Bengaluru Traffic: ಟ್ರಾಫಿಕ್‌ನಿಂದ ರಾಜಧಾನಿಗೆ ವರ್ಷಕ್ಕೆ ನಷ್ಟವಾಗುತ್ತಿರೋದು ಎಷ್ಟು ಸಾವಿರ ಕೋಟಿ ರೂಪಾಯಿ ಗೊತ್ತಾ?
ಸಂಚಾರ ವಿಳಂಬ, ದಟ್ಟಣೆ, ಸಿಗ್ನಲ್‌ಗಳ ನಿಲುಗಡೆ, ಸಮಯ ನಷ್ಟ, ಇಂಧನ ನಷ್ಟ ಮತ್ತು ಸಂಬಂಧಿತ ಅಂಶಗಳಿಂದಾಗಿ ಬೆಂಗಳೂರು ವರ್ಷಕ್ಕೆ ₹19,725 ಕೋಟಿ ನಷ್ಟವನ್ನು ಅನುಭವಿಸುತ್ತಿದೆ ಎಂದು ಖ್ಯಾತ ಟ್ರಾಫಿಕ್ ಮತ್ತು ಮೊಬಿಲಿಟಿ ತಜ್ಞ ಎಂಎನ್ ಶ್ರೀಹರಿ ಮತ್ತು ಅವರ ತಂಡದ ಅಧ್ಯಯನ ತಿಳಿಸಿದೆ.
ಸಾರಿಗೆಗಾಗಿ ಹಲವಾರು ಸರ್ಕಾರಗಳು ಮತ್ತು ಸ್ಮಾರ್ಟ್ ಸಿಟಿಗಳ ಸಲಹೆಗಾರರೂ ಆಗಿರುವ ಶ್ರೀಹರಿ ಅವರು ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಸಂಚಾರ ನಿರ್ವಹಣೆ, ರಸ್ತೆ ಯೋಜನೆ, ಮೇಲ್ಸೇತುವೆಗಳ ಇತರ ವಿಷಯಗಳ ಬಗ್ಗೆ ಶಿಫಾರಸುಗಳೊಂದಿಗೆ ವರದಿಯನ್ನು ಸಲ್ಲಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಸಂಪೂರ್ಣವಾಗಿ ಕಾರ್ಯ ನಿರ್ವಹಿಸುವ 60 ಮೇಲ್ಸೇತುವೆಗಳು ಇದ್ದರೂ ಸಿಗ್ನಲ್‌ನಲ್ಲಿ ನಿಲುಗಡೆ, ವೇಗವಾಗಿ ಚಲಿಸುವ ವಾಹನಗಳಿಗೆ ತೊಂದರೆ, ವಿಳಂಬ, ದಟ್ಟಣೆ, ಇಂಧನ ನಷ್ಟ, ಪ್ರಯಾಣಿಕರ ಸಮಯದಿಂದ ಐಟಿ ಹಬ್ ರಸ್ತೆ ಬಳಕೆದಾರರಿಗೆ ₹ 19,725 ಕೋಟಿ ನಷ್ಟವಾಗಿದೆ ಎಂದು ಅಧ್ಯಯನ ತಿಳಿಸಿದೆ.
ವಾಹನದ ಸಮಯದ ನಷ್ಟ, ಇಂಧನ ನಷ್ಟ, ಉದ್ಯೋಗಿಗಳ ಸಮಯ ನಷ್ಟವನ್ನು ಸಂಬಳದ ಆಧಾರದ ಮೇಲೆ ಹಣವಾಗಿ ಪರಿವರ್ತಿಸಿದಾಗ ಈ ಇಷ್ಟು ಸಾವಿರ ಕೋಟಿ ನಷ್ಟವಾಗಿದೆ ಎಂದು ಹೇಳಲಾಗಿದೆ.
1.5 ಕೋಟಿ ವಾಹನಗಳು
ಐಟಿ ವಲಯದಲ್ಲಿ ಹೆಚ್ಚಿದ ಉದ್ಯೋಗದ ಬೆಳವಣಿಗೆಯು ವಸತಿ, ಶಿಕ್ಷಣದಂತಹ ಎಲ್ಲಾ ಸಂಬಂಧಿತ ಸೌಲಭ್ಯಗಳ ಬೆಳವಣಿಗೆಗೆ ಕಾರಣವಾಗಿದೆ. ಇದರಿಂದ ಬೆಂಗಳೂರಿನ ಜನಸಂಖ್ಯೆ 1.45 ಕೋಟಿ ದಾಟಿದೆ. ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ 1.5 ಕೋಟಿ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಬೆಂಗಳೂರು ನಗರ ಸದ್ಯ 985 ಚದರ ಕಿಲೋಮೀಟರ್‌ಗೆ ವಿಸ್ತರಿಸಿದ್ದು, ಇದನ್ನು 1,100 ಚದರ ಕಿಲೋಮೀಟರ್‌ಗಳಿಗೆ ವಿಸ್ತರಿಸಲು ಪ್ರಸ್ತಾಪಿಸಲಾಗಿದೆ. ನಗರ ವೇಗವಾಗಿ ಬೆಳವಣಿಗೆ ಆಗುತ್ತಿರುವಾಗ ಅದಕ್ಕೆ ತಕ್ಕಂತೆ ರಸ್ತೆಗಳ ಅಭಿವೃದ್ಧಿಯಾಗುತ್ತಿಲ್ಲ ಎಂಂದು ಹೇಳಲಾಗಿದೆ. ಸದ್ಯ ರಸ್ತೆಗಳ ಒಟ್ಟು ಉದ್ದ ಸುಮಾರು 11,000 ಕಿಲೋಮೀಟರ್‌ಗಳಾಗಿದ್ದು, ಇದು ನಮ್ಮ ಸಾರಿಗೆ ಬೇಡಿಕೆ ಮತ್ತು ಮಾಡಿದ ಪ್ರವಾಸಗಳನ್ನು ಪೂರೈಸಲು ಸಾಕಾಗುವುದಿಲ್ಲ ಎಂದು ವರದಿ ಹೇಳಿದೆ.
