Get Updates
Get notified of breaking news, exclusive insights, and must-see stories!

Bengaluru Property prices: ಅಕ್ಟೋಬರ್ 1 ರಿಂದ ಬೆಂಗಳೂರಿನ ಆಸ್ತಿ ಬೆಲೆಗಳಲ್ಲಿ ಭಾರೀ ಏರಿಕೆ: ಅಂಕಿಅಂಶ, ಕಾರಣ, ವಿವರ

ಬೆಂಗಳೂರು, ಅಕ್ಟೋಬರ್ 2: ಅಕ್ಟೋಬರ್ 1 ರಿಂದ ಬೆಂಗಳೂರಿನ ಭೂಮಿ ಹಾಗೂ ಫ್ಲಾಟ್‌ಗಳ ಬೆಲೆಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವು ಆಸ್ತಿಗಳ ಮಾರ್ಗಸೂಚಿ ದರವನ್ನು ( Guidance value ) ಹೆಚ್ಚಿಸುವುದಾಗಿ ಘೋಷಿಸಿದ್ದರಿಂದ ಆಸ್ತಿ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ.

ಕರ್ನಾಟಕ ಸರ್ಕಾರವು ಆಸ್ತಿಗಳ ಮಾರ್ಗಸೂಚಿ ದರವನ್ನು ಪ್ರಸ್ತುತ ಮೌಲ್ಯಕ್ಕೆ 25 ರಿಂದ 30 ರಷ್ಟು ಏರಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಪ್ರಾಪರ್ಟಿ ಬೆಲೆಗಳು ಭಾನುವಾರದಿಂದ ಏರಿಕೆಯಾಗಲು ಪ್ರಾರಂಭಿಸಿವೆ. ಕಳೆದ ಐದು ವರ್ಷಗಳಿಂದ ಆಸ್ತಿಗಳ ಮಾರ್ಗಸೂಚಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡದೇ ಇರುವುದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

Bengaluru land and flat prices set to go up from October 1. Here is why

ಸ್ಥಳೀಯ ಮಾರುಕಟ್ಟೆ ದರಗಳನ್ನು ಅವಲಂಬಿಸಿ ಸರ್ಕಾರವು ನಿಗದಿಪಡಿಸಿದ ಆಸ್ತಿಯ ಕನಿಷ್ಠ ಮಾರಾಟ ಬೆಲೆಯನ್ನು ಆಸ್ತಿಗಳ ಮಾರ್ಗಸೂಚಿ ದರವೆಂದು ಪರಿಗಣಿಸಲಾಗುತ್ತದೆ.

ಆಸ್ತಿಯ ಮೌಲ್ಯದ ಮೇಲೆ ಶೇ 5.6 ಸ್ಟ್ಯಾಂಪ್ ಡ್ಯೂಟಿ, ಸೆಸ್ ಮತ್ತು ಹೆಚ್ಚುವರಿ ಶುಲ್ಕ ಹಾಗೂ ಶೇ 1 ರ ಸ್ಥಿರ ನೋಂದಣಿ ಶುಲ್ಕಗಳನ್ನು ಖರೀದಿದಾರರು ಪಾವತಿಸಬೇಕು.

ಸರ್ಕಾರವು ಆಸ್ತಿಗಳ ಮಾರ್ಗಸೂಚಿ ದರವನ್ನು ಹೆಚ್ಚಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಳೆದ ಒಂದು ವಾರದಿಂದ ಭಾರೀ ಜನಜಂಗುಳಿ ಕಂಡು ಬಂದಿದೆ. ಅಕ್ಟೋಬರ್ 1 ಕ್ಕಿಂತ ಮೊದಲು ಆಸ್ತಿ ನೋಂದಣಿಯನ್ನು ಪೂರ್ಣಗೊಳಿಸಲು ಖರೀದಿದಾರರು ಸಾಲುಗಟ್ಟಿ ನಿಂತಿರುವುದು ವರದಿಯಾಗಿದೆ.

