ಬೆಂಗಳೂರಿನಲ್ಲಿ 4 ಜನರ ಕುಟುಂಬಕ್ಕೆ ತಿಂಗಳಿಗೆ ಬರೋಬ್ಬರಿ ₹80,000 ದಿನಸಿ ಖರ್ಚು: ಯಾವುದಕ್ಕೆ ಎಷ್ಟು? ಪೋಸ್ಟ್‌ ಭಾರಿ ವೈರಲ್

Bengaluru family expenses: ಪ್ರತಿದಿನ ಮನೆಯಲ್ಲೇ ಅಡುಗೆ ಮಾಡಿದರೂ ಆಹಾರಕ್ಕೆ ಇಷ್ಟೊಂದು ಖರ್ಚಾದರೆ ಸಾಮಾನ್ಯ ಜನರು ಜೀವನ ನಡೆಸುವುದು ಹೇಗೆ? ಬೆಂಗಳೂರು ನಿವಾಸಿಯೊಬ್ಬರು ಸೋಷಿಯಲ್ ಮೀಡಿಯಾ ಟ್ವಿಟರ್‌ನಲ್ಲಿ ಹಂಚಿಕೊಂಡ ಖರ್ಚು ವೆಚ್ಚದ ಪಟ್ಟಿ ಭಾರಿ ಚರ್ಚೆಗೆ ಕಾರಣವಾಗಿದೆ. ಇದು ಎಂತಹವರನ್ನೂ ಕೂಡ ಅಚ್ಚರಿಗೆ ಒಳಗಾಗಿಸುವ ವಿಚಾರವಾಗಿದೆ. ಇಲ್ಲಿದೆ ನೋಡಿ ಈ ಕುರಿತ ಸಂಪೂರ್ಣ ಮಾಹಿತಿ.

ಬೆಂಗಳೂರಿನ ನಿವಾಸಿಯೊಬ್ಬರು ತರಕಾರಿ, ದಿನಸಿ ಹಾಗೂ ಆಹಾರ ಪದಾರ್ಥಗಳಿಗಾಗಿ ಪ್ರತಿ ತಿಂಗಳು ಮಾಡುತ್ತಿರುವ ಭಾರಿ ವೆಚ್ಚದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಇದೀಗ ಸಾರ್ವಜನಿಕರು ಮತ್ತು ನೆಟ್ಟಿಗರಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಇದು ಸದ್ಯ ಭಾರಿ ವೈರಲ್‌ ಆಗುತ್ತಿದೆ.

Bengaluru Family Spends Rs 80 000 Monthly on Groceries Viral Post Sparks Debate Know details

ರಾಮ್‌ಶ್ರೀ ಗೌತಮ್ ಗೊಲ್ಲ ಟ್ವಿಟ್ ಪೋಸ್ಟ್‌ ಭಾರಿ ವೈರಲ್

ಬೆಂಗಳೂರು ಮೂಲದ ರಾಮ್‌ಶ್ರೀ ಗೌತಮ್ ಗೊಲ್ಲ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಇದರಲ್ಲಿ ಇಬ್ಬರು ಹಿರಿಯರು ಮತ್ತು ಇಬ್ಬರು ಮಕ್ಕಳಿರುವ ತಮ್ಮ ನಾಲ್ಕು ಜನರ ಕುಟುಂಬಕ್ಕೆ, ಪ್ರತಿದಿನ ಮನೆಯಲ್ಲೇ ಅಡುಗೆ ಮಾಡಿದರೂ ತಿಂಗಳಿಗೆ ಕನಿಷ್ಠ 60,000ದಿಂದ 80,000 ರೂಪಾಯಿಗಳವರೆಗೆ ದಿನಸಿ ಮತ್ತು ಆಹಾರಕ್ಕಾಗಿ ಖರ್ಚಾಗುತ್ತಿದೆ ಎಂದು ತಿಳಿಸಿದ್ದರು.

'ನಮ್ಮ ಮನೆಯಲ್ಲಿ ಎಲ್ಲ ಅಡುಗೆಯನ್ನೂ ಮನೆಯಲ್ಲೇ ಸಿದ್ಧಪಡಿಸುತ್ತೇವೆ ಮತ್ತು ವಾರಕ್ಕೆ ಎರಡು ಬಾರಿ ಮಾತ್ರ ಮಾಂಸಾಹಾರ ಸೇವನೆ ಮಾಡುತ್ತೇವೆ. ಆದರೂ ದಿನಸಿ ವೆಚ್ಚ 80,000 ರೂಪಾಯಿ ತಲುಪುತ್ತಿದೆ. ಪ್ರತಿಯೊಬ್ಬರೂ ಈ ದಿನಗಳಲ್ಲಿ ಜೀವನವನ್ನು ಹೇಗೆ ನಡೆಸುತ್ತಿದ್ದಾರೆ?,' ಎಂದು ಅವರು ಪ್ರಶ್ನಿಸಿದ್ದರು. ಪ್ರತಿ ತಿಂಗಳು ಇಷ್ಟೊಂದು ಹಣ ಎಲ್ಲಿ ಖರ್ಚಾಗುತ್ತದೆ ಎಂಬ ನೆಟ್ಟಿಗರ ಪ್ರಶ್ನೆಗೆ ಗೌತಮ್ ಖರ್ಚಿನ ಪಟ್ಟಿಯನ್ನು ನೀಡಿದ್ದಾರೆ.