ಜನಸಂಖ್ಯೆಯ ಹೆಚ್ಚಳ ಮತ್ತು ಉದ್ಯೋಗ ಸಾಮರ್ಥ್ಯದ ವೇಗವು ಮೂಲ ಸೌಕರ್ಯಗಳ ಬೆಳವಣಿಗೆ ಜೊತೆ ಹೊಂದಾಣಿಕೆಯಾಗುತ್ತಿಲ್ಲ. ಅಂತರದ ಕೊರತೆಯು ವಿಳಂಬ, ದಟ್ಟಣೆ, ಹೆಚ್ಚಿನ ಪ್ರಯಾಣದ ಸಮಯ ಮತ್ತು ನೇರ ಮತ್ತು ಪರೋಕ್ಷ ವೆಚ್ಚದ ದೃಷ್ಟಿಯಿಂದ ಭಾರಿ ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ.
ಸಾರ್ವಜನಿಕ ಸಂಪರ್ಕ ಬಳಕೆ ಹೆಚ್ಚಿಸಲು ಸಲಹೆ
ನಗರದ ರೇಡಿಯಲ್, ಔಟ್‌ವರ್ಡ್ ಮತ್ತು ಸಾಂದರ್ಭಿಕ ಬೆಳವಣಿಗೆಗೆ ಹೊಂದಿಕೆಯಾಗುವಂತೆ ರಸ್ತೆಗಳನ್ನು ನಿರ್ಮಿಸುವ ಅಗತ್ಯವಿದೆ ಎಂದು ಶ್ರೀಹರಿ ಹೇಳಿದ್ದಾರೆ. ಒಂದು ಅಥವಾ ಎರಡು ರಿಂಗ್ ರಸ್ಯೆಗಳ ಮಾರ್ಗಗಳ ಜೊತೆಗೆ ನಗರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳು ಮತ್ತು ಮೆಟ್ರೋ ರೈಲಿನ ಸುತ್ತಲೂ ರಸ್ತೆ ಸಂಚಾರಕ್ಕೆ ಪೂರಕವಾಗುವಂತೆ ರಸ್ತೆ ಮಾರ್ಗ ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದರು.
ಬೆಂಗಳೂರಿನ ಸಾರಿಗೆ ಜಾಲವನ್ನು ಬೆಂಬಲಿಸಲು ಅಸ್ತಿತ್ವದಲ್ಲಿರುವ ಸಿಆರ್ ಎಸ್ [ಕಮ್ಯೂಟರ್ ರೈಲ್ ಸಿಸ್ಟಮ್] ಅನ್ನು ಭಾರತೀಯ ರೈಲ್ವೇ ಸಹ ಅನುಮತಿಸಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.
ದಟ್ಟಣೆಯನ್ನು ನಿವಾರಿಸಲು, ರಸ್ತೆಗಳು ಸಂಚಾರಕ್ಕೆ ಮತ್ತು ಫುಟ್‌ಪಾತ್‌ಗಳು ಕಾನೂನುಬದ್ಧವಾಗಿ ಪಾದಚಾರಿಗಳ ನಡಿಗೆಗೆ ಮೀಸಲಾಗಿರುವುದರಿಂದ ರಸ್ತೆ ಬದಿಯ ಪಾರ್ಕಿಂಗ್ ಅನ್ನು ತೆಗೆದುಹಾಕಬೇಕು ಎಂದು ಹೇಳಿದೆ.
ಮುಂದಿನ 25 ವರ್ಷಗಳಲ್ಲಿ ಬೆಂಗಳೂರಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಟ್ರಾಫಿಕ್ ಸರಾಗಗೊಳಿಸುವ ಸಲುವಾಗಿ ಶ್ರೀಹರಿ ಮತ್ತು ಅವರ ತಂಡವು ಮೆಟ್ರೋ, ಮೊನೊರೈಲ್, ಹೆಚ್ಚಿನ ಸಾಮರ್ಥ್ಯದ ಬಸ್‌ಗಳಂತಹ ಸಮೂಹ ಸಾರಿಗೆಯನ್ನು ಹೆಚ್ಚಿಸಲು ಮತ್ತು ಖಾಸಗಿ ಸಾರಿಗೆ ವ್ಯವಸ್ಥೆಯನ್ನು ಕಡಿಮೆ ಮಾಡುವಂತೆ ಶಿಫಾರಸು ಮಾಡಿದೆ.
ಮುಂದಿನ 10 ವರ್ಷಗಳಲ್ಲಿ ವೈಮಾನಿಕ ಸಾರಿಗೆಗೆ ಉತ್ತೇಜನ ನೀಡುವಂತೆಯೂ ಸಲಹೆ ನೀಡಿದೆ. ಈ ಗುರಿಯನ್ನು ಪೂರೈಸಲು, ಖಾಸಗಿ ವಾಹನಗಳ ಓಡಾಟವನ್ನು ಕಡಿಮೆ ಮಾಡಬೇಕು ಮತ್ತು ಸಾರ್ವಜನಿಕ ಸಮೂಹ ಸಾರಿಗೆಯನ್ನು ಪ್ರೋತ್ಸಾಹಿಸಬೇಕು ಎಂದು ವರದಿ ಹೇಳಿದೆ.












Click it and Unblock the Notifications