Get Updates
Get notified of breaking news, exclusive insights, and must-see stories!

Terminal: ಬೆಂಗಳೂರಿಗೆ ಅಗತ್ಯವಾದ 4ನೇ ರೈಲ್ವೆ ಟರ್ಮಿನಲ್ ಸ್ಥಳ ಬದಲಾವಣೆ? ಕಾರಣವೇನು?

ಬೆಂಗಳೂರು, ಸೆಪ್ಟಂಬರ್ 07: ಬೆಂಗಳೂರಲ್ಲಿ ಹೆಚ್ಚಾಗುತ್ತಿರುವ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ ಹೊಸ ಆಧುನಿಕ ರೈಲ್ವೆ ಟರ್ಮಿನಲ್ ನಿರ್ಮಾಣ ಯೋಜನೆಗೆ ರೈಲ್ವೆ ಇಲಾಖೆ ಕೈ ಹಾಕಿದೆ. ಸ್ಥಳ ಅಂತಿಮ ಸಮೀಕ್ಷೆ ನಡೆಸಲು ಅನುಮೋದನೆ ನೀಡಿ ತಿಂಗಳುಗಳು ಕಳದಿವೆ. ಇದೀಗ ಸ್ಥಳ ಬದಲಾವಣೆ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ಹೌದು, ಬೆಂಗಳೂರಿನ ರೈಲ್ವೆ ದಟ್ಟಣೆಗೆ ಪರಿಹಾರಾರ್ಥವಾಗಿ ನಾಲ್ಕನೇ ಕೋಚಿಂಗ್ ಟರ್ಮಿನಲ್‌ನ ಅಗತ್ಯತೆ ಇದೆ. ಆದರೆ ಯಾವ ಸ್ಥಳದಲ್ಲಿ ನಿರ್ಮಿಸಬೇಕು ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಈ ಮೊದಲು ಉದ್ದೇಶಿಸಿದ್ದ ದೇವನಹಳ್ಳಿ ವ್ಯಾಪ್ತಿಯ ವಿಶಾಲ ಸ್ಥಳದಲ್ಲಿ ನಿರ್ಮಿಸುವುದು ಕಾರ್ಯ ಸಾಧುವಲ್ಲ. ಹೀಗಾಗಿ ನೈಋತ್ಯ ರೈಲ್ವೆ (SWR) ಯಲಹಂಕದ ರೈಲ್ ವೀಲ್ ಫ್ಯಾಕ್ಟರಿ (RWF) ಬೇರೆ ಸ್ಥಳ ಹುಡುಕಾಟದಲ್ಲಿದೆ ಎಂದು 'ದಿ ಹಿಂದೂ' ವರದಿ ಮಾಡಿದೆ.

Bengaluru May Get 4th Railway Terminal at Yelahanka Not in Devanahalli Why

ಬೆಂಗಳೂರಿನ ನಾಲ್ಕನೇ ರೈಲ್ವೆ ಟರ್ಮಿನಲ್ ಅನ್ನು ದೇವನಹಳ್ಳಿ ಬದಲಾಗಿ ಯಲಹಂಕ ಉದ್ದೇಶಿತ ಜಾಗದಲ್ಲಿ ನಿರ್ಮಿಸುವ ನಿರೀಕ್ಷೆಗಳು ದಟ್ಟವಾಗಿದೆ. ಹೀಗೆ ಜಾಗ ಬದಲಿಸಲು ಹಲವು ಕಾರಣಗಳನ್ನು ನೀಡಲಾಗಿದೆ. ಯಲಹಂಕದಲ್ಲಿ ನಿರ್ಮಾಣಗೊಂಡರೆ ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿಗೆ ಹೋಗುವ ರೈಲುಗಳ ನಿಯಂತ್ರಣಕ್ಕೆ ಸಹಾಯವಾಗುತ್ತದೆ. ಅದೇ ದೇವನಹಳ್ಳಿಯಲ್ಲಿ ಸ್ಥಾಪನೆಯಾದರೆ ತಾಂತ್ರಿಕ ಮತ್ತು ಲಾಜಿಸ್ಟಿಕ್ ರಸ್ತೆ ಅಡೆತಡೆ ಉಂಟಾಗಬಹುದೆಂದು ಅಂದಾಜಿಸಲಾಗಿದೆ. ಹೀಗಾಗಿ ಸ್ಥಳ ಬದಲಾಗಿದೆ ಎಂದು ಹೇಳಲಾಗುತ್ತಿದೆ.

