ಬೆಂಗಳೂರು ESI ವೈದ್ಯಕೀಯ ಕಾಲೇಜು ಪ್ರಾಧ್ಯಾಪಕರ ವರ್ಗಾವಣೆ; ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ

ಬೆಂಗಳೂರಿನ ಇಎಸ್ಐಸಿ ವೈದ್ಯಕೀಯ ಕಾಲೇಜು ಪ್ರಾಧ್ಯಾಪಕರು ಮತ್ತು ಪಿಜಿಐಎಂಎಸ್ಆರ್‌ನ ವೈದ್ಯರ ಸಾಮೂಹಿಕ ವರ್ಗಾವಣೆಯನ್ನು ಖಂಡಿಸಿ ಇಎಸ್ಐ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಬುಧವಾರ (ಮೇ 24) ಪ್ರತಿಭಟನೆ ನಡೆಸಿದರು.

ವೈದ್ಯಕೀಯ ಕಾಲೇಜು ವೈದ್ಯರ ಸಾಮೂಹಿಕ ವರ್ಗಾವಣೆಯಿಂದ ದಶಕದ ಅಡಿಪಾಯ ನಾಶವಾಗಿದೆ. ಇದೇನಾ ಉತ್ತಮ ಆಡಳಿತ? ರೋಗಿಗಳು ಮತ್ತು ವಿದ್ಯಾರ್ಥಿಗಳ ಬಗ್ಗೆ ಯಾರು ಕಾಳಜಿ ವಹಿಸುತ್ತಾರೆ ಎಂದು ವೈದ್ಯಕೀಯ ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.

Medical Students Protest

ಮೇ 20, 2023ರಂದು ಹೊರಡಿಸಲಾದ ಸಾಮಾನ್ಯ ವರ್ಗಾವಣೆ ಆದೇಶವನ್ನು ಮರುಪರಿಶೀಲಿಸುವಂತೆ ವೈದ್ಯಕೀಯ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಬೆಂಗಳೂರಿನ ರಾಜಾಜಿನಗರದಲ್ಲಿರುವ ಇಎಸ್ಐಸಿ ವೈದ್ಯಕೀಯ ಕಾಲೇಜು ಮತ್ತು ಪಿಜಿಐಎಂಎಸ್ಆರ್‌ನಿಂದ ಶೇ.100ರಷ್ಟು ಖಾಯಂ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ.

ಈ ವರ್ಗಾವಣೆಯು ನಮ್ಮ ಶೈಕ್ಷಣಿಕ ವಿದ್ಯಾಭ್ಯಾಸದ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ. ಇದೇ ವೇಳೆ ನಮ್ಮ ಕಾಲೇಜಿಗೆ ಸದ್ಯದಲ್ಲಿಯೇ ಎನ್‌ಎಂಸಿ ತಪಾಸಣೆಯನ್ನು ನಿಗದಿಪಡಿಸಲಾಗಿದೆ. ಅನುಮತಿಸಲಾದ ಯುಜಿ ಸೀಟುಗಳನ್ನು ಮಾನ್ಯತೆ ಪಡೆದ ಸ್ಥಾನಗಳಿಗೆ ಪರಿವರ್ತಿಸಬೇಕು. ಈ ವರ್ಗಾವಣೆ ಆದೇಶವು ಎನ್‌ಎಂಸಿ ನಿಯಮಗಳ ಪ್ರಕಾರ ಯುಜಿ ಸೀಟುಗಳ ಮಾನ್ಯತೆಗೆ ಧಕ್ಕೆ ತರಬಹುದು ಎಂದು ವೈದ್ಯಕೀಯ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Medical Students Protest

ಬೆಂಗಳೂರು ಇಎಸ್ಐಯ ವರ್ಗಾವಣೆ ನೀತಿಯು ಸಂಪೂರ್ಣ ಗೊಂದಲಮಯವಾಗಿದೆ. ಉದ್ಯೋಗಿಗಳನ್ನು ತಮ್ಮ ವೃತ್ತಿಪರ ಅಗತ್ಯಗಳನ್ನು ಪರಿಗಣಿಸದೆ, ಸುತ್ತಾಡಿಸುತ್ತಿದ್ದಾರೆ. ಇದನ್ನು ಶೀಘ್ರವಾಗಿ ಮರು ಪರಿಶೀಲಿಸಬೇಕಾಗಿದೆ ಎಂದು ಆಗ್ರಹಿಸಿದರು.

ಚೆನ್ನೈನಲ್ಲೂ ಪ್ರತಿಭಟನೆ

ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಇಎಸ್‌ಐಸಿ ವೈದ್ಯಕೀಯ ಕಾಲೇಜು ಮತ್ತು ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸ್ನಾತಕೋತ್ತರ ಸಂಸ್ಥೆಯ ಸುಮಾರು 500 ಯುಜಿ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಇಎಸ್‌ಐಸಿ ಕೇಂದ್ರ ಕಚೇರಿಯಿಂದ 36 ಪ್ರಾಧ್ಯಾಪಕರನ್ನು ವರ್ಗಾವಣೆ ಮಾಡಿರುವುದನ್ನು ಖಂಡಿಸಿ ಚೆನ್ನೈನ ಕೆ.ಕೆ. ನಗರದ ಕ್ಯಾಂಪಸ್‌ನಲ್ಲಿ ಫಲಕ ಹಿಡಿದು ಮೆರವಣಿಗೆ ನಡೆಸಿದರು.

ಹೊಸ ವಿದ್ಯಾರ್ಥಿಗಳಿಗೆ ಅಂಗರಚನಾಶಾಸ್ತ್ರ, ಶರೀರಶಾಸ್ತ್ರ ಮತ್ತು ಜೀವ ರಸಾಯನಶಾಸ್ತ್ರ ಪಾಠ ಮಾಡುವ ಖಾಯಂ ಶಿಕ್ಷಕರನ್ನು ಬೆಂಗಳೂರಿನ ಇಎಸ್‌ಐಸಿ ವೈದ್ಯಕೀಯ ಕಾಲೇಜಿಗೆ ವರ್ಗಾಯಿಸಲಾಗಿದೆ. ಅಲ್ಲಿಂದ ಸಿಬ್ಬಂದಿಯನ್ನು ಚೆನ್ನೈ ಕ್ಯಾಂಪಸ್‌ಗೆ ವರ್ಗಾವಣೆ ಮಾಡಲಾಗಿದೆ ಎಂದು ವೈದ್ಯಕೀಯ ವಿದ್ಯಾರ್ಥಿಗಳು ಆರೋಪಿಸಿದರು.

ಐಎಸ್ಐಸಿ ಸಂಸ್ಥೆಯ ಉಪ ಪ್ರಾಂಶುಪಾಲರು, ರಿಜಿಸ್ಟ್ರಾರ್ ಸೇರಿದಂತೆ 70ಕ್ಕೂ ಹೆಚ್ಚು ವೈದ್ಯರನ್ನು ವರ್ಗಾವಣೆ ಮಾಡಲಾಗಿದೆ. ಸೇವಾ ನಿಯಮದ ಪ್ರಕಾರ ಇದು ಮಾಮೂಲಿ ವರ್ಗಾವಣೆ ಎಂದು ಇಎಸ್‌ಐಸಿ ಆಡಳಿತ ಮಂಡಳಿ ಸಮರ್ಥಿಸಿಕೊಂಡಿದೆ. ಆದರೆ, ಶೈಕ್ಷಣಿಕ ವರ್ಷದ ಮಧ್ಯದಲ್ಲಿ ವರ್ಗಾವಣೆ ಮಾಡಲು ಸಾಧ್ಯವಿಲ್ಲ ಎಂದು ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.

"ನಾವು ವಿದ್ಯಾರ್ಥಿಗಳ ದೂರುಗಳು ಮತ್ತು ಕುಂದುಕೊರತೆಗಳನ್ನು ಸ್ವೀಕರಿಸಿದ್ದೇವೆ. ನಾವು ಅವುಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸುತ್ತೇವೆ," ಎಂದು ಐಎಸ್ಐಸಿ ಹಿರಿಯ ಆಡಳಿತಾಧಿಕಾರಿ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+