Get Updates
Get notified of breaking news, exclusive insights, and must-see stories!

Bengaluru Voters List: ನಗರದಲ್ಲಿದ್ದಾರೆ 01 ಕೋಟಿಗೂ ಹೆಚ್ಚು ಮತದಾರರು, ಹೊಸ ಮತದಾರರೆಷ್ಟು?

ಬೆಂಗಳೂರು, ಅಕ್ಟೋಬರ್ 29: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಿಸಿ ಮಂಗಳವಾರ ಕರಡು ಮತದಾರರ ಪಟ್ಟಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಿಡುಗಡೆಗೊಳಿಸಿತು. ಅದರ ಪ್ರಕಾರ ಬೆಂಗಳೂರು ನಗರ ಜಿಲ್ಲೆಯಲ್ಲಿ ಬರೋಬ್ಬರಿ 01 ಕೋಟಿಗೂ ಹೆಚ್ಚು ಮತದಾರರು ಇದ್ದಾರೆ. ಇದೆರಲ್ಲಿ ಪುರುಷ, ಮಹಿಳೆ, ಹೊಸ ಮತದಾರರು, ಪಟ್ಟಿಯಿಂದ ಹೊರ ಹೋದ ಮತದಾರರು ಹಾಗೂ ಮಹತ್ವದ ಅಪ್ಡೇಟ್ ಮಾಹಿತಿ ಇಲ್ಲಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2025ರ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಿದರು. ಇಲ್ಲಿ ಒಟ್ಟು 1,02,41,226 ಮತದಾರರಿದ್ದಾರೆ.

Bengaluru Have 1 Crore More Voters How much Male-Female and New Voters here

ಈ ಒಟ್ಟು ಮತದಾರರಲ್ಲಿ 52,69,188 ಪುರುಷ ಮತದಾರರು ಹಾಗೂ 49,70,207 ಮಹಿಳಾ ಮತದಾರರು ಇದ್ದಾರೆ. ತೃತೀಯ ಲಿಂಗಿಗಳ ಸಂಖ್ಯೆ 1,831 ರಷ್ಟಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯ ಮತದಾರರ ಪಟ್ಟಿಗೆ ಹೊಸದಾಗಿ 1.86 ಲಕ್ಷ ನವ ಮತದಾರರ ಸೇರ್ಪಡೆ ಆಗಿದ್ದಾರೆ. ಅಲ್ಲದೇ ಇತರ ಕಾರಣಗಳಿಂದ 85000 ಕ್ಕೂ ಅಧಿಕಾರ ಮತದಾರರನ್ನು ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ.

ಈ ಕರಡು ಮತದಾರರ ಪಟ್ಟಿಯ ಪ್ರತಿಯನ್ನು ನಗರದ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳ ಮತದಾರರ ನೊಂದಣಾಧಿಕಾರಿಗಳ ಕಛೇರಿ, ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಛೇರಿ ಹಾಗೂ ವಾರ್ಡ್ ಕಛೇರಿಗಳಲ್ಲಿ ಪ್ರಕಟಿಸಲಾಗಿದೆ ಎಂದರು.

Bengaluru Have 1 Crore More Voters How much Male-Female and New Voters here

ಅಷ್ಟೇ ಅಲ್ಲದೇ ಕರಡು ಮತದಾರರ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿ, ಕರ್ನಾಟಕ ರವರ ವೆಬ್‌ಸೈಟ್ www.ceokarnataka.kar.nic.in ಮತ್ತು ಬಿಬಿಎಂಪಿ ವೆಬ್‌ಸೈಟ್ www.bbmp.gov.in ನಲ್ಲಿ ಪರಿಶೀಲಿಸಿಕೊಂಡು ಆಕ್ಷೇಪಣೆ ಸಲ್ಲಿಸಬಹುದು.

ಆಕ್ಷೇಪಣೆಗಳು ಇದ್ದಲ್ಲಿ ಮತದಾರರ ನೊಂದಣಾಧಿಕಾರಿಗಳ ಕಛೇರಿ, ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಛೇರಿ, ವಾರ್ಡ್ ಕಛೇರಿ ಹಾಗೂ ಬಿ.ಎಲ್.ಓ ರವರುಗಳಿಗೆ ನಮೂನೆ-6, 7 ಮತ್ತು 8 ರಲ್ಲಿ ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಭಾರತ ಚುನಾವಣಾ ಆಯೋಗವು ದಿನಾಂಕ: 29.10.2024 ರಿಂದ 28.11.2024 ರವರಗೆ ಅವಕಾಶ ನೀಡಲಾಗಿದೆ ಎಂದು ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಸೆಲ್ವಮಣಿ ರವರು ತಿಳಿಸಿದರು.

ನಗರದಲ್ಲಿ 86,044 ಯುವ ಮತದಾರರ ಸಂಖ್ಯೆ ಎಷ್ಟು?

ಬೆಂಗಳೂರಿನಲ್ಲಿ 1.02 ಕೋಟಿ ಮತದಾರರ ಪೈಕಿ 86.044 ಮತದಾರರು ಯುವ ಮತದಾರರಿದ್ದಾರೆ. 1.19 ಲಕ್ಷ 85 ರಿಂದ 99 ವರ್ಷದ ಹಿರಿಯ ಮತದಾರರಿದ್ದು, 100ಕ್ಕೂ ಹೆಚ್ಚು ವಯಸ್ಸಿನ 4,852 ಹಿರಿಯ ಮತದಾರರಿದ್ದಾರೆ. 2272 ಅನಿವಾಸಿ ಭಾರತೀಯ ಮತದಾರರು, 1708 ಸೇವಾ ಮತದಾರರು ಹಾಗೂ 32,213 ವಿಶೇಷ ಚೇತನ ಮತದಾರರಿದ್ದಾರೆ.

ಒಟ್ಟು 8972 ಮತಗಟ್ಟೆಗಳ ವಿವರ

ನಗರದಲ್ಲಿ ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಹಾಗೂ ಬೆಂಗಳೂರು ನಗರಕ್ಕೆ 4 ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಬರಲಿದ್ದು, ಒಟ್ಟು 8972 ಮತಗಟ್ಟೆಗಳು ಬರಲಿವೆ.

ಸಾರ್ವಜನಿಕರು/ಮತದಾರರು ತಮ್ಮ ಮೊಬೈಲ್‌ನಲ್ಲಿ ವಿ.ಹೆಚ್.ಎ(Voter Helpline App) ಅಥವಾ ವೆಬ್ ಪೋರ್ಟಲ್ ಆದ Voters.eci.gov.in ನಲ್ಲಿ ಖುದ್ದಾಗಿ ಮತದಾರರ ಮಾಹಿತಿಯನ್ನು ಖಾತರಿಪಡಿಸಿಕೊಳ್ಳಬಹುದು.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರಿಗಾಗಿ ವಿಶೇಷ ನೊಂದಣಿ ಅಭಿಯಾನವು 09.11.2024(ಶನಿವಾರ), 10.11.2024 (ಭಾನುವಾರ), 23.11.2024 (ಶನಿವಾರ), 24.11.2024 (ಭಾನುವಾರ) ರಂದು ಬಿಬಿಎಂಪಿ ಕಂದಾಯ ಅಧಿಕಾರಿಗಳು/ಸಹ ಕಂದಾಯ ಅಧಿಕಾರಿಗಳು/ವಾರ್ಡ್ ಕಛೇರಿಗಳು/ಮತಗಟ್ಟೆಗಳಲ್ಲಿ ನಡೆಯಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+