ಅದ್ದೂರಿಯಾಗಿ ನಡೆದ ಬೆಂಗಳೂರು ಕರಗ- ಸಾವಿರಾರು ಭಕ್ತರಿಂದ ದರ್ಶನ- ಸಿಎಂ, ಡಿಸಿಎಂ ಭಾಗಿ
ಬೆಂಗಳೂರು ಏಪ್ರಿಲ್ 13: ಮೈಸೂರು ದಸರಾ ಎಷ್ಟೊಂದು ಸುಂದರವೋ ಬೆಂಗಳೂರಿನ ಐತಿಹಾಸಿಕ ಕರಗ ಕೂಡ ಅಷ್ಟೇ ಸುಂದರ. ಕಳೆದ ದಿನ ಐತಿಹಾಸಿಕ ಕರಗಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಸಾವಿರಾರು ಭಕ್ತರು ದೇವರ ದರ್ಶನ ಪಡೆದಿದ್ದಾರೆ. ಅಲ್ಲದೆ ಕರಗದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಭಾಗವಹಿಸಿ ಕರಗಕ್ಕೆ ಪುಷ್ಪಾರ್ಚನೆ ಮಾಡಿದರು.
ಕಳೆದ ದಿನ ಇತಿಹಾಸ ಪ್ರಸಿದ್ಧ ಕರಗದ ಸಡಗರ ಸಂಭ್ರಮ ಬೆಂಗಳೂರಿನಲ್ಲಿ ಮಗಿಲು ಮುಟ್ಟಿತ್ತು. ಶನಿವಾರ (ಏಪ್ರಿಲ್ 12) ತಡರಾತ್ರಿ 1:30ರಿಂದ ಭಾನುವಾರ (ಏಪ್ರಿಲ್ 13) ನಸುಕಿನವರೆಗೆ ನಗರದ ಮುಖ್ಯ ರಸ್ತೆಗಳಲ್ಲಿ ಕರಗ ಜರುಗಿತು. ಮಲ್ಲಿಗೆ ಹೂವಿನ ಸಮರ್ಣೆಯೊಂದಿಗೆ ಸಾವಿರಾರು ವೀರಕುಮಾರರು ಹಾಗೂ ಭಕ್ತರ ಗೋವಿಂದ ನಾಮಸ್ಮರಣೆಯಲ್ಲಿ ಕರಗ ನಡೆಯಿತು.

ಚೈತ್ರಮಾಸದ ಚೈತ್ರ ಪೌರ್ಣಿಮೆಯ ಚಂದ್ರನ ಬೆಳಕಿನಲ್ಲಿ ಅರ್ಚಕ ವಿ.ಜ್ಞಾನೇಂದ್ರ ಅವರು 15ನೇ ಬಾರಿಗೆ ಕರಗವನ್ನು ಹೊತ್ತಿದ್ದರು. ಕರಗದ ಅಕ್ಕ-ಪಕ್ಕದಲ್ಲಿ ವೀರಕುಮಾರರು ಖತ್ತಿ ಹಿಡಿದು ಸಾಗಿದರೆ ದಾರಿ ಉದ್ದಕ್ಕೂ ಭಕ್ತರು ಗೋವಿಂದ, ಗೋವಿಂದ ಎಂದು ಭಗವಂತನ ನಾಮಸ್ಮರಣೆ ಮಾಡಿದರು. ಜೊತೆಗೆ ಸಾವಿರಾರರು ಭಕ್ತರು ಭಗವಂತನನ್ನು ಸ್ಮರಿಸುತ್ತಾ ಕರಗ ಸಾಗುವ ದಾರಿಯುದ್ದಕ್ಕೂ ಮಲ್ಲಿಗೆ ಹೂವನ್ನು ಚೆಲ್ಲಿ ಭಕ್ತಿಭಾವ ಮರೆದರು.
ಇನ್ನೂ ಮನೆ ಹಾಗೂ ಅಂಗಡಿ, ಕಟ್ಟಡಗಳ ಮೇಲೆ ನಿಂತಿದ್ದ ನಾಗರೀಕರು ಅಲ್ಲಿಂದಲೇ ಕರಗದ ಮೇಲೆ ಹೂವನ್ನು ಚೆಲ್ಲಿ ಭಕ್ತಿಭಾವ ತೋರಿದರು. ತಿಗಳರಪೇಟೆಯ ಧರ್ಮರಾಯಸ್ವಾಮಿ ದೇಗುಲದಿಂದ ಆರಂಭವಾದ ಕರಗ, ದೇವಸ್ಥಾನದ ಹೊರಭಾಗದಲ್ಲಿರುವ ಗಣಪತಿ ಮುತ್ಯಾಲಮ್ಮ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಸಾಗಿತು.
ಅಲ್ಲಿಂದ ನಾಗರ್ತಪೇಟೆ, ಸಿದ್ದಣ್ಣಗಲ್ಲಿ, ಕಬ್ಬನ್‌ಪೇಟೆ, ಗಾಣಿಗರ ಪೇಟೆ, ದೊಡ್ಡಪೇಟೆಯಿಂದ ಕೆ.ಆರ್ ಮಾರುಕಟ್ಟೆ ತಲುಪಿ, ಮುಸ್ತಾನ್ ಸಾಬ್ ದರ್ಗಾಕ್ಕೆ ಭೇಟಿ ನೀಡಿ ಪೂಜೆ ಸ್ವೀಕರಿಸಿತು. ನಂತರ ಅಣ್ಣಮ್ಮನ ದೇವಾಲಯ, ಕಿಲಾರಿ ರಸ್ತೆ, ಯಲಹಂಕ ಗೇಟ್, ಅವೆನ್ಯೂ ರಸ್ತೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರ ಪೇಟೆಗಳಲ್ಲಿ ಸಾಗಿತು.
ಯಾವುದೇ ಅಹಿತಕರ ಘಟನೆ ನಡೆಯದೇ ಇರಲು ಕರಗ ಸಾಗುವ ದಾರಿಯುದ್ದಕ್ಕೂ ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿತ್ತು. ಕೇಂದ್ರ ವಿಭಾಗ ಡಿಸಿಪಿ ಶೇಖರ್ ನೇತೃತ್ವದಲ್ಲಿ ಏಳು ಜನ ಎಸಿಪಿ, ಇಪ್ಪತ್ತು ಜನ ಇನ್‌ಸ್ಪೆಕ್ಟರ್, 39 ಜನ ಪಿಎಸ್‌ಐ, 552 ಪೊಲೀಸ್ ಸಿಬ್ಬಂದಿ ಭದ್ರತೆಯನ್ನು ನಿಯೋಜಿಸಲಾಗಿತ್ತು.
ತಿಗಳಪೇಟೆ ಸೇರಿದಂತೆ ಕರಗ ಸಾಗುವ ಮಾರ್ಗದಲ್ಲಿ ವಿಶೇಷ ವಿದ್ಯುತ್ ದೀಪಾಲಂಕಾರ, ಬಗೆ ಬಗೆಯ ಬಣ್ಣದ ರಂಗೋಲಿಯನ್ನು ಹಾಕಿ ಆಕರ್ಷಕಗೊಳಿಸಲಾಗಿತ್ತು. ಇನ್ನೂ ಕರಗ ತಲುಪುವ ದೇವಸ್ಥಾನಗಳಲ್ಲಿ ದೀಪಾಲಂಕಾರಗಳಿಂದ ಆಕರ್ಷಕವಾಗಿ ಸಿಂಗರಿಸಲಾಗಿತ್ತು. ಇದೇ ವೇಳೆ ಬೃಹತ್ ಗಾತ್ರದ ಕರ್ಪೂರಗಳ ಆರತಿ ಮಾಡಿ ಭಕ್ತರು ಹರಕೆ ತೀರಿಸಿದರು.
ಅಲ್ಲದೆ ಮುಖ್ಯರಸ್ತೆಗಳ ಇಕ್ಕೆಲಗಳಲ್ಲಿ ಆಟಿಕೆ ಫ್ಯಾನ್ಸಿ ವಸ್ತುಗಳ ಮಾರಾಟ ಜೋರಾಗಿತ್ತು. ಇದೇ ವೇಳೆ ಕರಗದಲ್ಲಿ ಭಾಗವಹಿಸಿದ ಭಕ್ತರಿಗಾಗಿ ಪಲಾವ್, ಬಿಸಿಬೇಳೆಬಾತ್ ಸೇರಿದಂತೆ ವಿವಿಧ ರೀತಿಯ ಭಕ್ಷ್ಯಗಳನ್ನು ವಿತರಿಸಲಾಯಿತು. ಅಲ್ಲದೆ ಪಾನಕ ಮಜ್ಜಿಗೆಯನ್ನೂ ಕರಗ ನೋಡಲು ಬರುವ ಭಕ್ತರಿಗೆ ನೀಡಲಾಯಿತು.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications