30 ನಾಯಿಗಳ ಸಾಮೂಹಿಕ ಹತ್ಯೆ ಹಿಂದೆ ಬಿಬಿಎಂಪಿ ?

ಬೆಂಗಳೂರು,ಜುಲೈ 22: ಮೂಕ ಪ್ರಾಣಿಗಳ ಮೇಲಿನ ದೌರ್ಜನ್ಯ ಚೆನ್ನೈ ಮತ್ತು ಹೈದರಾಬಾದ್ ಗೆ ಮಾತ್ರ ಸೀಮತವಾಗಿಲ್ಲ. ನಮ್ಮ ರಾಜಧಾನಿ ಬೆಂಗಳೂರಿನಲ್ಲೂ ನಡೆದಿದ್ದ ಇಂಥದ್ದೇ ಅಮಾನವೀಯ ಕೃತ್ಯ ಇದೀಗ ಬೆಳಕಿಗೆ ಬಂದಿದೆ.

ಬೆಂಗಳೂರಿನ ಅಂಜನಾ ನಗರದ ಅಮೃತ್ ಮಹಲ್ ಸಮೀಪದ ಜಾಗದಲ್ಲಿ 30 ಕ್ಕೂ ಅಧಿಕ ನಾಯಿಗಳನ್ನು ಕತ್ತರಿಸಿ ಬಿಸಾಡಿದ್ದು ಪತ್ತೆಯಾಗಿದೆ. ಒಂದು ನಾಯಿಯನ್ನು ರಕ್ಷಣೆ ಮಾಡಲಾಗಿದೆ.[ನಾಯಿ ಮರಿಗಳನ್ನು ಜೀವಂತ ಸುಟ್ಟ ಇವರಿಗೇನು ಮಾಡಬೇಕು?]

Bengaluru: Mass grave with over 30 street dogs found

ನಾಯಿಯೊಂದು ವಿಕಾರವಾಗಿ ಕೂಗುತ್ತಿದ್ದುದನ್ನು ಕೇಳಿಸಿಕೊಂಡ ಸ್ಥಳೀಯ ಉದ್ಯಮಿಯೊಬ್ಬರು ಪೀಪಲ್ ಫಾರ್ ಆನಿಮಲ್ಸ್ ಸಂಸ್ಥೆಗೆ ಕರೆ ಮಾಡಿದ್ದಾರೆ. ಸಂಸ್ಥೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೋಡಿದಾಗ 30 ನಾಯಿಗಳ ತುಂಡರಿಸಿದ ದೇಹಗಳು ಪತ್ತೆಯಾಗಿದೆ.[ಡಿಕೆ ರವಿ ಮುದ್ದಿನ ನಾಯಿ ರೋನಿ ರೋದನಕ್ಕಿಲ್ಲ ಉತ್ತರ]

ಈ ಅಮಾನವೀಯ ಕೃತ್ಯದ ಹಿಂದೆ ಯಾರಿದ್ದಾರೆ? ನಿಜಕ್ಕೂ ನಾಯಿಗಳನ್ನು ಹತ್ಯೆ ಮಾಡಲು ಕಾರಣ ಏನು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ, ಖಾಲಿ ಜಾಗದಲ್ಲಿ ಬಿಬಿಎಂಪಿಯ ಗುತ್ತಿಗೆದಾರರೊಬ್ಬರು ಕಸ ತಂದು ಚೆಲ್ಲುತ್ತಿದ್ದರು. ಆದರೆ ಇಂದು ಬೆಳಗಿನ ದೃಶ್ಯ ನೋಡಿ ಆಘಾತವಾಗಿದೆ. ನಾಯಿಗಳನ್ನು ಗಮನಿಸಿದರೆ ಆರೋಗ್ಯವಾಗಿಯೇ ಇದ್ದವು ಎಂದು ಮೊದಲು ದೃಶ್ಯ ಕಂಡ ಗಾರ್ಡ್ ಕರಾಳ ಚಿತ್ರಣದ ಬಗ್ಗೆ ಹೇಳುತ್ತಾರೆ.

ಬೀದಿ ನಾಯಿಗಳ ಹಾವಳಿ ತಡೆಗೆ ಮುಂದಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೇ ಇಂಥ ಕೃತ್ಯ ಮಾಡಿ ನಾಯಿಗಳ ನಿಯಂತ್ರಣಕ್ಕೆ ಮುಂದಾಗಿಯೇ? ಎಂಬ ಅನುಮಾನ ಸಹ ಮೂಡಿದೆ. ಅತ್ತ ಜೀವಂತವಾಗಿ ನಾಯಿಗಳನ್ನು ಸುಟ್ಟ ಹೈದರಾಬಾದಿನ ಯುವಕರಿಗೆ ಕೌನ್ಸೆಲಿಂಗ್ ಮಾಡುವಂತೆಯೂ ಸೂಚನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+