Census in Holidays: ಬೆಂಗಳೂರಿನಲ್ಲಿ ರಜಾ ದಿನಗಳಲ್ಲೂ ಗಣತಿ ಕಾರ್ಯ, ಗೈರಾದರೆ ಬೀಳುತ್ತೆ ಕೇಸ್

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ರಾಷ್ಟ್ರೀಯ ಜನಗಣತಿ 2027 ನಡೆಸಲಾಗುತ್ತಿದೆ. ಈ ಸಂಬಂಧ ಅಗತ್ಯ ಅಧಿಕಾರಿಗಳು, ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ಅವರನ್ನು ಗಣತಿ ಕಾರ್ಯಕ್ಕೆ ನಿಯೋಜಿಸಲಾಗಿದೆ. ತರಬೇತಿಗಾಗಲಿ, ಗಣತಿಗಾಗಲಿ ಗೈರಾದರೆ ಕ್ರಿಮಿನಲ್ ಮೊಕದ್ದಮೆ ಹಾಕುವುದಾಗಿ ಎಚ್ಚರಿಸಿದ್ದ ಜಿಬಿಎ ಇದೀಗ ಮತ್ತೊಂದು ನಿರ್ಧಾರ ಕೈಗೊಂಡಿದೆ. ಸರ್ಕಾರ ರಜಾ ದಿನಗಳಲ್ಲೂ ಗಣತಿ ನಡೆಸಲು ಮುಂದಾಗಿದೆ.

ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಮಾಹಿತಿ ನೀಡಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳ ರಾಷ್ಟ್ರೀಯ ಜನಗಣತಿ-2027ರ ಮೊದಲ ಹಂತ ಮನೆ-ಮನೆಗೆ ಭೇಟಿ ನೀಡಿ ಮನೆ ಪಟ್ಟಿ ಸಿದ್ದಪಡಿಸುವ ಕಾರ್ಯವು 16ನೇ ಏಪ್ರಿಲ್ 2026 ರಿಂದ ಪ್ರಾರಂಭವಾಗಿದೆ. ಎಲ್ಲ ಪಾಲಿಕೆಗಳಲ್ಲಿಯೂ ಗಣತಿದಾರರು ಹಾಗೂ ಮೇಲ್ವಿಚಾರಕರು ಸಕ್ರಿಯವಾಗಿ ಸುಧಾರಿಸಿ, ಮನೆ ಗಣತಿ ಹಾಗೂ ಮನೆ ಪಟ್ಟಿ ಕಾರ್ಯವನ್ನು ನಡೆಸುತ್ತಿದ್ದಾರೆ.

Bengaluru Census 2027

ಸರ್ಕಾರಿ ರಜಾ ದಿನಗಳಲ್ಲೂ ಗಣತಿ ಕಾರ್ಯ

ಮುಂದುವರಿದು, 2026 ಏಪ್ರಿಲ್ 19 ರಂದು ಭಾನುವಾರ ಸಾರ್ವತ್ರಿಕ ರಜೆ ಹಾಗೂ ಏಪ್ರಿಲ್ 20 ರಂದು ಸಾಂಸ್ಕೃತಿಕ ನಾಯಕರಾದ ವಿಶ್ವಗುರು ಬಸವಣ್ಣ ರವರ ಜಯಂತಿ ದಿನವು ಸರ್ಕಾರಿ ರಜೆ ಇದೆ. ಈ ಎರಡೂ ರಜಾ ದಿನಗಳಲ್ಲಿಯೂ ಗಣತಿದಾರರು ಹಾಗೂ ಮೇಲ್ವಿಚಾರಕರು ಎಂದಿನಂತೆ ಮನೆ ಗಣತಿ ಕಾರ್ಯವನ್ನು ನಡೆಸಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

