Bengaluru: ನಾವು ಬೆಂಗಳೂರು ಬಿಡುತ್ತಿದ್ದೇವೆ ಇಲ್ಲಿನ ಪ್ರೀತಿ & ಸ್ನೇಹದೊಂದಿಗೆ !
ಇಷ್ಟು ವರ್ಷಗಳ ಕಾಲ ವಲಸಿಗರ ಸ್ವರ್ಗವಾಗಿದ್ದ ಬೆಂಗಳೂರು ಇತ್ತೀಚಿನ ದಿನಗಳಲ್ಲಿ ಕೆಲವರಿಗೆ ಕಹಿ ಎನಿಸಲು ಪ್ರಾರಂಭಿಸಿದೆ. ಬೆಂಗಳೂರು ಸ್ವರ್ಗ ಎಂದ ಜನ ಇಲ್ಲಿಗೆ ವಲಸೆ ಬರಲು ಪ್ರಾರಂಭಿಸಿದ್ದೂ ಇದಕ್ಕೆ ಕಾರಣ. ಈ ರೀತಿ ವಲಸೆ ಬಂದವರೇ ಇದೀಗ ಬೆಂಗಳೂರಿನ ಬಗ್ಗೆ ಟ್ರೋಲ್ ಮಾಡುತ್ತಿದ್ದಾರೆ. ಇದರೊಂದಿಗೆ ಬೆಂಗಳೂರಿನ ಬಗ್ಗೆ ಮತ್ತೊಂದು ದಂಪತಿ ಮಾಡಿರುವ ಇನ್‌ಸ್ಟಾಗ್ರಾಮ್ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ. Bengaluru is slowly killing us .. ಬೆಂಗಳೂರು ನಮ್ಮನ್ನು ನಿಧಾನವಾಗಿ ಕೊಲ್ಲುತ್ತಿದೆ ಎನ್ನುವ ಪೋಸ್ಟ್ ವೈರಲ್ ಆಗುತ್ತಿದೆ. ಆದರೆ ಇವರು ಬೆಂಗಳೂರನ್ನು ದ್ವೇಷಿಸಿ ಬೆಂಗಳೂರು ಬಿಡುತ್ತಿಲ್ಲ. ಈ ವಿಡಿಯೋಗೆ ಬೆಂಗಳೂರಿಗರು ಹೇಳಿದ್ದೇನು. ದಂಪತಿ ಈ ರೀತಿ ಪೋಸ್ಟ್ ಮಾಡುವುದಕ್ಕೆ ಕಾರಣವೇನು ಎನ್ನುವುದನ್ನು ನೋಡೋಣ.
ಅಶ್ವಿನ್ ಮತ್ತು ಅಪರ್ಣ ಎನ್ನುವ ದಂಪತಿ ಇನ್‌ಸ್ಟಾಗ್ರಾಮ್ ಪೋಸ್ಟ್ ಸೋಷಿಯಲ್ ಮೀಡಿಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಬೆಂಗಳೂರು ನಮ್ಮನ್ನು ನಿಧಾನವಾಗಿ ಕೊಲ್ಲುತ್ತಿದೆ. ಹೀಗಾಗಿ, ಬೆಂಗಳೂರು ಬಿಟ್ಟು ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ. ನಾವು ದ್ವೇಷದಿಂದ ಈ ಪೋಸ್ಟ್ ಮಾಡುತ್ತಿಲ್ಲ ಇಲ್ಲ ಬೆಂಗಳೂರಿನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುವುದು ನಮ್ಮ ಉದ್ದೇಶವಲ್ಲ ಅಂತಲೇ ಅವರು ಹೇಳಿದ್ದಾರೆ. ಬೆಂಗಳೂರಿನ ಗಂಭೀರ ಸಮಸ್ಯೆಯಿಂದ ನಾವು ಬೆಂಗಳೂರು ಬಿಡಲು ನಿರ್ಧರಿಸಿದ್ದೇವೆ ಎಂದೂ ಅವರು ಹೇಳಿದ್ದಾರೆ.

ಅಶ್ವಿನ್ ಮತ್ತು ಅಪರ್ಣ ಎನ್ನುವ ದಂಪತಿ ಮಾಡಿರುವ ಇನ್‌ಸ್ಟಾಗ್ರಾಮ್ ವಿಡಿಯೋ ಪೋಸ್ಟ್ ಕಳೆದ ಮೂರು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅವರು ಮಾಡಿರುವ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ನಮ್ಮನ್ನು ಕೊಲ್ಲುತ್ತಿದೆ. ನಾವು ಇಲ್ಲಿ ಇರಬೇಕು ಎನ್ನುವ ಆಸೆ ಇದ್ದರೂ ನಮಗೆ ಇರಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
Bengaluru is slowly killing us ದಂಪತಿಗಳ ಪೋಸ್ಟ್ ಈ ರೀತಿ ಇದೆ...
ನಮಗೆ ಇದು ಬೇಗ ತಿಳಿದಿದ್ದರೆ⚠️ ನಾವು ಬೆಂಗಳೂರಿನಿಂದ ಬೇಗ ಹೊರಡುತ್ತಿರಬಹುದು. ನಮಗೆ ಇಲ್ಲಿನ ವಾತಾವರಣ, ಜನ ಹಾಗೂ ಆಹಾರ ತುಂಬಾ ಇಷ್ಟವಾಯಿತು.
