ಪಿಪಿಇ ಕಿಟ್ ಉತ್ಪಾದನೆ; ದೇಶಕ್ಕೆ ಮಾದರಿಯಾದ ಬೆಂಗಳೂರು

ಬೆಂಗಳೂರು, ಏಪ್ರಿಲ್ 27 : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾದಂತೆ ಪಿಪಿಇ ಕಿಟ್‌ಗಳಿಗೆ ಬೇಡಿಕೆ ಹೆಚ್ಚಿದೆ. ಇಂದಿಗೂ ದೇಶದಲ್ಲಿ ಅಗತ್ಯ ಇರುವುಷ್ಟು ಕಿಟ್‌ಗಳು ಪೂರೈಕೆ ಆಗುತ್ತಿಲ್ಲ ಎಂಬುದು ಗುಟ್ಟಾಗಿ ಉಳಿದಿಲ್ಲ.

ಕೊರೊನಾ ವಾರಿಯರ್ಸ್‌ಗೆ ರಕ್ಷಣೆ ನೀಡುವ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ) ಕಿಟ್ ಉತ್ಪಾದನೆಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ದೇಶದಲ್ಲಿ ಒಂದು ದಿನಕ್ಕೆ 1 ಲಕ್ಷ ಕಿಟ್ ತಯಾರಾದರೆ ಅದರಲ್ಲಿ ಶೇ 50ರಷ್ಟು ಬೆಂಗಳೂರಿನಲ್ಲಿ ಸಿದ್ಧವಾಗುತ್ತದೆ.

ಕೇಂದ್ರ ಜವಳಿ ಸಚಿವಾಲಯ ಈ ಕುರಿತು ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ ಶೇ 50ರಷ್ಟು ಕಿಟ್ ತಯಾರಾಗುತ್ತಿದೆ ಎಂದು ತಿಳಿಸಿದೆ. ಪಿಪಿಇ ಕಿಟ್‌ಗಳಿಗೆ ಅಧಿಕವಾದ ಬೇಡಿಕೆ ಇದ್ದು, ಆದ್ಯತೆಯ ಮೇಲೆ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದೆ.

ಕೊರೊನಾ ಸೋಂಕಿತರನ್ನು ತಪಾಸಣೆ ಮಾಡುವವರು, ರೋಗಿಗಳಿಗೆ ಚಿಕಿತ್ಸೆ ನೀಡುವವರು, ಆಸ್ಪತ್ರೆಯ ಸಿಬ್ಭಂದಿ ಪಿಪಿಇ ಕಿಟ್ ಧರಿಸುತ್ತಾರೆ. ಸಿಬ್ಬಂದಿಗಳಿಗೆ ರೋಗ ಹರಡದಂತೆ ಇದು ರಕ್ಷಣೆ ನೀಡುತ್ತದೆ. ಇಂತಹ ಕಿಟ್‌ಗೆ ಭಾರೀ ಬೇಡಿಕೆ ಇದೆ.

ಎಲ್ಲೆಲ್ಲಿ ಉತ್ಪಾದನೆ ಆಗುತ್ತಿದೆ?

ಎಲ್ಲೆಲ್ಲಿ ಉತ್ಪಾದನೆ ಆಗುತ್ತಿದೆ?

ಬೆಂಗಳೂರು ಹೊರತುಪಡಿಸಿ ಚೆನ್ನೈ, ಕೊಯಂಬತ್ತೂರು, ಅಹಮದಾಬಾದ್, ವಡೋದರಾ, ಫಗ್ವಾರಾ, ಲೂಧಿಯಾನ, ಕುಸುಮ್ ನಗರ್, ದುಂಗಾಪುರ್, ಕೋಲ್ಕತ್ತಾ, ದೆಹಲಿ ಸೇರಿದಂತೆ ದೇಶದ ವಿವಿಧ ಪ್ರದೇಶಗಳಲ್ಲಿ ಕಿಟ್ ತಯಾರು ಮಾಡಲಾಗುತ್ತದೆ.

ವಿವಿಧ ರಾಜ್ಯಗಳಿಗೆ ಪೂರೈಕೆ

ವಿವಿಧ ರಾಜ್ಯಗಳಿಗೆ ಪೂರೈಕೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿ ಕಾರ್ಯ ನಿರ್ವಹಣೆ ಮಾಡುವ ಆಸ್ಪತ್ರೆ ಮತ್ತು ಆರೋಗ್ಯ ಸಂಸ್ಥೆಗಳಿಗೆ ಎಚ್‌ಎಲ್‌ಎಲ್ ಲೈಫ್ ಕೇರ್ ಲಿಮಿಟೆಡ್ ಎಂಬ ಸಂಸ್ಥೆ ಪಿಪಿಇ ಕಿಟ್‌ಗಳನ್ನು ಪೂರೈಕೆ ಮಾಡುತ್ತದೆ. ಇದೊಂದೇ ಸಂಸ್ಥೆ ದೇಶದ ಎಲ್ಲಾ ರಾಜ್ಯಕ್ಕೂ ಕಿಟ್ ಪೂರೈಕೆ ಮಾಡುತ್ತಿದೆ.

1 ಮಿಲಿಯನ್ ಕಿಟ್ ತಯಾರಿ

1 ಮಿಲಿಯನ್ ಕಿಟ್ ತಯಾರಿ

ಕೇಂದ್ರ ಜವಳಿ ಸಚಿವಾಲಯದ ಮಾಹಿತಿಯಂತೆ ಇದುವರೆಗೂ ಸುಮಾರು 1 ಮಿಲಿಯನ್ ಕಿಟ್‌ಗಳನ್ನು ತಯಾರು ಮಾಡಲಾಗಿದೆ. ತಯಾರಾಗುವ ಕಿಟ್‌ಗಳನ್ನು ಪರಿಶೀಲಿಸಿ ಅವುಗಳು ಬಳಕೆಗೆ ಯೋಗ್ಯ ಎಂದು ಹೇಳಲು ದೇಶದಲ್ಲಿ 4 ಲ್ಯಾಬ್‌ಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ.

ಉತ್ಪಾದನಾ ಸಾಮರ್ಥ್ಯ ಹೆಚ್ಚಳ

ಉತ್ಪಾದನಾ ಸಾಮರ್ಥ್ಯ ಹೆಚ್ಚಳ

ದೇಶದ ಹಲವು ಕಡೆ ಕಿಟ್ ತಯಾರು ಮಾಡಿದರೂ ಬೇಡಿಕೆ ಹೆಚ್ಚುತ್ತಲೇ ಇದೆ. ಆದ್ದರಿಂದ, ಪಿಪಿಇ ಕಿಟ್ ತಯಾರಿಕಾ ಸಾಮರ್ಥ್ಯ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಬಳಿಕ ಇವುಗಳನ್ನು ವಿವಿಧ ರಾಜ್ಯಗಳಿಗೆ ಪೂರೈಕೆ ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+