GBA Voters List: 369 ವಾರ್ಡ್‌ಗಳಲ್ಲಿದ್ದಾರೆ 88.95 ಲಕ್ಷ ಮತದಾರರು; ಅಂತಿಮ ಪಟ್ಟಿ ಅಂಕಿ ಸಂಖ್ಯೆ ಇಲ್ಲಿದೆ
GBA Voters List: 369 ವಾರ್ಡ್‌ಗಳಲ್ಲಿದ್ದಾರೆ 88.95 ಲಕ್ಷ ಮತದಾರರು; ಅಂತಿಮ ಪಟ್ಟಿ ಅಂಕಿ ಸಂಖ್ಯೆ ಇಲ್ಲಿದೆ

ನಗರದ ಎಲ್ಲಾ ನಾಗರಿಕರು/ಸಾರ್ವಜನಿಕರು ಮನೆ ಗಣತಿ ಕಾರ್ಯಕ್ಕಾಗಿ ಬರುವ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ಸಹಕರಿಸುವಂತೆ ಜಿಬಿಎ ಕೋರಿದೆ.

ಗಣತಿ: ಗೈರು ಹಾಜರಾತಿಗೆ ಶಿಸ್ತು ಕ್ರಮ: ಕೆ.ಎನ್.ರಮೇಶ್

ಮನೆಪಟ್ಟಿ ಮತ್ತು ಮನೆಗಣತಿ ಕಾರ್ಯಕ್ಕೆ ಇದುವರೆಗೆ ನಿಯೋಜಿಸಲ್ಪಟ್ಟಿರುವ ಗಣತಿ ಬ್ಲಾಕ್ ಹಾಗೂ ಸೂಪರ್ವೈಸರ್ ಸರ್ಕಲ್ ಗಳಲ್ಲಿ ಕರ್ತವ್ಯಕ್ಕೆ ಹಾಜರಾಗದ ಗಣತಿದಾರರು ಮತ್ತು ಮೇಲ್ವಿಚಾರಕರ ವಿರುದ್ಧ ಜನಗಣತಿ ಕಾಯ್ದೆಯ 1948ರ ಸೆಕ್ಷನ್- 11ರ ನಿಯಮಗಳ ಪ್ರಕಾರ, ಯಾವುದೇ ಜನಗಣತಿ ಅಧಿಕಾರಿ ಅಥವಾ ಜನಗಣತಿ ಕಾರ್ಯದಲ್ಲಿ ಸಹಾಯ ಮಾಡಲು ಕಾನೂನಿನ ಪ್ರಕಾರ ಕರೆಯಲ್ಪಟ್ಟ ಯಾವುದೇ ವ್ಯಕ್ತಿ. ಈ ಕಾಯ್ದೆ ಅಥವಾ ಅದರ ಅಡಿಯಲ್ಲಿ ಮಾಡಲಾದ ಯಾವುದೇ ನಿಯಮಗಳಿಂದ ವಿಧಿಸಲ್ಪಟ್ಟ ಕರ್ತವ್ಯವನ್ನು ನಿರಾಕರಿಸಿದರೆ, ಅಥವಾ ಮತ್ತೊಬ್ಬ ವ್ಯಕ್ತಿ ಅಂತಹ ಕರ್ತವ್ಯವನ್ನು ನಿರ್ವಹಿಸುವುದನ್ನು ತಡೆಯುವ ಅಥವಾ ಅಡ್ಡಿಪಡಿಸುವುವವರಿಗೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದುಬೆಂಗಳೂರು ದಕ್ಷಿಣ ನಗರ ಪಾಲಿಕೆ ಸದಸ್ಯ ಕೆ.ಎನ್.ರಮೇಶ್ ಎಚ್ಚರಿಸಿದ್ದಾರೆ.

* ಗೈರುಹಾಜರಾತಿ ಅವಧಿಯನ್ನು ಡೈಸ್-ನಾನ್ (Dies-Non) ಎಂದು ಪರಿಗಣಮೆ
* ಸೇವಾ ನಿಯಮಾವಳಿಯಂತೆ ಶಿಸ್ತು ಕ್ರಮ ಹಾಗೂ ಕಾನೂನು ಕ್ರಮ
* ಅಗತ್ಯವಿದ್ದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅವಕಾಶ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+