Bengaluru land and flat prices set to go up from October 1. Here is why

ಈ ಕುರಿತು ಮಾಧ್ಯಮಗಳಿಗೆ ಮಾತನಾಡಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ, 'ನೋಂದಣಿ ಇಲಾಖೆಯು ಕಾನೂನು ಪ್ರಕಾರ ಪ್ರತಿ ವರ್ಷ ಮಾರ್ಗದರ್ಶಿ ಮೌಲ್ಯವನ್ನು ಪರಿಷ್ಕರಿಸಬೇಕು. ಆದರೆ, ಕಳೆದ ಐದು ವರ್ಷಗಳಿಂದ ಮಾರ್ಗದರ್ಶಿ ಮೌಲ್ಯವನ್ನು ಪರಿಷ್ಕರಣೆ ಮಾಡಿಲ್ಲ, ಇದು ಕಪ್ಪು ಹಣ ಸಂಗ್ರಹ ಹಾಗೂ ಚಲಾವಣೆಗೆ ಕಾರಣವಾಗುತ್ತದೆ' ಎಂದು ಹೇಳಿದ್ದಾರೆ.

'ಮಾರ್ಗದರ್ಶನ ಮೌಲ್ಯ ಪರಿಷ್ಕರಣೆ ಮಾಡದಿರುವುದು ಕಪ್ಪುಹಣದ ವಹಿವಾಟಿಗೆ ಪರೋಕ್ಷವಾಗಿ ಅವಕಾಶ ನೀಡಿದೆ. ಆದ್ದರಿಂದ ಅಕ್ಟೋಬರ್ 1 ರಿಂದ ಹೊಸ ಮಾರ್ಗದರ್ಶಿ ಮೌಲ್ಯ ಜಾರಿಗೆ ಬರಲಿದೆ' ಎಂದು ತಿಳಿಸಿದ್ದಾರೆ.

ಮಾರ್ಗದರ್ಶಿ ದರದ ಪರಿಷ್ಕರಣೆ ಕುರಿತು ವಿವರಿಸಿದ ಸಚಿವರು, 'ಮಾರುಕಟ್ಟೆ ದರ ಮತ್ತು ಮಾರ್ಗದರ್ಶಿ ಮೌಲ್ಯವು ಸಮಾನವಾಗಿರುವ ಪ್ರದೇಶಗಳಲ್ಲಿ ಮಾರ್ಗಸೂಚಿ ಮೌಲ್ಯವನ್ನು ಶೇಕಡಾ 10 ರಷ್ಟು ಹೆಚ್ಚಿಸಲಾಗಿದೆ. ಮಾರುಕಟ್ಟೆ ದರವು ಮಾರ್ಗದರ್ಶಿ ಮೌಲ್ಯಕ್ಕಿಂತ 200 ಪಟ್ಟು ಹೆಚ್ಚಿರುವ ಪ್ರದೇಶಗಳಲ್ಲಿ , ಪರಿಷ್ಕೃತ ದರವನ್ನು ಶೇ.20 ರಿಂದ ಶೇ.25 ರಷ್ಟು ಹೆಚ್ಚಿಸಲಾಗಿದೆ' ಎಂದು ಅವರು ತಿಳಿಸಿದ್ದಾರೆ.

Bengaluru land and flat prices set to go up from October 1. Here is why

ಮಾರ್ಗದರ್ಶಿ ಮೌಲ್ಯವು ಮಾರುಕಟ್ಟೆ ದರಕ್ಕಿಂತ ಹೆಚ್ಚಿದ್ದರೆ, ಅಂತಹ ಪ್ರದೇಶಗಳಲ್ಲಿ ಮಾರ್ಗದರ್ಶಿ ಮೌಲ್ಯವನ್ನು ಕಡಿಮೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಅಕ್ಟೋಬರ್ 1 ರಂದು, ಮೊದಲ ಹಂತವಾಗಿ, ಬೆಂಗಳೂರಿನಲ್ಲಿ ಪರಿಷ್ಕೃತ ದರವನ್ನು ಜಾರಿಗೆ ತರಲಾಗುತ್ತದೆ. ಉಳಿದಂತೆ ಪ್ರತಿ ಜಿಲ್ಲೆಯಲ್ಲಿ ಉಪಸಮಿತಿ ರಚಿಸಿ ಹಂತಹಂತವಾಗಿ ಹೊಸ ಮಾರ್ಗದರ್ಶಿ ಮೌಲ್ಯವನ್ನು ಜಾರಿಗೊಳಿಸಲಾಗುತ್ತದೆ ಎಂದು ಕೃಷ್ಣ ಬೈರೇಗೌಡರು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+