ಹೂವರ್ ಬೋರ್ಡ್ ನೃತ್ಯ ಲೋಕದಲ್ಲಿ ಬೆಂಗಳೂರಿನ ಪ್ರತಿಭೆ ಮಾನ್ಯ
ಬೆಂಗಳೂರು, ಜು.16: ಭಾರತದಲ್ಲಿ ಸಾಂಪ್ರದಾಯಿಕ ಕ್ರೀಡೆಗಳಾದ ಕಬ್ಬಡ್ಡಿ, ಕೋಕೊ, ಕ್ರಿಕೆಟ್ ಮತ್ತಿತರೆ ಕ್ರೀಡೆಗಳನ್ನು ಹೊರತುಪಡಿಸಿದರೆ ಅಥ್ಲೆಟಿಕ್ಸ್ ಮಾತ್ರ ಗೊತ್ತಿರಬಹುದು ಆದರೆ ಪಾಶ್ಚಾತ್ಯ ಕ್ರೀಡೆಗಳು ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಜನಪ್ರಿಯಗೊಳ್ಳುತ್ತಿರುವುದು ಹೊಸ ಟ್ರೆಂಡ್.
ಇದೀಗ ಬೆಂಗಳೂರಿನ ಮಾನ್ಯ ಹರ್ಷ ಎಂಬ 8 ವರ್ಷ ಬಾಲಕಿ, ಜೆಪಿ ನಗರದ ನಿವಾಸಿ ತಾಯಿ ಚಿತ್ರಾ, ತಂದೆ ಹರ್ಷ ಮುದ್ದಿನ ಮಗಳು. ಭಾರತೀಯರಿಗೆ ಹೆಚ್ಚು ಕಡಿಮೆ ಅಪರಿಚಿತವೇ ಆಗಿರುವ ಹೂವರ್ ಡ್ಯಾನ್ಸ್ ಕ್ರೀಡೆಯಲ್ಲಿ ತೊಡಗಿಸಿಕೊಂಡು ಗಮನ ಸೆಳೆದಿದ್ದಾಳೆ.
ಇಂಟರ್ನೆಟ್ನಲ್ಲಿ ಧೂಳೆಬ್ಬಿಸಿರುವ ಡಾನ್ಸರ್ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ
ಬೆಂಗಳೂರಿನ 8 ವರ್ಷದ ಮಾನ್ಯ ಹರ್ಷ ಕಳೆದ ಒಂದೂವರೆ ವರ್ಷಗಳಿಂದ ಹೂವರ್ ಬೋರ್ಡ್ ಡ್ಯಾನ್ಸಿಂಗ್‌ನಲ್ಲಿ ತೊಡಗಿಸಿಕೊಂಡಿದ್ದು ದೇಶದ ಅತಿ ಕಿರಿಯ ವಯಸ್ಸಿನ ಹೂವರ್ ಬೋರ್ಡ್ ಎಂಬ ಕೀರ್ತಿಗೆ ಭಾಜನಳಾಗಿದ್ದಾಳೆ. ಸ್ಕೇಟಿಂಗ್ ಮಾದರಿಯ ಬೋರ್ಡ್‌ಮೇಲೆ ಚಲಿಸಿಕೊಂಡೇ ನೃತ್ಯ ಮಾಡುವುದು ಈ ಕ್ರೀಡೆಯ ವಿಶೇಷ ಸಾಧನೆ.
ಬೆಂಗಳೂರಿನ ಮಾನ್ಯತಾ ಹರ್ಷ ಈ ಬಗ್ಗೆ ಪರಿಣಿತಿ ಹೊಂದಿದ್ದು, ಇದರ ಜತೆಗೆ ಕ್ರಿಕೆಟ್, ಫುಟ್ ಬಾಲ್, ಬಾಸ್ಕೆಟ್ ಬಾಲ್, ಕರಾಟೆ ಮತ್ತಿತರೆ ಕ್ರೀಡೆಗಳಲ್ಲೂ ಆಸಕ್ತಿ ಹೊಂದಿದ್ದಾಳೆ, ಒಂದೂವರೆ ವರ್ಷದ ಹಿಂದೆ ಅವರ ತಂದೆ ಹರ್ಷ ಅವರು ಮಾನ್ಯ ಜನ್ಮ ದಿನದ ಕಾಣಿಕೆಯಾಗಿ ಹೂವರ್ ಬೋರ್ಡ್‌ನ್ನು ಉಡುಗೊರೆಯಾಗಿ ನೀಡಿದ್ದರು.
ಇದರಲ್ಲೇ ಸ್ವಂತ ಸಾಮರ್ಥ್ಯದಿಂದಲೇ ಪರಿಣಿತಿ ಪಡೆದ ಮಾನ್ಯ ಇದೀಗ ವೃತ್ತಿಪರವಾಗಿ ಈ ಕ್ರೀಡೆಯನ್ನು ಮುಂದುವರೆಸಲು ಮುಂದಾಗಿದ್ದಾಳೆ, ಆಕೆಯ ತಂದೆ, ತಾಯಿಯ ಪ್ರೋತ್ಸಾಹವೇ ಅದಕ್ಕೆ ಕಾರಣ ಎಂದು ಮಾನ್ಯತಾ ಸಂತಸ ವ್ಯಕ್ತಪಡಿಸುತ್ತಾಳೆ.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !