ಅಮಾಯಕ ಬೀದಿ ನಾಯಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ? ರಾಜಧಾನಿ ಬೆಂಗಳೂರಲ್ಲಿ ಭೀಕರ ಘಟನೆ Stray Dog

ಕನ್ನಡಿಗರ ರಾಜಧಾನಿ ಬೆಂಗಳೂರು ಐಟಿ ತವರು, ಸಿಲಿಕಾನ್ ಸಿಟಿ ಎಂಬ ದೊಡ್ಡ ದೊಡ್ಡ ಬಿರುದು ಪಡೆದಿದೆ. ಆದರೆ ಇಂತಹ ನಗರದಲ್ಲಿ ಪದೇ ಪದೇ ಆಘಾತಕಾರಿ ಘಟನೆಗಳು ನಡೆಯುತ್ತಿದ್ದು, ಕೆಲವು ವಿಕೃತರು ಮಾಡುತ್ತಿರುವ ಕೆಲಸಕ್ಕೆ ನಮ್ಮ ಬೆಂಗಳೂರಿನ ಹೆಸರು ಹಾಳಾಗುತ್ತಿದೆ. ಅದರಲ್ಲೂ ವಲಸಿಗರ ಕಾರಣಕ್ಕೆ ಬೆಂಗಳೂರು ನಗರ ಹಾಳಾಗುತ್ತಿದೆ ಎಂಬ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಇಷ್ಟೆಲ್ಲಾ ಭಾರಿ ಆಘಾತಕಾರಿ ಬೆಳವಣಿಗೆ ನಡುವೆ, ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸರ ತನಿಖೆಯಲ್ಲಿ ಸಿಲಿಕಾನ್ ಸಿಟಿ ಬೆಚ್ಚಿ ಬೀಳುವ ಘಟನೆ ಬಯಲಾಗಿದೆ. ಹೆಣ್ಣು ಬೀದಿ ನಾಯಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಇದೀಗ ತಲ್ಲಣ ಸೃಷ್ಟಿ ಮಾಡಿದೆ.

ಹೌದು, ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸರು ಇದೀಗ ದಾಖಲು ಮಾಡಿಕೊಂಡಿರುವ ಪ್ರಕರಣ ಇಡೀ ಬೆಂಗಳೂರು ನಿವಾಸಿಗಳು ಬೆಚ್ಚಿ ಬೀಳುವಂತೆ ಮಾಡಿದೆ. ಜೆಪಿ ನಗರದಲ್ಲಿ ಹೆಣ್ಣು ಬೀದಿ ನಾಯಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಂದ ಆರೋಪದ ಮೇಲೆ ಪರಾರಿ ಆಗಿದ್ದ ವಿಕೃತ ಮನಸ್ಕನಿಗೆ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಯನ್ನ ನೇಪಾಳ ಮೂಲದ ಕಿರಣ್ (30) ಎಂದು ಗುರುತಿಸಲಾಗಿದ್ದು ಆರೋಪಿ ಇದೇ ಪ್ರದೇಶದ ಹೋಟೆಲ್‌ ಒಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಜೆಪಿ ನಗರ 7ನೇ ಹಂತದಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ ಬೀದಿ ನಾಯಿಯ ಮೇಲೆ ದೌರ್ಜನ್ಯ ಎಸಗಿರುವ ಆರೋಪ ಇದಾಗಿದ್ದು, ಶುಕ್ರವಾರ ಬೆಳಗಿನ ಜಾವ 1.25 ರಿಂದ 1.40 ರ ನಡುವೆ ಈ ಘಟನೆ ನಡೆದಿದೆ.

