ಬೆಂಗಳೂರಿನಲ್ಲಿ ದಸರಾ ವೈಭವ: ಸಿಲಿಕಾನ್ ಸಿಟಿಯಲ್ಲಿ ಹೇಗಿತ್ತು ನಾಡಹಬ್ಬ ಸಂಭ್ರಮ ..?
ಬೆಂಗಳೂರು, ಅಕ್ಟೋಬರ್ 25: ಮಂಗಳವಾರ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಜೃಂಭಣೆಯ ಜಂಬೂಸವಾರಿ ನೆರವೇರಿದರೆ, ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಅದ್ಧೂರಿಯಾಗಿ ದಸರಾ ಉತ್ಸವ ನೆರವೇರಿತು. ಜಗಮಗಿಸುವ ವಿದ್ಯುತ್ ಅಲಂಕಾರ ಜೊತೆಗೆ ಸಿಂಗಾರಗೊಂಡ ಪಲ್ಲಕ್ಕಿಗಳನ್ನು ಕಂಡ ಜನರು ಅದ್ಧೂರಿ ಮೆರವಣಿಯನ್ನು ಕಣ್ತುಂಬಿಕೊಂಡರು.
ಬೆಂಗಳೂರು ದಸರಾ ಉತ್ಸವ ಸಮಿತಿ ವತಿಯಿಂದ ಅವೆನ್ಯೂ ರಸ್ತೆ, ಚಿಕ್ಕಪೇಟೆ ಸುತ್ತಮುತ್ತ ವಿವಿಧ ಕಲಾತಂಡಗಳ ಜೊತೆಗೆ ಕೃತಕ ಆನೆಯ ಮೇಲೆ ಚಾಮುಂಡೇಶ್ವರಿ ವಿಗ್ರಹ ಕೂರಿಸಿ ಮೆರವಣಿಗೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಈ ಉತ್ಸವ ಆರಂಭವಾಗಿದ್ದೇಗೆ..?
ಈಗೀನ ಜೆಸಿ ನಗರ ಆಗ ಮುನಿರೆಡ್ಡಿಪಾಳ್ಯ ಅಂತ ಕರೆಯಲಾಗುತ್ತಿತ್ತು. ಈ ಮುನಿರೆಡ್ಡಿ ಪಾಳ್ಯದಲ್ಲಿ ಮೈಸೂರು ಸಂಸ್ಥಾನದ ಯೋಧರ ಕ್ಯಾಂಪ್ ಇತ್ತು. ಇದೇ ಜಾಗದಲ್ಲಿ ಯೋಧರಿಗೆ ತರಬೇತಿ ನೀಡಲಾಗುತ್ತಿತ್ತು. ಅಲ್ಲಿ ಇದ್ದ ಬಹುತೇಕ ಯೋಧರ ಮರಾಠರು ಹಾಗೂ ರಜಪುತರು. 1914ರಲ್ಲಿ ಬ್ರಿಟಿಷರು ಹಾಗೂ ಜರ್ಮನ್ ನಡುವೆ ಯುದ್ಧ ಆರಂಭವಾಯಿತು. ಆಗ ಬ್ರಿಟಿಷರು ಮೈಸೂರು ರಾಜ ಆಗಿದ್ದ ನಾಲ್ವಡಿ ಕೃಷ್ಣರಾಜ ಬಹುದ್ದೂರು ಬಳಿ ಯೋಧರ ಕಳಿಸಲು ಮನವಿ ಮಾಡಿದರು.
ಬ್ರಿಟಿಷರ ಮನವಿ ಒಪ್ಪಿ ಯೋಧರು ಹಾಗೂ ಸೇನಾ ಸಾಮಾಗ್ರಿ ಕಳಿಸಲು ತಿಳಿಸಿದ್ದ ಒಡೆಯರು. ಕೃಷ್ಣರಾಜ ಬಹುದ್ದೂರು ಸೂಚನೆಯಂತೆ ತೆರಳು ಸಿದ್ದರಾದ ಸಾವಿರಾರು ಯೋಧರು, ಹೋಗುವ ಮುನ್ನ ಮುನಿರೆಡ್ಡಿ ಪಾಳ್ಯದಲ್ಲಿದ್ದ ದೇಗುಲದಲ್ಲಿ ಪೂಜೆ ಸಲ್ಲಿಸಿ, ಮುನೇಶ್ವರ ಸ್ವಾಮಿ ಬಳಿ ಹರಕೆ ಹೊತ್ತು ತೆರಳಿದ್ದರು. ಸುಮಾರು ನಾಲ್ಕು ವರ್ಷಗಳ ನಡೆದ ಯುದ್ಧದಲ್ಲಿ ಕೊನೆಗೆ ಬ್ರಿಟಿಷರು ಗೆಲ್ಲುತ್ತಾರೆ. ಯುದ್ಧದಲ್ಲಿ ಮೈಸೂರು ಸಂಸ್ಥಾನದಿಂದ ತೆರಳಿದ್ದ ಕೆಲ ಯೋಧರು ಮೃತರಾಗಿದ್ದರು. 1918ರಲ್ಲಿ ಗೆದ್ದು ವಾಪಸ್ ಬಂದ ಯೋಧರ ಅದ್ಧೂರಿ ವಿಜಯೋತ್ಸವ ಆಚರಣೆ ಮಾಡಿದರು.

