Bengaluru: ಯಮಲೂರು-ಬೆಳ್ಳಂದೂರು ಕೆರೆ ರಸ್ತೆಯಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ- ಯಾವ ದಿನದಿಂದ ತಿಳಿಯಿರಿ
ಬೆಂಗಳೂರು, ಮೇ 03: ದುರಸ್ತಿ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ ಯಮಲೂರು-ಬೆಳ್ಳಂದೂರು ಕೆರೆ ರಸ್ತೆಯನ್ನು ದ್ವಿಚಕ್ರವಾಹನ, ಆಟೋರಿಕ್ಷಾ ಮತ್ತು ಕಾರುಗಳಂತಹ ಲಘು ಮೋಟಾರು ವಾಹನಗಳಿಗೆ (ಎಲ್‌ಎಂವಿ) ತೆರೆಯಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಿಬಿಎಂಪಿ ಮುಖ್ಯ ಇಂಜಿನಿಯರ್ (ಘನತ್ಯಾಜ್ಯ ನಿರ್ವಹಣೆ) ಬಸವರಾಜ ಕಬಾಡೆ ಮಾತನಾಡಿ, ಸೇತುವೆ ಮರುನಿರ್ಮಾಣದಿಂದಾಗಿ ಯಮಲೂರು-ಬೆಳ್ಳಂದೂರು ಕೆರೆ ಕೋಡಿ ರಸ್ತೆ ಬಂದ್ ಆಗಿತ್ತು. ಈಗ ಮತ್ತೆ ತೆರೆಯಲಾಗಿದೆ. ಇಲ್ಲಿ ಲಘು ವಾಹನಗಳು ಸಂಚರಿಸಬಹುದು ಎಂದು ಹೇಳಿದ್ದಾರೆ.

ಹೆವಿ ವಾಹನಗಳನ್ನು ಸದ್ಯಕ್ಕೆ ಅನುಮತಿಸಲಾಗುವುದಿಲ್ಲ ಎಂದು ಕಬಾಡೆ ನ್ಯೂಸ್ 9ಗೆ ತಿಳಿಸಿದ್ದಾರೆ.
ಲಘು ವಾಹನಗಳು ಶನಿವಾರದಿಂದ ಸಂಚರಿಸಬಹುದು ಎಂದು ಅವರು ಹೇಳಿದ್ದಾರೆ.
ಹಳೆಯ ಸೇತುವೆ ಕೇವಲ 12 ಮೀಟರ್ ಅಗಲವಿದ್ದು, ಮರುನಿರ್ಮಾಣ ಮಾಡಲಾಗಿದೆ ಎಂದು ಎಂಜಿನಿಯರ್ ಹೇಳಿದ್ದಾರೆ.
'ತೆರುವಿನ ಅಗಲವು ಕೇವಲ 15-16 ಮೀಟರ್ ಆಗಿತ್ತು. ಈಗ ನೀರು ಹರಿಯುವಂತೆ ವೆಂಟ್ ಗಾತ್ರವನ್ನು 24 ಮೀಟರ್‌ಗೆ ಮತ್ತು ರಸ್ತೆಯ ಅಗಲವನ್ನು 30 ಮೀಟರ್‌ಗೆ ಹೆಚ್ಚಿಸುತ್ತಿದ್ದೇವೆ. ಇದು ರಸ್ತೆ ಮಟ್ಟಕ್ಕಿಂತ ಸುಮಾರು ಎರಡು ಅಡಿ ಎತ್ತರವಿದ್ದು, ಬೆಳ್ಳಂದೂರು ಕೆರೆಯಿಂದ ನೀರು ಸರಾಗವಾಗಿ ಹರಿಯುತ್ತದೆ' ಎಂದು ಕಬಾಡೆ ತಿಳಿಸಿದ್ದಾರೆ.
Bellandur Kodi Road Update pic.twitter.com/NKXxfcehNK
— Outer Ring Road Companies Association ® (@0RRCA) June 3, 2023
ಶುಕ್ರವಾರ ಇನ್ನೊಂದು ದಿನ ರಸ್ತೆ ಬಂದ್ ಮಾಡಿದ್ದರಿಂದ ಬೆಂಗಳೂರು ನಿವಾಸಿಗಳು ದಿನನಿತ್ಯದ ಸಂಚಾರಕ್ಕೆ ತೊಂದರೆ ಅನುಭವಿಸಿದರು. ಹಲವಾರು ನೆಟಿಜನ್‌ಗಳು ತಾವು ಪ್ರಯಾಣಿಸುವಾಗ ಅನುಭವಿಸುತ್ತಿರುವ ಕೆಟ್ಟ ಪರಿಸ್ಥಿತಿಗಳನ್ನು ತಿಳಿಸಿದ್ದಾರೆ. ಪರ್ಯಾಯ ರಸ್ತೆಗಳ ವಿಡಿಯೊಗಳು ಮತ್ತು ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.