ಆದರೆ ನಾವು ಪ್ರತಿದಿನ ಏನು ಉಸಿರಾಡುತ್ತಿದ್ದೇವೆಂದು ನಮಗೆ ತಿಳಿದಿರಲಿಲ್ಲ. ಗಾಳಿಯ ಗುಣಮಟ್ಟದ ಸೂಚ್ಯಂಕ 297ಕ್ಕೆ ತಲುಪಿತು ಮತ್ತು ಅತ್ಯಂತ ಕೆಟ್ಟ ರೀತಿಯ ಗಾಳಿ ಇದು. ಆದರೆ, ಯಾರೂ ಅದರ ಬಗ್ಗೆ ಮಾತನಾಡುತ್ತಿಲ್ಲ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಬೆಂಗಳೂರಿನ ಕೆಟ್ಟ ಧೂಳು ಹಾಗೂ ಆ ಧೂಳಿನಿಂದ ಎದುರಾದ ಆರೋಗ್ಯ ಸಮಸ್ಯೆಯ ಬಗ್ಗೆ ವಿಡಿಯೋದಲ್ಲಿ ಹಂಚಿಕೊಳ್ಳಲಾಗಿದೆ.
ಮುಂದುವರಿದು ದಂಪತಿ ನಮ್ಮ ಬೆಂಗಳೂರು ಅದ್ಭುತವಾಗಿದೆ. ವ್ಯವಹಾರವನ್ನು ಪ್ರಾರಂಭಿಸಲು ಸಹ. ಇಲ್ಲಿ ನೆಲೆಸುವುದಕ್ಕೆ ಉತ್ತಮ ಸ್ಥಳವಾಗಿದೆ ಆದರೆ ನಾವು ಸಾಧ್ಯವಾದಷ್ಟು ಬೇಗ ಬೆಂಗಳೂರು ಬಿಡುವ ಆಯ್ಕೆಯನ್ನು ಮಾಡುತ್ತಿದ್ದೇವೆ. ನಗರವು ನಮ್ಮನ್ನು ಮುಳುಗಿಸುವ ಮೊದಲು, ನಾವು ಬೆಂಗಳೂರಿನಿಂದ ಹೊರಡುತ್ತಿದ್ದೇವೆ.
2014 ರಿಂದ 2024 ರವರೆಗೆ, ಸಹಪಾಠಿಗಳಿಂದ ಉದ್ಯಮಿಗಳವರೆಗೆ!! 💯 ಮತ್ತು ವ್ಯವಹಾರವನ್ನು ಪ್ರಾರಂಭಿಸಲು ನಾವು ಇಲ್ಲಿ ಸಾಕಷ್ಟು ಕಲಿತೆವು. ಜೀವನದ ಪ್ರಕ್ರಿಯೆಯನ್ನು ಆನಂದಿಸೋಣ ಮತ್ತು ನಾವೆಲ್ಲರೂ ZINDAGIFIED ಆಗೋಣ !😍 ಎಂದು ಪೋಸ್ಟ್ ಮಾಡಲಾಗಿದೆ. ZINDAGIFIED ಎನ್ನುವುದು ಅವರ ಬ್ರ್ಯಾಂಡ್‌ನ ಹೆಸರಾಗಿದೆ.
ಬೆಂಗಳೂರಿಗರು ಹೇಳಿದ್ದೇನು: ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಪೋಸ್ಟ್ ಈಗಾಗಲೇ ಒಂದು ಮಿಲಿಯನ್‌ಗೂ ಹೆಚ್ಚು ರೀಚ್ ಕಂಡಿದೆ. ಆದರೆ, ಈ ಪೋಸ್ಟ್‌ಗೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಷ್ಟು ದಿನ ಬೆಂಗಳೂರಿನಲ್ಲಿ ನೆಲೆ ಹೋಗುವಾಗ ಈ ಪೋಸ್ಟ್ ಯಾಕೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.
-
Bengaluru Rent Crisis: ಬೆಂಗಳೂರಲ್ಲಿ ಬಾಡಿಗೆ ಮನೆ ಡಿಮ್ಯಾಂಡ್ ಬಗ್ಗೆ ಯುವತಿ ವಿಡಿಯೋ ವೈರಲ್ -
ಬೆಂಗಳೂರು ಹೆಬ್ಬಾಳದ ಮೆಟ್ರೋ ಏಕೀಕೃತ ಸಾರಿಗೆ: 55 ಎಕರೆ ಭೂ ವಿವಾದ - ಸಿಬಿಐ ತನಿಖೆಗೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ -
Dr BR Ambedkar: ಚುನಾವಣೆಯಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಸೋಲಿಸಿದ್ದು ಕಾಂಗ್ರೆಸ್ ಪಕ್ಷವಲ್ಲ: ಸಿದ್ದರಾಮಯ್ಯ -
Pizza 4P's ಬೆಂಗಳೂರಲ್ಲಿ ಶಾಂತಿಗಾಗಿ ಪಿಜ್ಜಾ ಎಂದಾಯ್ತು: ಜಪಾನ್ ಪಿಜ್ಜಾ ಸಂಸ್ಥೆ ಹೇಳಿದ್ದೇನು - ಕನ್ನಡಿಗರು ಏನಂದ್ರು -
Bengaluru Migration: ಬೆಂಗಳೂರಿಗೆ ನಾರ್ಥಿಗಳ ವಲಸೆಗೆ ಇದೇ ಕಾರಣ, ವೈರಲ್ ಪೋಸ್ಟ್ - ಚರ್ಚೆ -
Pawan Kalyan: ಪವನ್ ಕಲ್ಯಾಣ್ ವಿರುದ್ಧ ಕಾಮಿಡಿ ವಿಡಿಯೋ: ಸ್ಟ್ಯಾಂಡ್ಅಪ್ ಕಾಮಿಡಿಯನ್ ಅನುದೀಪ್ ಕಟಿಕಲಾ ಬಂಧನ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್












Click it and Unblock the Notifications