ಬೆಂಗಳೂರು: ಹೆಲ್ಮೆಟ್‌ ಬದಲಾಗಿ ತಲೆಗೆ 'ಬಾಂಡ್ಲಿ' ಹಿಡಿದುಕೊಂಡ ವ್ಯಕ್ತಿ: ವಿಡಿಯೋ ಭಾರೀ ವೈರಲ್‌

ಬೆಂಗಳೂರು, ನವೆಂಬರ್ 2: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಲಿವೆ. ಪೊಲೀಸರು ರಕ್ಷಣೆಗಾಗಿ ಹೆಲ್ಮೇಟ್‌ ಧರಿಸಿ ಬೈಕ್‌ ಸಂಚಾರ ಮಾಡಿ ಎಂದು ಜಾಗೃತಿ ಮೂಡಿಸುತ್ತಲಿರುತ್ತಾರ. ಆದರೆ, ಕೆಲವರು ನಿಯಮ ಉಲ್ಲಂಘಿಸಿ ಪ್ರಾಣಕ್ಕೆ ಕುತ್ತು ತಂದುಕೊಂಡಿರುವ ಉದಾಹರಣೆಗಳಿವೆ. ಹಾಗೆಯೇ ಇದೀಗ ಇಲ್ಲೋರ್ವ ವ್ಯಕ್ತಿ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತು ಹೆಲ್ಮೆಟ್‌ ಬದಲಾಗಿ ಅಡುಗೆ ಬಾಂಡ್ಲಿಯನ್ನು ತಲೆ ಮೇಲೆ ಹಿಡಿದಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ಜೀವರಕ್ಷಣೆಗಾಗಿ ಹೆಲ್ಮೆಟ್‌ ಧರಿಸಿ ವಾಹನ ಚಲಾಯಿಸಿ ಎಂದು ಸಂಚಾರ ಪೊಲೀಸರು ದ್ವಿಚಕ್ರ ವಾಹನ ಸವಾರರಿಗೆ ಜಾಗೃತಿ ಮೂಡಿಸುತ್ತಲಿರುತ್ತಾರೆ. ಆದರೆ, ಕೆಲವರು ಕ್ಯಾರೆ ಅನ್ನದೆ, ಹೆಲ್ಮೆಟ್‌ ಧರಿಸದೇ ಬೈಕ್‌ ಚಾಲನೆ ಮಾಡುತ್ತಿದ್ದಾರೆ. ನಿಯಮದ ಪ್ರಕಾರ, ದ್ವಿಚಕ್ರ ವಾಹನದಲ್ಲಿ ಕುಳಿತುಕೊಂಡಿರುವ ಸವಾರ ಹಾಗೂ ಹಿಂಬಂದಿಯಲ್ಲಿ ಕುಳಿತವರು ಸಹ ಹೆಲ್ಮೆಟ್ ಧರಿಸಬೇಕು.

Bengaluru Man Rides with a Cooking Pan on His Head to Avoid Fine Video Goes Viral

ಆದರೆ, ಇಲ್ಲೋರ್ವ ವ್ಯಕ್ತಿ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತು ಹೆಲ್ಮೆಟ್‌ ಬದಲಾಗಿ ಬಾಂಡ್ಲಿ ತಲೆಗೆ ಅಡ್ಡ ಹಿಡಿದು ಪೊಲೀಸರು ಹಾಗೂ ಕ್ಯಾಮೆರಾಗೆ ಯಾಮಾರಿಸಲು ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಹಿಂಬದಿ ಸವಾರಿ ಮಾಡುವಾಗ ತಲೆ ಮೇಲೆ ಕಡಾಯಿ ಹಿಡಿದುಕೊಂಡ ವೀಡಿಯೊವೊಂದು ವೈರಲ್ ಆಗಿದೆ. ಭಾರೀ ಟ್ರಾಫಿಕ್‌ನಲ್ಲಿ ದಂಡ ತಪ್ಪಿಸಲು ಪ್ರಯತ್ನಿಸಿದ್ದಾಗಿ ತಿಳಿದುಬಂದಿದೆ. ರೂಪೇನ ಅಗ್ರಹಾರ ಬಳಿ ಬೈಕ್ ಟ್ರಾಫಿಕ್ ಮೂಲಕ ಚಲಿಸುವಾಗ ಹಿಂಬದಿ ಸವಾರ ತನ್ನ ತಲೆ ಮೇಲೆ ಅಡುಗೆ ಬಾಂಡ್ಲಿ ಹಾಕಿಕೊಂಡು ಹೋಗಿದ್ದಾನೆ.

ಇನ್ನೂ ಅವರ ಹಿಂದೆ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರೊಬ್ಬರು ಚಿತ್ರೀಕರಿಸಿದ ವೀಡಿಯೊದಲ್ಲಿ, ಹೆಲ್ಮೆಟ್ ಇರಬೇಕಾದ ಸ್ಥಳದಲ್ಲಿ ಆ ವ್ಯಕ್ತಿ ಕಡಾಯಿಯನ್ನು ಹಿಡಿದಿರುವುದು ಕಂಡುಬಂದಿದೆ. ಇದು ದೃಶ್ಯವನ್ನು ನೋಡಿದ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಹೆಲ್ಮೆಟ್‌ಗಳು ಜೀವರಕ್ಷಕಗಳು, ಮೊದಲು ನಿಮ್ಮ ತಲೆಗೆ ಹೆಲ್ಮೆಟ್‌ ಬಳಸಿ. ವೈರಲ್ ರೀಲರ್‌ಗಳಿಗೆ ಆಧಾರಗಳಲ್ಲ ಎಂದು ಟೀಕಿಸಿದ್ದಾರೆ.

ಈ ವಿಡಿಯೋ ನೋಡಿದ ಸಾರ್ವಜನಿಕರು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಾಮೆಂಟ್‌ ಮಾಡಿದ್ದಾರೆ. ಕೆಲವರು ಒಂದು ಹೆಲ್ಮೆಟ್‌ ಕೊಂಡುಕೊಳ್ಳುವುದಕ್ಕೆ ಆಗದೇ ಇವರು ಬಾಂಡ್ಲಿ ಹಿಡಿದುಕೊಂಡಿದ್ದಾನೆ ಎಂದು ತಮಾಷೆ ಮಾಡಿದ್ದಾರೆ. ಇನ್ನೂ ಕೆಲವರು ಇಂತಹವರ ವಿರುದ್ಧ ದಂಡಾಸ್ತ್ರದ ಜೊತೆಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಇನ್ನೂ ಈ ಬೈಕ್ ಕೇರಳ ಮೂಲದ ನಂಬರ್ ಹೊಂದಿದ್ದು, ಈ ವ್ಯಕ್ತಿ ಸಹ ಕೇರಳದವನಾಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+