ಗುಂಡು ಮುನೇಶ್ವರ ಸ್ವಾಮಿಯನ್ನು ವಿಜಯದಶಮಿ ದಿನ ಹೆಗಲಮೇಲೆ ಹೊತ್ತು ಮೆರವಣಿಗೆ ಮಾಡಿದರು. ಜೊತೆಗೆ ಗುಂಡು ಮುನೇಶ್ವರ ಸ್ವಾಮಿ ತಂಗಿ ಮಹೇಶ್ವರಿ ಅಮ್ಮನನ್ನು ಹೆಗಲ ಮೇಲೆಹೊತ್ತು ಮೆರವಣಿಗೆ ಮಾಡಿದರು. ಚಾಮುಂಡಿ ದೇವಿಯ ಮತ್ತೊಂದು ಅವಾತರ ಮಹೇಶ್ವರಿ ಅಂತ ಎಂಬ ನಂಬಿಕೆ ಇದ್ದು ಜೊತೆಗೆ ಸುತ್ತಮುತ್ತಲ ಹಳ್ಳಿಯ ಜನರು ನಾವು ಸೇರುತ್ತೇವೆ ಎಂದು ವಿಜಯೋತ್ಸವದಲ್ಲಿ ಭಾಗಿಯಾದರು.
ಮೈಸೂರು ಮಹಾರಾಜ ಸಹಕಾರದಿಂದ ವಿಜಯೋತ್ಸವ ನಡೆದಿತ್ತು. ಇವರ ನಂತರ ಬಂದ ಜಯಚಮಾರಾಜೇಂದ್ರ ಒಡೆಯರದ ಕೂಡ ಯೋಧರಿಗೆ ಸಾಕಷ್ಟು ಸಹಾಯ ಮಾಡಿದರು. ಹೀಗಾಗಿ ಒಡೆಯರ್ ಮರಣದ ನಂತರ ಪ್ರತಿ ವರ್ಷ ಬನ್ನಿ ಪೂಜೆಗೂ ಮುನ್ನ ಅವರ ಮೂರ್ತಿ ಮೆರವಣಿಗೆ ಮಾಡಲಾಗುತ್ತದೆ. ಜಯಚಮಾರಾಜೇಂದ್ರ ಒಡೆಯರ್ ಮೂರ್ತಿ ಮೆರವಣಿಗೆ ನಂತರ ಬನ್ನಿ ಪೂಜೆ ಆಗುತ್ತದೆ. ಬನ್ನಿ ಪೂಜೆ ನಂತರ ಉತ್ಸವ ಮೂರ್ತಿಗಳ ಮೆರವಣಿಗೆ ಮಾಡಲಾಗುತ್ತದೆ.
ಇನ್ನು ಜೆ.ಸಿ. ನಗರದಲ್ಲಿ ಇಂದು ನಡೆಯುತ್ತಿರುವ 110ನೇ ವರ್ಷದ ದಸರಾ ಸಂಭ್ರಮದಲ್ಲಿ ಸಿಲಿಕಾನ್ ಸಿಟಿಯ ಜನರು ಮಿಂದೆದ್ದರು. ಮುನಿರೆಡ್ಡಿಪಾಳ್ಯ ಅಂತಾ ಕರೆಯಲ್ಪಡುವ ಈ ಏರಿಯಾದಲ್ಲಿ ಹಿಂದೆ ಮೈಸೂರು ಸಂಸ್ಥಾನದ ಯೋಧರ ಕ್ಯಾಂಪ್ ಇದ್ದಿದ್ದರಿಂದ ಈ ಏರಿಯಾದಲ್ಲಿ ಪ್ರತಿವರ್ಷ ದಸರಾ ನಡೆಸುತ್ತಿದ್ದು, ಸುಮಾರು 100 ಪಲ್ಲಕ್ಕಿಗಳು ದಸರಾಗೆ ಮೆರವಣಿಗೆಗೆ ಮೆರಗು ತುಂಬಿತು.












Click it and Unblock the Notifications