• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು ದಕ್ಷಿಣದ ಕಸ ಸಮಸ್ಯೆಗೆ ತಾತ್ಕಾಲಿಕ ಪರಿಹಾರ

|

ಬೆಂಗಳೂರು, ಸೆಪ್ಟೆಂಬರ್.16: ಬೆಂಗಳೂರು ದಕ್ಷಿಣ ಅನುಭವಿಸುತ್ತಿದ್ದ ಕಸದ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ಇನ್ನು ಒಂದು ಬಿಂಗೀಪುರದಲ್ಲಿ ತಿಂಗಳೂ ಕಸ ಸುರಿಯಲು ಗ್ರಾಮಸ್ಥರು ಒಪ್ಪಿಗೆ ನೀಡಿದ್ದಾರೆ.

ಮಂಗಳವಾರದಿಂದಲೇ ಕಸದ ಲಾರಿಗಳು ಸಂಚರಿಸಲು ಆರಂಭಿಸಿದ್ದು ತೆರವು ಕೆಲಸ ಸಾಗುತ್ತಿದೆ. ಕಳೆದ ನಾಲ್ಕು ದಿನಗಳಿಂದ ಕಸ ವಿಲೇವಾರಿ ಸ್ಥಗಿತವಾಗಿತ್ತು. ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಮೇಯರ್ ಮಂಜುನಾಥರೆಡ್ಡಿ, ಸಂಸದ ಡಿ.ಕೆ. ಸುರೇಶ್, ಆಯುಕ್ತ ಕುಮಾರ್ ನಾಯಕ್ ಮಂಗಳವಾರ ಗ್ರಾಮಸ್ಥರೊಂದಿಗೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ.[ಕಸದ ವಾಸನೆಯಲ್ಲಿ ದಕ್ಷಿಣ ಬೆಂಗಳೂರಿಗರಿಗೆ ಗಣೇಶ ಹಬ್ಬ!]

Bengaluru Garbage: BBMP Can Use Bingipura Land For 1 Month

ಬೆಂಗಳೂರಿನ ಹೊರವಲಯಗಳಲ್ಲಿ 7 ಹೊಸ ಘಟಕಗಳು ಕಾರ್ಯಾರಂಭ ಮಾಡಲಿವೆ. ಇದಕ್ಕೆ ಒಂದು ತಿಂಗಳ ಕಾಲಾವಕಾಶ ಬೇಕಿದೆ. ಅಷ್ಟರವರೆಗೆ ನಗರದ ಕಸವನ್ನು ಬಿಂಗೀಪುರದಲ್ಲಿ ಹಾಕಲಾಗುವುದು. ನಂತರ ಕಸ ವಿಲೇವಾರಿ ಸ್ಥಗಿತ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕೆ.ಆರ್.ಮಾರುಕಟ್ಟೆ ಹಾಗೂ ಜಯನಗರದಲ್ಲಿ ಕಸ ಸಂಸ್ಕರಣ ಘಟಕಗಳು ನಡೆಯುತ್ತಿವೆ. ಬೇಗೂರು ಮುಖ್ಯರಸ್ತೆ ಹಾಗೂ ಪಟ್ಟಾಭಿರಾಮನಗರದಲ್ಲಿ ಘಟಕಗಳ ನಿರ್ಮಾಣ ನಡೆಯುತ್ತಿದ್ದು ಕೆಲವೇ ದಿನದಲ್ಲಿ ಕೆಲಸ ಆರಂಭಿಸಲಿವೆ.

ಮಹಾನಗರದಲ್ಲಿ 150 ಒಣ ತ್ಯಾಜ್ಯ ಸಂಗ್ರಹಣ ಕೇಂದ್ರ
ಕಸ ಸಮಸ್ಯೆಯನ್ನು ಮನಗಂಡಿರುವ ಬಿಬಿಎಂಪಿ ನಗರದೊಳಗೆ ಕಸ ಸಂಸ್ಕರಿಸಲು ವಾರ್ಡ್ ಮಟ್ಟದಲ್ಲಿ ಒಣ ತ್ಯಾಜ್ಯ ಸಂಗ್ರಹಣೆ ಮಾಡಲಾಗುತ್ತಿದೆ. ಜನರಿಗೂ ಒಣ ಕಸ, ಹಸಿ ಕಸ ಬೇರೆ ಬೇರೆ ಮಾಡಿ ಘಂಟೆ ಗಾಡಿಗೆ ನೀಡುವಂತೆ ತಿಳಿಸಿದೆ. ಕೇವಲ ಬಿಬಿಎಂಪಿ ಮಾತ್ರವಲ್ಲದೇ ನಾಗರಿಕರು ಸಕಲ ಸಹಕಾರ ನೀಡಿದರೆ ಕಸ ವಿಲೇವಾರಿ ಸಸೂತ್ರವಾಗಿ ನಡೆಯಲು ಸಾಧ್ಯವಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru south garbage problem got temporary solution. The villagers near Bingipura landfill agreed to allow 140 garbage trucks on a daily basis in for one more month. Bengaluru District In-charge Minister Ramalinga Reddy, Bengaluru Rural MP D K Suresh and Mayor B N Manjunath Reddy managed to talk to the villagers and get one month time.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more