Silk Board-KR Puram Metro Line: ಪ್ರಯಾಣಿಕರಿಗೆ ಮತ್ತೆ ನಿರಾಸೆ! 2026 ಅಂತ್ಯಕ್ಕೆ ನೀಲಿ ಮಾರ್ಗ ಓಪನ್ ಆಗಲ್ಲ!

ಬೆಂಗಳೂರು: ರಾಜಧಾನಿ ಬೆಂಗಳೂರು ಮೆಟ್ರೋ ನೀಲಿ ಮಾರ್ಗದಲ್ಲಿ ಅಕ್ಟೋಬರ್ ನಲ್ಲಿ ಪ್ರಾಯೋಗಿಕ ಸಂಚಾರ ಮತ್ತು 2026ರ ಅಂತ್ಯಕ್ಕೆ ಮೊದಲ ಹಂತದಲ್ಲಿ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರಂ ಲೈನ್ (2ಎ) ಕಾರ್ಯಾಚರಣೆ ಅಬಹುತೇಕ ಅನುಮಾನ. ಬೆಂಗಳೂರು ಮಾರತ್ತಹಳ್ಳಿ, ಮಹದೇವಪುರ, ಇಬ್ಬಲೂರು ಭಾಗದ ಹೊರ ವರ್ತುಲ ರಸ್ತೆ (ORR) ಪ್ರಯಾಣಿಕರು, ಐಟಿ ಕಾರಿಡಾರ್‍‌ಗೆ ತೆರಳುವ ಉದ್ಯೋಗಿಗಳು ನೀಲಿ ಮಾರ್ಗದ ಉದ್ಘಾಟನೆಗೆ 2027ರ ಮೊದಲ ಕೆಲವು ವಾರಗಳ ವರೆಗೆ ಕಾಯಬೇಕಿದೆ.

ಹೌದು, ಸಿಲ್ಕ್‌ಬೋರ್ಡ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವರೆಗೆ (KIA) ಒಟ್ಟು 58.5 ಕಿಲೋ ಮೀಟರ್ ವರೆಗೆ ನೀಲಿ ಮಾರ್ಗ ಎರಡು ಹಂತಗಳಲ್ಲಿ ನಿರ್ಮಾಣವಾಗುತ್ತಿದೆ. ಆದರೆ ನಿರ್ಮಾಣ ಕಾರ್ಯ, ವಯಡಕ್ಟ್ ಜೋಡಣೆ ಇನ್ನಿತರ ಕಾಮಗಾರಿಗಳ ವಿಳಂಬ ಕಾರಣಗಳಿಂದ ನಿಗದಿತ ಗಡುವಿನಲ್ಲಿ ನೀಲಿ ರೈಲುಗಳ ಸಂಚರಿಸುವುದಿಲ್ಲ. ಈ ಮಾರ್ಗವು ಸಾರ್ವಜನಿಕರಿಗೆ ಲೋಕಾರ್ಪಣೆಗೊಳ್ಳಲು ಇನ್ನಷ್ಟು ತಿಂಗಳುಗಳು ಕಾಯಲೇಬೇಕಿದೆ.

Bengaluru

ಅಕ್ಟೋಬರ್‌ನಲ್ಲಿ ಟ್ರಯಲ್ ರನ್ ಆಗುತ್ತಾ?

ಸಚಿವ ಕೃಷ್ಣ ಬೈರೇಗೌಡ ಸೂಚನೆಯಂತೆ ಅಕ್ಟೋಬರ್ ಹೊತ್ತಿಗೆ HSR ಲೇಔಟ್ ಮತ್ತು ಕೆ.ಆರ್.ಪುರಂವರೆಗೆ ಪ್ರಾಯೋಗಿಕ ಸಂಚಾರ ಮಾಡಲು ಪ್ರಯತ್ನಿಸಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳು ತಿಳಿಸಿದ್ದಾರೆ. ವಯಾಡಕ್ಟ್ ಜೋಡಿಸುವ ಕಾರ್ಯ ನಡೆಯುತ್ತಿದೆ, ನಿಲ್ದಾಣ ನಿರ್ಮಾಣ ಸ್ಥಳ ಸೇರಿದಂತೆ ಇನ್ನು ಕೆಲವು ಸಿವಿಲ್ ಕೆಲಸಗಳು ಬಾಕಿ ಉಳಿದಿವೆ. ಇದರಿಂದ ವಾಣಿಜ್ಯ ಕಾರ್ಯಾಚರಣೆಗೆ ಇಟ್ಟುಕೊಂಡಿದ್ದ ನಿಗದಿತ ಗುರಿ ತಲುಪುವುದು ವಿಳಂಬವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು TOI ವರದಿ ಮಾಡಿದೆ.