Bengaluru Man Under Investigation for Stray Dog Abuse and Death

ವಿಕೃತನ ಪತ್ತೆಗೆ ಪೊಲೀಸರ ಹುಡುಕಾಟ

ಪ್ರಾಣಿಗಳ ಮೇಲೆ ದೌರ್ಜನ್ಯ ತಡೆ ಕಾಯ್ದೆ, 1960ರ ಸೆಕ್ಷನ್ 11 (1)(ಎ) ಅಡಿಯಲ್ಲಿ ಎಂದರೆ ಪ್ರಾಣಿಗಳಿಗೆ ಅನಗತ್ಯ ನೋವುಂಟು ಮಾಡಿದ ಆರೋಪ ಹಾಗು ಭಾರತೀಯ ನ್ಯಾಯ ಸಂಹಿತಾ ಅರ್ಥಾತ್ ಬಿಎನ್‌ಎಸ್ ಸೆಕ್ಷನ್ 325 ಎಂದರೆ ಪ್ರಾಣಿಗಳನ್ನು ಕೊಲ್ಲುವ ಅಥವಾ ಅಂಗವಿಕಲಗೊಳಿಸುವ ಮೂಲಕ ಕಿಡಿಗೇಡಿತನ ಮೆರೆದ ಆರೋಪದ ಅಡಿಯಲ್ಲಿ ಇದೀಗ ಪೊಲೀಸರು ಕೇಸ್ ದಾಖಲಿಸಿ ಆರೋಪಿಗಾಗಿ ಬಲೆ ಬೀಸಿದ್ದಾರೆ.

ಜನವರಿ 9 ಶುಕ್ರವಾರ ಈ ಘಟನೆ ನಡೆದಿದ್ದು, ಘಟನೆ ನಡೆದ ಒಂದು ದಿನದ ನಂತರ ಅಂದರೆ ಜನವರಿ 10 ಶನಿವಾರದಿಂದ ಆರೋಪಿ ಕೆಲಸಕ್ಕೆ ಬರುವುದನ್ನೇ ನಿಲ್ಲಿಸಿದ್ದಾನೆ ಎನ್ನಲಾಗಿದೆ. ಹೀಗಾಗಿ ಪೊಲೀಸರು ಈಗ ಆರೋಪಿ ಪತ್ತೆಗೆ ಬಲೆ ಬೀಸಿದ್ದು, ಅವನನ್ನು ಪತ್ತೆಹಚ್ಚಲು ಹುಡುಕಾಟ ಆರಂಭವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿಸಿ ಕ್ಯಾಮೆರಾ ಕಂಡು ಆಘಾತ

ಸರ್ಕಾರೇತರ ಸಂಸ್ಥೆ ಸಂಸ್ಥಾಪಕಿ ಮಂಜರಿ ಚೈತನ್ಯ ಎಂಬುವವರು ನೀಡಿದ ದೂರಿನ ಪ್ರಕಾರ, ಆರೋಪಿ ಸುಮಾರು 2 ತಿಂಗಳ ಹೆಣ್ಣು ಬೀದಿ ನಾಯಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಹೀಗೆ ಲೈಂಗಿಕ ದೌರ್ಜನ್ಯ ಎಸಗಿದ ನಂತರ ವಿಕೃತ ಮನಸ್ಕ ಆರೋಪಿ ನಾಯಿಯನ್ನ ಕಾಂಪೌಂಡ್ ಗೋಡೆಗೆ ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ. ನಾಯಿ ಸಾಯದಿದ್ದಾಗ, ಆರೋಪಿ ಅದರ ಕುತ್ತಿಗೆ ತಿರುಗಿಸಿ ತುಳಿದು ಸಾಯುತ್ತಿರುವುದು ಕೂಡ ರೆಕಾರ್ಡ್ ಆಗಿರುವುದಾಗಿ ಇದೀಗ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ಪೊಲೀಸರು ಮತ್ತಷ್ಟು ತನಿಖೆ ನಡೆಸುತ್ತಿದ್ದು, ಇದೇ ಏರಿಯಾದ ಸುತ್ತಮುತ್ತಲೂ ಇರುವ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸುತ್ತಿದ್ದಾರೆ. ಆರಂಭದಲ್ಲಿ ನಾಯಿ ಕೊಲೆ ಪ್ರಕರಣವೆಂದು ಶಂಕಿಸಲಾಗಿತ್ತು, ಪೊಲೀಸರು ಹತ್ತಿರದ ಕಟ್ಟಡದಲ್ಲಿದ್ದ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಲೈಂಗಿಕ ದೌರ್ಜನ್ಯ ಬಯಲಾಗಿದ್ದು, ನಂತರ ದಕ್ಷಿಣ ವಿಭಾಗದ ಪ್ರಾಣಿ ರಕ್ಷಣಾ ತಂಡ ಮತ್ತು ಸರ್ಕಾರೇತರ ಸಂಸ್ಥೆಗೆ ಈ ವಿಷಯ ತಿಳಿಸಲಾಗಿದೆ. ಆರೋಪಿಯನ್ನು ಆದಷ್ಟು ಬೇಗ ಸೆರೆಹಿಡಿಯಲು ಬೇಕಾದ ಎಲ್ಲಾ ತಯಾರಿಯನ್ನು ಇದೀಗ ಪೊಲೀಸರು ಮಾಡಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+