತಿಮ ಕೆಲಸ ಕಾಮಗಾರಿಗಳು ನಡೆಯುತ್ತಿವೆ. ಈ ಮಾರ್ಗದಲ್ಲಿ ಮೂರು ನೀಲಿ ರೈಲುಗಳು ಆಗಮಿಸಿವೆ. ಶೀಘ್ರವೇ ಈ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸುವ ಸಾಧ್ಯತೆ ಇದೆ. ಇದೇ ವರ್ಷ ಡಿಸೆಂಬರ್‌ಗೆ ನೀಲಿ ಮಾರ್ಗವು ತೆರೆಯುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+