ಇನ್ನೂ ರೈಲು ಕಾರ್ಯಾಚರಣೆಗೆ ಬೈಯಪ್ಪನಹಳ್ಳಿ ಮೆಟ್ರೋ ಡಿಪೋದಿಂದ ನೀಲಿ ಮಾರ್ಗಕ್ಕೆ ಸಂಪರ್ಕ ಸಾಧಿಸಬೇಕಿದೆ. ನೀರ್ಣಾಯಕ ಭಾಗದಲ್ಲಿ ಕೆಲಸಗಳು ಬಾಕಿ ಇವೆ. ಮಾರತ್ತಹಳ್ಳಿ, ಸಿಲ್ಕ್ ಬೋರ್ಡ್ ಭಾಗದಲ್ಲಿ ವಯಾಡರ್ಕ್ ನಿರ್ಮಾಣ ಪೂರ್ಣಗೊಂಡಿಲ್ಲ. ಇದರ ಕೆಲಸ ಪೂರ್ಣಗೊಳಿಸಲು ಕೆಲವು ತಾಂತ್ರಿಕ ಸವಾಲುಗಳಿವೆ.

ಈ ಹಿಂದೆ ಮಾರತ್ತಹಳ್ಳಿ, ಸರ್ಜಾಪುರ ಜಂಕ್ಷನ್ ಬಳಿ ಭೂಸ್ವಾಧೀನ ಸಮಸ್ಯೆ ಉಂಟಾಗಿತ್ತು. ನೀಲಿ ಮಾರ್ಗದ ಸಂಯೋಜನೆ ಅಂತಿಮಗೊಳಿಸುವ ಕಾರ್ಯವು ವಿಲಂಬವಾಗಿತ್ತು. ವಯಾಡಕ್ಟ್ ಹಾಗೂ ಪಿಲ್ಲರ್ ನಿರ್ಮಾಣಕ್ಕೆ ಜಿಬಿಎದಂತಹ ಸಂಸ್ಥೆಗಳಿಂದ ಅನುಮತಿ ತೆಗೆದುಕೊಳ್ಳುವುದು ತಡವಾಗಿತ್ತು. ಅಲ್ಲಿಂದ ಈವರೆಗೆ ಒಂದೊಂದು ಕೆಲಸವನ್ನು ಪೂರ್ಣಗೊಳಿಸುತ್ತಾ ಬರಲಾಗಿದೆ. ಸದ್ಯಕ್ಕೆ ಅಕ್ಟೋಬರ್‍‌ ನಲ್ಲಿ ಟ್ರಯಲ್ ರನ್ ಮಾಡಲು ಪ್ರಯತ್ನಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರೈಲುಗಳು ಬಂದರೂ ಲೈನ್ ಕೆಲಸ ಮುಗಿದಿಲ್ಲ

ಈ ಹಿಂದೆ ಹಳದಿ ಮಾರ್ಗದ ಕಾಮಗಾರಿ ಪೂರ್ಣಗೊಂಡು ವರ್ಷಗಳು ಕಳೆದರೂ ರೈಲುಗಳು ಸಿಕ್ಕಿರಲಿಲ್ಲ. ಆದರೆ ಈಗ ನೀಲಿ ಮಾರ್ಗಕ್ಕೆ ಡ್ರವೈರ್ ಲೆಸ್ ರೈಲುಗಳು ಆಗಮಿಸಿದರೂ ಸಂಪೂರ್ಣ ಕೆಲಸ ಮುಗಿಯದ ಕಾರಣ ಅವುಗಳ ಪ್ರಾಯೋಗಿಕ ಸಂಚಾರ, ಅಂತಿಮ ಶಾಸನ ಬದ್ಧ ತಪಾಸಣೆ ಮಾಡಲು ಆಗುತ್ತಿಲ್ಲ. ಎಲ್ಲವು ಅಂದುಕೊಂಡಂತೆ ಆಗಿದ್ದರೆ ಮೊದಲ ಗಡುವಿನ ಅವಧಿ ಮಾರ್ಚ್ 2026ರ ಹೊತ್ತಿಗೆ ಸಂಪೂರ್ಣ ನೀಲಿ ಮಾರ್ಗ ತೆರೆಯಬೇಕಿತ್ತು. ಇದೀಗ ಅರ್ಧ ಮಾರ್ಗ ತೆರೆಯಲು ಒಂದು ವರ್ಷ ವಿಳಂಭವಾಗುವುದು ಖಚಿತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+