ಸದ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಂಗಳೂರು ಮೂರು ಪ್ರಮುಖ ಟರ್ಮಿನಲ್‌ಗಳನ್ನು ಅವಲಂಬಿಸಿದೆ - ಕೆಎಸ್ಆರ್ ಸಿಟಿ, ಯಶವಂತಪುರ ಮತ್ತು ಬೈಯಪ್ಪನಹಳ್ಳಿಯಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಇವೆ. ದೇಶದ ಈಶಾನ್ಯ ಭಾಗದ ರಾಜ್ಯಗಳಿಗೆ ಬೆಂಗಳೂರು SMVT ನಿಲ್ದಾಣದಿಂದ ನಿತ್ಯ ಸುಮಾರು 50 ರೈಲುಗಳು ಓಡಾಡುತ್ತವೆ. ನಿತ್ಯ ಮೂರು ಟರ್ಮಿನಲ್‌ಗಳಿಗೆ ಸುಮಾರು 140- 150ರೈಲುಗಳು ಕಾರ್ಯಾಚರಣೆ ಮಾಡುತ್ತವೆ.

ಪ್ರಯಾಣಿಕರು ಹೆಚ್ಚಾಗುತ್ತಿದ್ದು, ರೈಲುಗಳ ಸಂಖ್ಯೆ ಹೆಚ್ಚಿಸಿದರೂ ಸಂಚಾರಕ್ಕೆ ತೊಡಕಾಗುವ ಸಾಧ್ಯತೆ ಇದೆ. ಹೀಗಾಗಿ ಹೊಸ ಟರ್ಮಿನಲ್ ಸ್ಥಾಪನೆ ಬೆಂಗಳೂರಿಗೆ ಅನಿವಾರ್ಯವಾಗಿದೆ. ಆದರೆ ಅದಕ್ಕೆ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗುವ ಲಕ್ಷಣ ಕಾಣುತ್ತಿದೆ. ಜೊತೆಗೆ ಭೂಮಿ ಖರೀದಿಸುವ ಹೊತ್ತಿಗೆ ಭೂಮಿ ಬೆಲೆ ಮತ್ತಷ್ಟು ಎಚ್ಚಾಗುವ ಸಾಧ್ಯತೆ ಇದೆ.

ಯಶವಂತಪುರ-ತುಮಕೂರುವರೆಗೆ 4 ಲೈನ್

2019ರಿಂದ ರೈಲ್ವೆ ಮಂಡಳಿಯ ಗಮನದಲ್ಲಿರುವ ಎರಡನೇ ಟರ್ಮಿನಲ್ ಎಂದರೆ ಅದು ಯಶವಂತಪುರ. ಇದರ ಸುತ್ತಮುತ್ತಲಿನ ಜಾಗ ಸದುಪಯೋಗ ಮಾಡಿಕೊಂಡರೆ ಹೆಚ್ಚಿನ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ರೈಲ್ವೆ ಇಲಾಖೆಯು ತುಮಕೂರು ಕಡೆಗೆ ಹಾಲಿ ಎರಡು ಪಥಗಳನ್ನು ಹೆಚ್ಚುವರಿಯಾಗಿ 4 ಟ್ರ್ಯಾಕ್‌ಗಳನ್ನು ನಿರ್ಮಿಸಲು ಪ್ಲಾನ್ ಮಾಡಿಕೊಂಡಿದೆ. ತುಮಕೂರು ವರೆಗೆ ನಾಲ್ಕು ಲೈನ್‌ ಆಗಿ ಪರಿವರ್ತಿಸುವುದಾಗಿ ಇತ್ತಿಚೆಗೆ ವಿ.ಸೋಮಣ್ಣ ಸಹ ಹೇಳಿದ್ದಾರೆ.

ಇದರಿಂದ ಹುಬ್ಬಳ್ಳಿ, ಬೆಳಗಾವಿ ಮತ್ತು ಬಳ್ಳಾರಿಯಿಂದ ಬರುವ ರೈಲುಗಳ ಒತ್ತಡ, ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ. ಈ ಮೊದಲು ಬೈಯಪ್ಪನಹಳ್ಳಿಯಲ್ಲಿ SMVT ಟರ್ಮಿನಲ್ ದಟ್ಟಣೆಗೆ ಪರಿಹಾರ ಎಂದು ಪರಿಗಣಿಸಲಾಗಿತ್ತು. ಆದರೆ ಅದು ನಿರಾಶದಾಯಕಾಗಿದೆ. ಇದರಿಂದಾಗಿ ಹೊಸ ಟರ್ಮಿನಲ್ ಮೇಲೆ ಹೆಚ್ಚಿನ ನಿರೀಕ್ಷೆ ಹುಟ್ಟುವಂತೆ ಆಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+