ಫುಡ್ ಬ್ಲಾಗರ್ ಹೇಮಂತ್ ಕಾಮತ್ ಎಂಬುವವರು, 'ಬೆಳ್ಳಂದೂರು ಕೆರೆ ರಸ್ತೆ ದುರಸ್ತಿಗಾಗಿ ಬ್ಲಾಕ್ ಆಗಿದ್ದು, ಇದು ಕಚೇರಿಗೆ ನಮ್ಮ ದೈನಂದಿನ ಮಾರ್ಗವಾಗಿದೆ. ಹೌದು, ನೀವು ಮಾರತ್ತಹಳ್ಳಿ ರಸ್ತೆಯಲ್ಲಿ ಹೋಗಬಹುದು ಅಥವಾ ಕೋರಮಂಗಲದಿಂದ ಬರಬಹುದು. ಆದರೆ ಅಲ್ಲಿ ಟ್ರಾಫಿಕ್ ಹೆಚ್ಚಿರುತ್ತದೆ' ಎಂದು ಹೇಳಿದ್ದಾರೆ.
With Bellandur Lake Road blocked for repair, this is our daily route to office.. Yes, you can take Marathahalli road or come from Koramangala but the traffic is insane! #Bengaluru pic.twitter.com/RbQSzmvXin
— Hemanth Kamath (@MuteManushya) June 1, 2023
ಮತ್ತೊಬ್ಬ ನೆಟಿಜನ್ ಬೆಂಗಳೂರಿನ ರಸ್ತೆಗಳಲ್ಲಿ ಮಣ್ಣು ಹಾಕಲಾಗಿದೆ ಎಂದು ಹೇಳಿದ್ದಾರೆ. 'ಇಲ್ಲಿನ ಹೆಚ್ಚಿನ ಪ್ರಯಾಣಿಕರು ಹೊರ ವರ್ತುಲ ರಸ್ತೆಯನ್ನು ಹೊಂದಿರುವ ವಿವಿಧ ಟೆಕ್ ಕಚೇರಿಗಳು ಮತ್ತು ಕ್ಯಾಂಪಸ್‌ಗಳಿಗೆ ಹೋಗುತ್ತಾರೆ. ಬೆಂಗಳೂರಿಗೆ ಸ್ವಾಗತ. ಇಲ್ಲಿ ಹೈಟೆಕ್‌ಗೆ ಹೋಗುವ ರಸ್ತೆಯನ್ನು ಮಣ್ಣಿನಿಂದ ನಿರ್ಮಿಸಲಾಗಿದೆ' ಎಂದು ಚಂದ್ರಾನಿ ಟ್ವೀಟ್ ಮಾಡಿದ್ದಾರೆ.
ಅಭಿಷೇಕ್ ಚಟರ್ಜಿ ಎಂಬುವವರು ಕೆಸರು ತುಂಬಿದ ರಸ್ತೆಯ ವಿಡಿಯೊವನ್ನು ಶೇರ್ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿದ್ದಾರೆ. 'ಗೌರವಾನ್ವಿತ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸರ್, ಇದು ಬೆಂಗಳೂರಿನ ಕರಿಯಮ್ಮನ ಅಗ್ರಹಾರ ರಸ್ತೆಯ (ಬೆಳ್ಳಂದೂರು ಕೆರೆಯ ಹತ್ತಿರ) ಸುಮಾರು 1 ಕಿಮೀ ವ್ಯಾಪ್ತಿಯ ಸ್ಥಿತಿ. ಅದು ಏಕೆ ಕೆಟ್ಟದಾಗಿದೆ ಎಂದು ನನಗೆ ತಿಳಿದಿಲ್ಲ. ಆದರೆ ಇದು ಪ್ರಯಾಣಿಕರಿಗೆ ತುಂಬಾ ಅನಾನುಕೂಲ ಮತ್ತು ಅಪಾಯಕಾರಿ' ಎಂದು ಹೇಳಿದ್ದಾರೆ.
Respected @siddaramaiah and @DKShivakumar sir, this is the condition of almost 1KM stretch of Kariyammana Agrahara Road (Near Bellandur lake) in Bengaluru. I don't know the context or why it is so bad, but this is very inconvenient and dangerous for passengers. pic.twitter.com/GRfb5p2uZk
— Abhisek Chatterjee (@foldednormal) June 2, 2023
'ನನ್ನ ರ್ಯಾಪಿಡೋ ಕ್ಯಾಪ್ಟನ್ ಮತ್ತು ನಾನು ಬಹುತೇಕ ಬೈಕ್‌ನಿಂದ ಕೆಳಗೆ ಬಿದ್ದೆವು, ಈ 1 ಕಿಮೀ ವ್ಯಾಪ್ತಿಯನ್ನು ಹಾದುಹೋಗಲು ನಮಗೆ 15 ನಿಮಿಷಗಳನ್ನು ತೆಗೆದುಕೊಂಡಿತು ಮತ್ತು ರಸ್ತೆಯಲ್ಲಿದ್ದ ಇತರ ಅನೇಕ ಪ್ರಯಾಣಿಕರು ಇದೇ ರೀತಿ ಬಳಲುತ್ತಿದ್ದರು. ದಯವಿಟ್ಟು ಆದಷ್ಟು ಬೇಗ ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ' ಎಂದು ಚಟರ್ಜಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications