Benglauru rain: ಬೆಂಗಳೂರಿಗೆ ತಂಪೆರೆದ ವರ್ಷದ ಮೊದಲ ಮಳೆ, ಎಲ್ಲೆಲ್ಲಿ ಆಯ್ತು? ಮುನ್ಸೂಚನೆ ಏನು? ತಿಳಿಯಿರಿ
ಕರ್ನಾಟಕದ ವಿವಿಧೆಡೆ ಅಬ್ಬರಿಸಿದ್ದ ವರುಣ ಇದೀಗ ರಾಜ್ಯ ರಾಜಧಾನಿ ಬೆಂಗಳೂರಿಗೂ ಕಾಲಿಟ್ಟಿದೆ. ಬಿಸಿಲಿನ ಧಗೆಗೆ ಕಾವೇರುತ್ತಿದ್ದ ನಗರದಲ್ಲಿ ಈ ವರ್ಷದ ಮೊದಲ ಮಳೆಯ ಪ್ರವೇಶವಾಗಿದೆ. ಈ ಮೂಲಕ ವರುಣ ತಂಪೆರೆದಿದ್ದಾನೆ.
ಬೆಂಗಳೂರು, ಮಾರ್ಚ್ 16: ಕರ್ನಾಟಕದ ವಿವಿಧೆಡೆ ಅಬ್ಬರಿಸಿದ್ದ ವರುಣ ಇದೀಗ ರಾಜ್ಯ ರಾಜಧಾನಿ ಬೆಂಗಳೂರಿಗೂ ಕಾಲಿಟ್ಟಿದೆ. ಬಿಸಿಲಿನ ಧಗೆಗೆ ಕಾವೇರುತ್ತಿದ್ದ ನಗರದಲ್ಲಿ ಈ ವರ್ಷದ ಮೊದಲ ಮಳೆಯ ಪ್ರವೇಶವಾಗಿದೆ. ಈ ಮೂಲಕ ವರುಣ ತಂಪೆರೆದಿದ್ದಾನೆ.
ಮೂರು ನಾಲ್ಕು ದಿನದಿಂದ ರಾಜ್ಯದಲ್ಲಿ ಅಲ್ಲಲ್ಲಿ ಮಳೆಯಾಗುತ್ತಿದೆ. ಆದರೆ ಬೆಂಗಳೂರಿಗೆ ಕಾಲಿಟ್ಟಿರಲಿಲ್ಲ. ಕಳೆದ ಎರಡು ದಿನದಿಂದ ನಗರದಲ್ಲಿ ತಾಪಮಾನ ತುಸು ಕಡಿಮೆಯಾಗುವ ಮೂಲಕ ಮಳೆ ಮುನ್ಸೂಚನೆ ನೀಡಿತ್ತು. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಗುರುವಾರ ಸಂಜೆ ಬೆಂಗಳೂರಿನ ಹಲವೆಡೆ ವರ್ಷದ ಮೊದಲ ಮುಂಗಾರು ಪೂರ್ವ ಮಳೆ ದಾಖಲಾಯಿತು.

ಬೆಳಗ್ಗೆಯಿಂದಲೇ ಬಿಸಲಿನ ಝಳ ಕಂಡು ಬಂತ, ಸಂಜೆ ನಂತರ ಅದೆಲ್ಲವು ಮರೆಯಾಗಿ ನಗರಾದ್ಯಂತ ಮೋಡ ಕವಿದ ವಾತಾವರಣವೇ ಕಂಡು ಬಂತು. ನಂತರ ಬಸವನಗುಡಿ, ಹನುಮಂತ ನಗರ, ವಿದ್ಯಾಪೀಠ, ಜಯನಗರ, ಚಾಮರಾಜನಗರ ಯಲಹಂಕ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹಗುರ ಮಳೆ ಆಗಿದೆ. ಇನ್ನೂ ಕೆಲವು ಕಡೆಗಳಲ್ಲಿ ತುಂತುರು ಮಳೆ ಬಿದ್ದಿದೆ.
ಬಿರುಬೇಸಿಗೆಯಲ್ಲೂ ಅಕಾಲಿಕ ಮಳೆ ಶುರುವಾಗಿದೆ. ಸಮುದ್ರಮಟ್ಟದಲ್ಲಿ ಸೃಷ್ಟಿಯಾದ ಸುಳಿಗಾಳಿಯ ಕಾರಣದಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಇನ್ನೂ ಎರಡು-ಮೂರು ದಿನ ಗುಡುಗು ಸಹಿ ಮಳೆ ಸಂಭವವಿದೆ. ಕೆಲವೆಡೆ ಆಲಿಕಲ್ಲು ಮಳೆ ಸಹ ಆಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಾರ್ಚ್ 19ರವರೆಗೆ ಬೆಂಗಳೂರಿನಲ್ಲಿ ಇದೇ ರೀತಿಯ ವಾತಾವರಣ ಮುಂದವರಿಯಲಿದೆ. ಶುಕ್ರವಾರ ಇನ್ನೂ ಹಲವು ಕಡೆಗಳಲ್ಲಿ ಜೋರು ಮಳೆ ನಿರೀಕ್ಷೆ ಇದೆ. ಈ ಅವಧಿಯಲ್ಲಿ ತಾಪಮಾನ ತುಸು ಕಡಿಮೆ ಇರಲಿದೆ. ನಗರದೆಲ್ಲಡೆ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ತಾಪಮಾನ ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲು ಆಗಲಿದೆ.

ಇನ್ನೂ ಗುರುವಾರ ರಾಜ್ಯದ ಗರಿಷ್ಠ ತಾಪಮಾನ ಕಲಬುರಗಿಯಲ್ಲಿ 37 ಡಿಗ್ರಿ ಸೆಲ್ಸಿಯಸ್, ಬಳ್ಳಾರಿಯಲ್ಲಿ36 ಡಿಗ್ರಿ ಸೆಲ್ಸಿಯಸ್ ಮತ್ತು ರಾಜ್ಯದ ಕನಿಷ್ಠ ತಾಪಮಾನ ಚಿಕ್ಕಮಗಳೂರಲ್ಲಿ ಮತ್ತು ಮೈಸೂರಲ್ಲಿ ತಲಾ 12 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಹಿತಿ ನೀಡಿದೆ.












Click it and Unblock the Notifications