Bengaluru Traffic: ಬೆಂಗಳೂರಿನಲ್ಲಿ ಫುಟ್‌ರೆಸ್ಟ್‌ನಲ್ಲಿ ಮಗುವಿನೊಂದಿಗೆ ಸ್ಕೂಟರ್ ಸವಾರಿ; ದಂಪತಿಗಳ ವಿರುದ್ಧ ಆಕ್ರೋಶ
ವಾಹನ ಚಾಲನೆ ಮಾಡುವಾಗ ಸಾಕಷ್ಟು ಜಾಗ್ರತೆ ವಹಿಸಬೇಕು. ಚೂರು ಹೆಚ್ಚು ಕಡಿಮೆ ಆದರೂ ಅಪಘಾತ ಆಗುವ ಅಪಾಯ ಹೆಚ್ಚಿರುತ್ತದೆ. ಬೆಂಗಳೂರಿನಂತಹ ನಗರಗಳಲ್ಲಿ ವಾಹನ ದಟ್ಟಣೆ ಹೆಚ್ಚಿರುವಾಗ ಇನ್ನಷ್ಟು ಜಾಗ್ರತೆ ಅಗತ್ಯ, ಆದರೆ ಈ ದಂಪತಿಗಳು ಬೆಂಗಳೂರಿನ ರಸ್ತೆಯಲ್ಲಿ ತಮ್ಮ ಮಗುವಿನ ಜೀವದ ಜೊತೆ ಚಲ್ಲಾಟವಾಡಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ದಂಪತಿಗಳು ತಮ್ಮ ಮಗುವಿನೊಂದಿಗೆ ಸ್ಕೂಟರ್ ಸವಾರಿ ಮಾಡುತ್ತಿದ್ದು, ಮಗುವನ್ನು ಮಹಿಳೆಯ ಪಕ್ಕ ಫುಟ್‌ರೆಸ್ಟ್‌ನಲ್ಲಿ ನಿಲ್ಲಿಸಿಕೊಂಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

ವಿಡಿಯೋಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಕೂಡ ಪ್ರತಿಕ್ರಿಯೆ ನೀಡಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು, ಪೋಷಕರ ಬೇಜವಾಬ್ದಾರಿ ನಡವಳಿಕೆ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತಪಡಿಸಿದ್ದಾರೆ.
ಎಕ್ಸ್ ಬಳಕೆದಾರರು ಹಂಚಿಕೊಂಡಿರುವ ವಿಡಿಯೋವನ್ನು ವೈಟ್‌ಫೀಲ್ಡ್‌ನಲ್ಲಿ ರೆಕಾರ್ಡ್ ಮಾಡಲಾಗಿದೆ ಎಂದು ಹೇಳಲಾಗಿದೆ. ನಗರದಲ್ಲಿ ಅತಿ ಹೆಚ್ಚು ಟ್ರಾಫಿಕ್ ಇರುವ ರಸ್ತೆಗಳಲ್ಲಿ ಇದು ಕೂಡ ಒಂದಾಗಿದೆ.
ವೈರಲ್ ಆಗಿರುವ ವೀಡಿಯೋದಲ್ಲಿ, ತೀವ್ರ ಬೆಂಗಳೂರಿನ ಟ್ರಾಫಿಕ್ ನಡುವೆ ವ್ಯಕ್ತಿ ಸ್ಕೂಟರ್ ಓಡಿಸುತ್ತಿರುವುದನ್ನು ಕಾಣಬಹುದು. ಅವನ ಹಿಂದೆ ಕುಳಿತಿದ್ದ ಮಹಿಳೆ ತನ್ನ ಪಕ್ಕದ ಫುಟ್‌ರೆಸ್ಟ್‌ನಲ್ಲಿ ಅಸ್ಥಿರವಾಗಿ ನಿಂತಿದ್ದ ಮಗನನ್ನು ಒಂದು ಕೈಯಿಂದ ಹಿಡಿದಿದ್ದರು.
Idiots on the road 🤬@blrcitytraffic @BlrCityPolice please take action. pic.twitter.com/tAN9BxTHiS
— 𝗟 𝗼 𝗹 𝗹 𝘂 𝗯 𝗲 𝗲 (@Lollubee) April 15, 2024
ರಸ್ತೆಯ ಮೇಲೆ ಮೂರ್ಖರು!
ರಸ್ತೆಯ ಮೇಲೆ ಮೂರ್ಖರು, ದಯವಿಟ್ಟು ಕ್ರಮ ತೆಗೆದುಕೊಳ್ಳಿ ಎಂದು ಬೆಂಗಳೂರು ಸಂಚಾರ ಪೊಲೀಸರನ್ನು ಟ್ಯಾಗ್ ಮಾಡಿ ಮನವಿ ಮಾಡಲಾಗಿದೆ.
ನೆಟ್ಟಿಗರು ದಂಪತಿಗಳ ಬೇಜವಾಬ್ದಾರಿ ನಡವಳಿಕೆಯನ್ನು ಟೀಕಿಸಿದ್ದಾರೆ. ಮಗುವಿನ ಜೀವವನ್ನೇ ಅಪಾಯಕ್ಕೆ ಸಿಲುಕಿಸಿದ ಮಹಿಳೆಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಓರ್ವ ಬಳಕೆದಾರರು ಒತ್ತಾಯಿಸಿದ್ದಾರೆ
ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಟ್ರಾಫಿಕ್ ಪೊಲೀಸರು ದಂಪತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ವೈಟ್‌ಫೀಲ್ಡ್ ಸಂಚಾರ ಪೊಲೀಸ್ ಠಾಣೆಗೆ ಟ್ಯಾಗ್ ಮಾಡಿದ್ದಾರೆ. ಎಕ್ಸ್‌ನಲ್ಲಿ ಈ ವಿಡಿಯೋ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ.ಮಗು ಜೀವದ ಜೊತೆ ಚೆಲ್ಲಾಟ!












Click it and Unblock the Notifications