ಎನ್‌ಜಿಟಿ ಆದೇಶ ಜಾರಿಯಾದರೆ ಬೆಂಗಳೂರಿನ ಶೇ.95ರಷ್ಟು ಕಟ್ಟಡ ನೆಲಸಮ
ಬೆಂಗಳೂರು, ಜನವರಿ 21: ಎನ್‌ಜಿಟಿ ಆದೇಶ ಜಾರಿಯಾದರೆ ಬೆಂಗಳೂರಿನ ಶೇ.95 ರಷ್ಟು ಕಟ್ಟಡಗಳನ್ನು ನೆಲಸಮ ಮಾಡಬೇಕಾಗುತ್ತದೆ ಎಂದು ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್ ಗೆ ತಿಳಿಸಿದೆ.
2016ರ ಎನ್‌ಜಿಟಿ ಆದೇಶ ಪಾಲನೆ ಮಾಡಿದರೆ ಬೆಂಗಳೂರಿನ ಬಹುತೇಕ ಕಟ್ಟಡಗಳು ನಾಶವಾಗುತ್ತದೆ. ಅಷ್ಟೇ ಅಲ್ಲದೆ ಸಂತ್ರಸ್ತರಿಗೆ 3 ಲಕ್ಷ ಕೋಟಿ ಪರಿಹಾರ ನೀಡಬೇಕಾಗುತ್ತದೆ ಎಂದು ರಾಜ್ಯ ಸರ್ಕಾರ ಮೂರನೇ ಹಂತದ ರಾಜಕಾಲುವೆ ಪ್ರತಿ ಮನೆ ಕಟ್ಟಡದ ಮುಂದೆ ಇದೆ. ಎನ್‌ಜಿಟಿ ಆದೇಶ ಪಾಲಿಸಿದರೆ ಕೆಲವು ನಿವೇಶನ ಹಾಗೂ ಮನೆಗಳನ್ನು ಬಿಟ್ಟು ಉಳಿದವುಗಳನ್ನು ಕೆಡವಬೇಕಾಗುತ್ತದೆ ಎಂದು ತಿಳಿಸಿದೆ.ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
ಕೆರೆಗಳು ಹಾಗೂ ರಾಜಕಾಲುವೆಗಳ ಸುತ್ತಮುತ್ತ ಇನ್ನುಮುಂದೆ ಕಟ್ಟಡಗಳ ನಿರ್ಮಾಣಕ್ಕೆ ಒಪ್ಪಿಗೆ ಕೊಡಬಾರದು ಎಂದು ಎನ್‌ಜಿಟಿ 2016 ಮೇ ತಿಂಗಳಲ್ಲಿ ಆದೇಶ ಹೊರಡಿಸಿತ್ತು. ಕೆರೆಯ ಅಂಚಿನಿಂದ 75 ಮೀಟರ್ ಅಂದರೆ 225 ಅಡಿ ದೂರದ ಪರಿಧಿ ಯನ್ನು ಬಫರ್ ಜೋನ್ ಅಥವಾ ಹಸಿರು ವಲಯ ಎಂದೂ ಆದೇಶದಲ್ಲಿ ತಿಳಿಸಲಾಗಿತ್ತು.

ಎರಡೂ ರಾಜಕಾಲುವೆಗಳನ್ನು ಸೇರುವ ಮೂರನೇ ಶ್ರೇಣಿಯ ಕಾಲುವೆಗಳ ಎಡ ಮತ್ತು ಬಲದಲ್ಲಿ 25 ಮಿಟರ್ ಬಿಡಬೇಕು ಎಂದು ಸೂಚಿಸಲಾಗಿತ್ತು. ಇದರ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ನ ಮೊರೆ ಹೋಗಿದೆ. ಈ ಕುರಿತು ನ್ಯಾಯಮೂರ್ತಿ ಎಕೆ ಸಿಕ್ರಿ ಅವರಿರುವ ತ್ರಿಸದಸ್ಯ ಪೀಠಕ್ಕೆ ರಾಜ್ಯ ಸರ್ಕಾರದ ವಕೀಲರಾದ ಉದಯ್ ಹೊಳ್ಳ ಅವರು ಲಿಖಿತ ಹೇಳಿಕೆ ಸಲ್ಲಿಸಿದ್ದಾರೆ.












Click it and Unblock the Notifications