ಗೌತಮ್ ನೀಡಿದ ಖರ್ಚಿನ ಪಟ್ಟಿ

* ಮೊಟ್ಟೆಗಳು: ದಿನಕ್ಕೆ ಸರಾಸರಿ 10 ಮೊಟ್ಟೆಗಳಂತೆ ತಿಂಗಳಿಗೆ ಸುಮಾರು 3,000 ರೂಪಾಯಿ

* ಹಾಲು: ತಿಂಗಳಿಗೆ 2,000 ದಿಂದ 3,000 ರೂಪಾಯಿ

* ಮಾಂಸ (ವಾರಕ್ಕೆ 2 ಬಾರಿ): ತಿಂಗಳಿಗೆ 6,000 ದಿಂದ 8,000 ರೂಪಾಯಿ

* ದೋಸೆ/ಇಡ್ಲಿ ಹಿಟ್ಟು: ತಿಂಗಳಿಗೆ 2,000 ದಿಂದ 3,000 ರೂಪಾಯಿ

* ತರಕಾರಿ ಹಾಗೂ ಹಣ್ಣುಗಳು: ಅಕ್ಕಿ ಕೆ.ಜಿ.ಗೆ 80 ರೂಪಾಯಿ ಹಾಗೂ ಹಣ್ಣುಗಳ ಬೆಲೆ ಕೆ.ಜಿ.ಗೆ 200 ರಿಂದ 400 ರೂಪಾಯಿ ದಾಟುತ್ತದೆ. ಇದರೊಂದಿಗೆ ಈರುಳ್ಳಿ, ಟೊಮೆಟೊ, ಬೆಂಡೆಕಾಯಿ, ಆಲೂಗಡ್ಡೆ, ಡ್ರೈ ಫ್ರೂಟ್ಸ್, ಅಡುಗೆ ಎಣ್ಣೆ ಹಾಗೂ ಟೀ ಪುಡಿ ಮುಂತಾದ ದಿನ ನಿತ್ಯದ ವಸ್ತುಗಳ ವೆಚ್ಚವೂ ಸೇರುತ್ತದೆ.

ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇತ್ತೀಚಿನ ದಿನಗಳಲ್ಲಿ ದಿನಸಿ ಮತ್ತು ಆಹಾರ ಪದಾರ್ಥಗಳ ಬೆಲೆ ವಿಪರೀತವಾಗಿ ಹೆಚ್ಚಾಗಿದೆ. ಉತ್ತಮ ಗುಣಮಟ್ಟದ ಮತ್ತು ಆರೋಗ್ಯಕರ ಆಹಾರ ಪದಾರ್ಥಗಳನ್ನು ಖರೀದಿಸಿದರೆ 4 ಜನರ ಕುಟುಂಬಕ್ಕೆ ಈ ಮಟ್ಟದ ವೆಚ್ಚವಾಗುವುದು ಸಹಜ ಎಂದು ಕೆಲವರು ಗೌತಮ್ ಅವರ ಮಾತನ್ನು ಒಪ್ಪಿಕೊಂಡಿದ್ದಾರೆ.

ಇನ್ನು ಕೆಲವರು ಈ ಖರ್ಚು ಅತ್ಯಂತ ಹೆಚ್ಚು ಎಂದು ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಉತ್ತಮ ಗುಣಮಟ್ಟದ ಪ್ರೀಮಿಯಂ ದಿನಸಿ ಮತ್ತು ಮಾಂಸಾಹಾರವನ್ನು ಖರೀದಿಸಿದರೂ ನಾಲ್ಕು ಜನರ ಕುಟುಂಬದ ತಿಂಗಳ ಬಜೆಟ್ 15,000 ದಿಂದ 30,000 ರೂಪಾಯಿಗಳಲ್ಲಿ ಮುಗಿಯುತ್ತದೆ. 80,000 ರೂಪಾಯಿ ಖರ್ಚು ಮಾಡುವುದು ಅವರವರ ವೈಯಕ್ತಿಕ ಜೀವನಶೈಲಿಯ ಆಯ್ಕೆಯಾಗಿದೆಯೇ ಹೊರತು, ಸಾಮಾನ್ಯ ಪರಿಸ್ಥಿತಿಯಲ್ಲ ಎಂದು ವಾದಿಸಿದ್ದಾರೆ.

ಮುಂಬೈ, ಹೈದರಾಬಾದ್ ಮುಂತಾದ ಇತರ ಪ್ರಮುಖ ನಗರಗಳ ನಿವಾಸಿಗಳು ಸಹ ತಮ್ಮ ಮನೆಯ ದಿನಸಿ ಬಜೆಟ್‌ಗಳನ್ನು ಈ ಪೋಸ್ಟ್ ಅಡಿಯಲ್ಲಿ ಹಂಚಿಕೊಳ್ಳುವ ಮೂಲಕ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ. ಹೆಚ್ಚುತ್ತಿರುವ ವೆಚ್ಚ ಮತ್ತು ದಿನಸಿ ಬೆಲೆಗಳ ಬಗ್ಗೆ ಈ ಘಟನೆ ಭಾರಿ ಚರ್ಚೆಗೆ ಕಾರಣವಾಗಿರುವುದಂತೂ ನಿಜ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+